ಕೋಟ: ಕನ್ನಡ ಶಾಲೆಯಲ್ಲಿ ಓದಿದ, ಕೃಷಿ ಕುಟುಂಬದ ಹರಿಕೃಷ್ಣ ಮಯ್ಯಗೆ ಐಎಎಸ್ 408ನೇ ರ‍್ಯಾಂಕ್

Call us

Call us

Call us

Call us

Call us

ಕುಂದಾಪ್ರ ಡಾಟ್ ಕಾಂ ಸಂದರ್ಶನ
ಕುಂದಾಪುರ: ಆತನದ್ದು ಕುಂದಾಪುರ ಸಮೀಪದ ಮಣೂರು ಎಂಬ ಗ್ರಾಮೀಣ ಪ್ರದೇಶದ ಕೃಷಿ ಕುಟುಂಬ. ಓದಿದ್ದು ಕನ್ನಡ ಮಾಧ್ಯಮ ಶಾಲೆಯಲ್ಲಿ. ಆದಾಗ್ಯೂ ಸತತ ಪ್ರಯತ್ನದ ಮೂಲಕ ಛಲ ಬಿಡದೇ ಯುಪಿಎಸ್‌ಸಿ ಪರೀಕ್ಷೆ ಬರೆದು ೪೦೮ನೇ ರ‍್ಯಾಂಕ್‌ನೊಂದಿಗೆ ಐಎಎಸ್ ಪಾಸ್ ಮಾಡಿದ್ದಾರೆ ಮಣೂರಿನ ಯುವಕ ಹರಿಕೃಷ್ಣ ಮಯ್ಯ.

Call us

Click Here

Click here

Click Here

Call us

Visit Now

Click here

ಕೋಟ ಗ್ರಾಮದ ಮಣೂರಿನ ಮಾಧವ ಮಯ್ಯ ಹಾಗೂ ಲಲಿತ ಮಯ್ಯ ದಂಪತಿಗಳ ಪುತ್ರರಾದ ಹರಿಕೃಷ್ಣ ಮಯ್ಯ ಈ ಪರಿಸರದಲ್ಲೇ ಮೊದಲ ಭಾರಿಗೆ ಐಪಿಎಸ್ ಪಾಸ್ ಮಾಡಿ ತನ್ನೂರಿಗೆ ಕೀರ್ತಿ ತಂದಿದ್ದಾರೆ. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮಣೂರು ರಾಮಪ್ರಸಾದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಹೈಸ್ಕೂಲ್ ಹಾಗೂ ಪದವಿಪೂರ್ವ ಶಿಕ್ಷಣವನ್ನು ಕೋಟ ವಿವೇಕಾ ಜೂನಿಯರ್ ಕಾಲೇಜಿನಲ್ಲಿ, ಬಿಎ ಪದವಿಯನ್ನು ಬೆಂಗಳೂರಿನ ಶೇಶಾದ್ರಿಪುರಂ ಪದವಿ ಕಾಲೇಜಿನಲ್ಲಿ ಮುಗಿಸಿದ್ದ ಅವರು ಮುಂದೆ ಮನಶಾಸ್ತ್ರದಲ್ಲೇ ಎಮ್‌ಎಸ್ಸಿ ಪಡೆದು ಎರಡು ವರ್ಷ ನಿಮಾನ್ಸ್‌ನಲ್ಲಿ ಜೂನಿಯರ್ ರೀಸರ್ಚರ್ ಆಗಿ ಕೆಲಸ ಮಾಡಿದ್ದರು. ಕುಂದಾಪ್ರ ಡಾಟ್ ಕಾಂ. ನಂತರ ಪರೀಕ್ಷೆಗೆ ತಯಾರಿ ನಡೆಸುವ ಸಲುವಾಗಿ ಕೆಲಸಕ್ಕೆ ರಾಜೀನಾಮೆ ನೀಡಿ ಐಎಎಸ್‌ಗೆ ತಯಾರಿ ನಡೆಸಿದರು. ಕೋಚಿಂಗ್, ಸ್ವ-ಅಧ್ಯಯನ ಹಾಗೂ ಗ್ರೂಪ್ ಸ್ಟಡಿ ನಿರಂತರವಾಗಿ ಪರೀಕ್ಷೆಗೆ ತಯಾರಿ ನಡೆಸಿದ್ದರು. ಈ ನಡುವೆ ಇನಸ್ಟಿಟ್ಯೂಟ್ ಆಫ್ ಏರ್ ಫೋರ್ಸ್ ಮೆಡಿಸಿನ್‌ನಲ್ಲಿ ಅರೆಕಾಲಿಕ ವೃತ್ತಿಗೆ ಸೇರಿಕೊಂಡೇ ಐಎಎಸ್ ಪರೀಕ್ಷೆಗೆ ಸಿದ್ದತೆ ಮುಂದುವರಿಸಿದ್ದರು. ಒಟ್ಟು ನಾಲ್ಕು ಬಾರಿ ಪರೀಕ್ಷೆ ಬರೆದಿದ್ದ ಹರಿಕೃಷ್ಣ ಕೊನೆಗೂ ಐಎಎಸ್‌ನಲ್ಲಿ 408ನೇ ರ‍್ಯಾಂಕ್‌ನೊಂದಿಗೆ ತೇರ್ಗಡೆ ಹೊಂದಿದ್ದಾರೆ.

ಹರಿಕೃಷ್ಣ ಮಯ್ಯ ಅವರೊಂದಿಗೆ ಕುಂದಾಪ್ರ ಡಾಟ್ ಕಾಂ ನಡೆಸಿದ ಸಂದರ್ಶನ

ಕುಂದಾಪ್ರ ಡಾಟ್ ಕಾಂ: ಯುಪಿಎಸ್‌ಸಿ ಪರೀಕ್ಷೆಯಲ್ಲಿ ರ‍್ಯಾಂಕ್ ಗಳಿಸಿದ್ದಿರಿ. ಹೇಗನ್ನಿಸುತ್ತಿದೆ?
ಮಯ್ಯ: ಐಎಎಸ್ ಪಾಸ್ ಮಾಡಬೇಕೆಂಬ ಉದ್ದೇಶದಿಂದ ನಿರಂತರವಾಗಿ ನಾಲ್ಕನೇ ಭಾರಿ ಪ್ರಯತ್ನಿಸಿ ಸಫಲನಾಗಿದ್ದೇನೆ. ನಮ್ಮ ಊರಿನಿಂದ ಈ ಪರೀಕ್ಷೆಯನ್ನು ಪಾಸ್ ಮಾಡಿದ ಮೊದಲನೇಯವನು ಎಂಬ ಹೆಮ್ಮೆಯಿದೆ. ಮನೆಯಲ್ಲಿ ಹೆತ್ತವರು, ಸೋದರರು ಇನ್ನು ಹೆಚ್ಚು ಖುಷಿಯಲ್ಲಿದ್ದಾರೆ. ಇನ್ನು ಎರಡು ಬಾರಿ ಪರೀಕ್ಷೆ ಬರೆಯಲು ಅವಕಾಶವಿದ್ದು ಹೆಚ್ಚಿನ ರ‍್ಯಾಂಕ್ ಗಳಿಸಲು ಪ್ರಯತ್ನ ಮಾಡುತ್ತೇನೆ.

ಕುಂದಾಪ್ರ ಡಾಟ್ ಕಾಂ: ಐಎಎಸ್ ಪರೀಕ್ಷೆ ಬರೆಯಲು ಕಾರಣವೇನು?
ಮಯ್ಯ: ಮೊದಲಾಗಿ ನನ್ನ ಅಣ್ಣ ಈ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಲು ಪ್ರೇರೇಪಿಸಿದರು. ಕರಾವಳಿ ಮಾಮೂಲಾಗಿ ಎಂಜಿನಿಯರಿಂಗ್ ಹಾಗೂ ಮೆಡಿಕಲ್ ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ನಾನು ಬಿಎ ಪದವಿ ಪಡೆದು ಕ್ಷೇತ್ರಕ್ಕೆ ಬರಲು ತವಕಿಸುತ್ತಿದ್ದೆ. ಅದರಂತೆ ಕನಸು ಕೈಗೂಡಿದೆ.

Call us

ಕುಂದಾಪ್ರ ಡಾಟ್ ಕಾಂ: ಗ್ರಾಮೀಣ ಪ್ರದೇಶದವರಾದ ತಮಗೆ ಪರೀಕ್ಷೆ ಎದುರಿಸಲು ಇದ್ದ ಸವಾಲುಗಳೇನು?
ಮಯ್ಯ: ಗ್ರಾಮೀಣ ಪ್ರದೇಶದಲ್ಲಿರುವುದರಿಂದ ಆಡಳಿತ ಸೇವೆಗೆ ಸೇರಲು ಬೇಕಾದ ಹೆಚ್ಚಿನ ಮಾಹಿತಿಯ ಕೊರತೆ ಇದೆ. ಆದ್ದರಿಂದ ನಾಲ್ಕು ಬಾರಿ ಪ್ರಯತ್ನಿಸಬೇಕಾಯಿತು. ಸರಿಯಾದ ಮಾಹಿತಿ ಇದ್ದಲ್ಲಿ ಇದಕ್ಕೂ ಮೊದಲೇ ತೇರ್ಗಡೆ ಹೊಂದುವ ಸಾಧ್ಯತೆ ಇತ್ತು. ಐಎಎಸ್ ಎಂದರೆ ಕೆಲವರಿಗೆ ಒಂದು ಭಯವಿದೆ. ನಿಜವಾಗಿಯೂ ಆ ಭಯ ಬೇಡ ಸರಿಯಾದ ಸಿದ್ದತೆ ಮಾಡಿಕೊಂಡರೆ ಸುಲಭವಾಗಿ ಉತ್ತಿರ್ಣರಾಗಬಹುದು. ಕಠಿಣ ಪರಿಶ್ರಮದೊಂದಿಗೆ ತಾಳ್ಮೆ ತುಂಬಾ ಅಗತ್ಯ. ಅಲ್ಲದೇ ಓದುವ ಸಮಯದಲ್ಲಿ ಬೇರೆ ಬೇರೆ ಚಟುವಟಿಕೆಯಲ್ಲಿ ತೊಡಕೊಳ್ಳಬೇಕು. ಆಗ ಮನಸ್ಸು ಹಗುರವಾಗಿ ಓದಲು ಸಹಕಾರಿಯಾಗುತ್ತದೆ.

ಕುಂದಾಪ್ರ ಡಾಟ್ ಕಾಂ: ಹೇಗೆ ಸಿದ್ದತೆ ನಡೆಸಿದಿರಿ?
ಮಯ್ಯ: ಮೊದಲು ದಿನಕ್ಕೆ 5-6 ಘಂಟೆ ತಯಾರಿ ಮಾಡುತ್ತಿದ್ದೆ. ಪರೀಕ್ಷೆಯ ಸಮಯದಲ್ಲಿ ಸುಮಾರು 9-10 ಅಧ್ಯಯನ ನಡೆಸುತ್ತಿದ್ದೆ. ಇಂತಹ ಪರೀಕ್ಷೆಯಲ್ಲಿ ಸಂದರ್ಶನಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ನಮ್ಮ ಸ್ವವಿವರಗಳ ಮಾಹಿತಿ ಮೊದಲೇ ನೀಡಿರುವುದರಿಂದ ಅದರಲ್ಲೇ ಇರುವ ಮಾಹಿತಿಗೆ ಅನುಗುಣವಾಗಿ ಪ್ರಶ್ನೆಯನ್ನು ಕೇಳಲಾಗಿತ್ತು. ಸಂದರ್ಶನಕ್ಕೆ ಸಾಮಾನ್ಯವಾದ ಅಭ್ಯಾಸ ಮಾಡಿದ್ದೆ. ನನಗಿಂತ ಮುಂಚೆ ಕೆಲವು ಸ್ನೇಹಿತರು ಸಂದರ್ಶನಕ್ಕೆ ಹಾಜರಾಗಿದ್ದರಿಂದ ಈ ಭಾರಿ ಸಮರ್ಥವಾಗಿ ಎದುರಿಸಲು ಸಾಧ್ಯವಾಯಿತು. ಸಂದರ್ಶನದ ತಯಾರಿಗೆ ದೆಹಲಿಯ ಕರ್ನಾಟಕ ಭವನದಲ್ಲಿ ಕರ್ನಾಟಕದ ಹಿರಿಯ ಐಎಎಸ್ ಅಧಿಕಾರಿಗಳು ಸ್ವಪ್ರೇರಣೆಯಿಂದ ನಮಗೆ ಪೂರ್ವತಯಾರಿ ನಡೆಸಿದ್ದರು. ಅಣಕು ಸಂದರ್ಶನ ಮೊದಲಾದ ತರಬೇತಿಗಳನ್ನು ನೀಡಿರುವುದು ನಮಗೆ ಸಹಕರಾರಿಯಾಯಿತು.

ಸತತ ಪರಿಶ್ರಮ, ಕೈಗೊಳ್ಳುವ ಕಾರ್ಯದ ಬಗೆಗೆ ಶ್ರದ್ಧೆ ಹಾಗೂ ಆಸಕ್ತಿ ಇದ್ದರೇ ಸಾಧನೆಗೆ ಯಾವುದೂ ಅಡ್ಡಿಯಾಗುವುದಿಲ್ಲ ಎಂದು ತೋರಿಸಿ ಹಲವರಿಗೆ ಪ್ರೇರಣೆಯಾಗಿದ್ದಾರೆ ಕನ್ನಡ ಮಾಧ್ಯಮ ಶಾಲೆಯಲ್ಲಿ ಕಲಿತ ಕೃಷಿ ಕುಟುಂಬದ ಯುವಕ.

ಸಂದರ್ಶನ ಸಹಕಾರ: ರಮೇಶ್ ಭಟ್ ಕೋಟೇಶ್ವರ

► ಯುಪಿಎಸ್‌ಸಿ ಪರೀಕ್ಷೆ: ಕುಂದಾಪುರ ಮೂಲದ ನಿವ್ಯಾ ಶೆಟ್ಟಿಗೆ 274ನೇ ರ‍್ಯಾಂಕ್ –http://kundapraa.com/?p=14038 .

Leave a Reply

Your email address will not be published. Required fields are marked *

twenty − seventeen =