ಕುಂದಾಪುರ

DSC03873

ಕುಂದಗನ್ನಡದ ತವರು ಕುಂದಾಪುರ ಉಡುಪಿ ಜಿಲ್ಲೆಯ ಪ್ರಮುಖ ತಾಲೂಕುಗಳಲ್ಲೊಂದು. ಇದು ಜಿಲ್ಲೆಯ ಇತರೆಲ್ಲಾ ಭಾಗಗಳಿಗಿಂತ ವಿಭಿನ್ನವಾದ ಸಂಸ್ಕೃತಿಯನ್ನು ಹೊಂದಿರುವ ಪ್ರದೇಶ. ಅಚ್ಚಗನ್ನಡದ ಭಾಷೆ (ಕುಂದಾಪುರ ಕನ್ನಡ) ನಾಡಿನಲ್ಲಿಯೇ ವಿಶಿಷ್ಟವಾದದ್ದು. ಶಿಕ್ಷಣ, ಕಲೆ, ಸಾಹಿತ್ಯ, ಕ್ರೀಡೆ, ಸಾಂಸ್ಕೃತಿಕ, ಧಾರ್ಮಿಕ ಹಾಗೂ ರಾಜಕೀಯ ರಂಗಕ್ಕೆ ಹಲವಾರು ಧೀಮಂತರನ್ನು ಪರಿಚಯಿಸಿದ ಕೀರ್ತಿ ಇಲ್ಲಿನದು. ಪಂಚಗಂಗಾವಳಿ, ಮರವಂತೆ, ಒತ್ತಿನಣೆ, ಕೊಡಚಾದ್ರಿ ಆನೆಝರಿ, ಮಲ್ಯಾಡಿ, ಸೋಮೆಶ್ವರ, ಅಬ್ಬಿಫಾಲ್ಸ್ ಮುಂತಾದ ಸ್ಥಳಗಳು ಇಲ್ಲಿನ ನಿಸರ್ಗ ಸೌಂದರ್ಯವನ್ನು ಇಮ್ಮಡಿಗೊಳಿಸಿದ್ದರೆ, ಇಲ್ಲಿನ ಧಾರ್ಮಿಕ ಕ್ಷೇತ್ರಗಳು ಅನನ್ಯತೆಯ ದ್ಯೋತಕಗಳಾಗಿ ಉಳಿದಿವೆ.

kundapra.com_kundeshwara temple kundapura1

Call us

Call us

ಪೋರ್ಚುಗೀಸರು ಕುಂದಾಪುರಕ್ಕೆ ಕಾಲಿಡುವ ಮೊದಲು ಕುಂದಾಪುರ ಕುಂದವರ್ಮನೆಂಬ ತುಂಡರಸನ ಆಧಿಪತ್ಯಕ್ಕೆ ಸೇರಿತ್ತು. ಶ್ರೀ ಕುಂದೇಶ್ವರ ಕುಂದವರ್ಮನ ಮನೆದೇವರು. ಇತ ನಿರ್ಮಿಸಿದ ಕುಂದೇಶ್ವರ ದೇವಾಲಯದಿಂದ ಈ ಊರಿಗೆ ‘ಕುಂದಾಪುರ’ ಎಂಬ ಹೆಸರು ಬಂದಿದೆ ಎಂದು ಹಲವಾರು ಗ್ರಂಥಗಳು ಉಲ್ಲೇಖಿಸಿವೆ. ಇನ್ನು ಕೆಲವರು ಊರಿನ ಸುತ್ತ ಮುತ್ತ ಯಥೇಛ್ಛವಾಗಿ ಬೆಳೆಯುವ ಮಲ್ಲಿಗೆ (ಕುಂದ) ಹೂವಿನಿಂದಾಗಿ ಈ ಹೆಸರು ಬಂದಿದೆಯೆಂದು ಹೇಳುತ್ತಾರೆ. ಉಳಿದಂತೆ ಮನೆ ಕಟ್ಟುವ ಸಾಮಗ್ರಿಗಳಲ್ಲಿ ಒಂದಾದ ಕಂಬ (ಕುಂದ) ಎಂಬ ಪದದಿಂದಲೂ ಕುಂದಾಪುರ ಎಂಬ ಹೆಸರು ಬಂದಿದೆಯೆಂದು ಹೇಳಲಾಗುತ್ತದೆ.
16 ಶತಮಾನದಲ್ಲಿ ಪೋರ್ಚುಗೀಸರು ಇಲ್ಲಿಗೆ ಬಂದು ನೆಲೆಸಿ ಅನೇಕ ಕೋಟೆಗಳನ್ನು ನಿರ್ಮಿಸಿದ್ದಾರೆ. ವಿಜಯನಗರ ಸಾಮ್ರಾಜ್ಯದ ಪತನದ ನಂತರ ಬಲಿಷ್ಠರಾದ ‘ಕೆಳದಿ ರಾಜ’ರ ಪ್ರಮುಖವಾರ ಬಂದರು ಹತ್ತಿರದ ಬಸ್ರೂರಿನಲ್ಲಿತ್ತು. ಆಗ ಸಮೀಪದ ಬಸ್ರೂರು ಪ್ರಮುಖ ಪಟ್ಟಣವಾಗಿದ್ದು, ಕ್ರಮೇಣ ಬಸ್ರೂರು ತನ್ನ ಪ್ರಾಮುಖ್ಯತೆಯನ್ನು ಕಳೆದುಕೊಂಡು, ಕುಂದಾಪುರ ಪ್ರಮುಖ ಪಟ್ಟಣವಾಗಿ ಬೆಳೆಯಿತು. 1799 ರಲ್ಲಿ ಟಿಪ್ಪು ಸುಲ್ತಾನನ ಅವಸಾನದ ನಂತರ ಬ್ರಿಟಿಷರು ಕುಂದಾಪುರವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡರು ಎಂದು ಇತಿಹಾಸ ತಿಳಿಸುತ್ತದೆ.
ಉತ್ತರಕ್ಕೆ ಪಂಚಗಂಗಾವಳಿ ನದಿ, ಪೂರ್ವಕ್ಕೆ ಕಲಾರ ನದಿ, ಪಶ್ಚಿಮಕ್ಕೆ ಸಮುದ್ರ ಮುಟ್ಟುವ ಮುನ್ನ ಕೋಡಿ ಹಿನ್ನಿರು ಹೀಗೆ ಮೂರು ಬದಿ ಯಲ್ಲೂ ನೀರನ್ನು ಹೊಂದಿರುವ ಕುಂದಾಪುರ ಉಡುಪಿಯಿಂದ 34 ಕಿ.ಮೀ. ದೂರದಲ್ಲಿದೆ. ಸುಮಾರು 11.84 ಚ.ಕೀ. ವಿಸ್ತೀರ್ಣವುಳ್ಳ ಕುಂದಾಪುರ, ಸಮುದ್ರಮಟ್ಟಕ್ಕೆ 26 ಅಡಿ ಎತ್ತರದಲ್ಲಿದೆ.
ಕುಂದಾಪುರ ಪುರಸಭೆಯ ಆಡಳಿತಕ್ಕೆ ಒಳಪಟ್ಟಿದ್ದು, ಎರಡು ವಿಧಾನಸಭಾ ಕ್ಷೇತ್ರ ಹಾಗೂ ಒಂದು ಲೋಕಸಭಾ ಕ್ಷೇತ್ರವನ್ನು ಒಳಗೊಂಡಿದೆ.
ಶಿರೂರು, ಬೈಂದೂರು, ಮರವಂತೆ, ಗಂಗೊಳ್ಳಿ, ಕೊಟೇಶ್ವರ, ಬಸ್ರೂರು, ಸಿದ್ದಾಪುರ ಹಾಲಾಡಿ ಶಂಕರನಾರಾಯಣ ಮುಂತಾದವುಗಳು ತಾಲೂಕಿನ ಪ್ರಮುಖ ಗ್ರಾಮಗಳೆನಿಸಿದೆ.

Wiki Source:

Kundapura (Coondapur) (Kundapur) is a coastal town in the Indian state of Karnataka. A taluk of the Udupi district, and 36 km (22 mi) from Udupi city, Kundapura is administered by Kundapura Town Municipal Council.
The name Kundapura can be traced to the Kundeshvara temple built by Kundavarma in the vicinity of the Panchagangavalli river The name of the town may be derived from Kundavarma who ruled the area. Kunda means ‘pillar’ in Kannada,[1] which refers to the traditional method of constructing houses. Pura means town. Kundapura is surrounded by water from three sides. To the north lies the Panchagangavali river. To the east lies the Kalaghar river. To the west lie the Kodi back waters and the Arabian Sea, leaving the south side as the main connecting land mass. All connecting roads to Kundapura enter the city from southern direction. North side of the town is vast backwaters of Panchagangavali river and a bridge has been constructed across it .

ಕುಂದಾಪುರ ತಾಲೂಕಿನ ಪ್ರಮುಖ ನಗರಗಳು

ಬೈಂದೂರು

ಬಸ್ರೂರು

ಶಂಕರನಾರಾಯಣ

ವಂಡ್ಸೆ

ಅಮಾಸೆಬೈಲು

ಕೊಲ್ಲೂರು

ಕುಂದಾಪ್ರ ಡಾಟ್ ಕಾಂ – editor@kundapra.com

One thought on “ಕುಂದಾಪುರ

  1. ಕೃಷ್ಣಾ ನಿನ್ನೆ ನಂಬಿ ಜೀವನ ನಡೆಸುತ್ತಿದ್ದೇನೆ, ಸ್ವಲ್ಪ ಹಿಂದೆ ಬುದ್ದಿ ಇಲ್ಲದೆ ಅಜ್ಞಾನದಿಂದ ನಾನೇ ಬುದ್ದಿವಂತನೆಂದು ನಿನ್ನನ್ನು ನಿಂದನೆ ಮಾಡಿದ ಫಲ ಇಂದು ಅನುಭವಿಸುತ್ತಿರುವೆನು. ತಪ್ಪಾಯಿತು ನನ್ನದು ಕ್ಷಮಿಸು ದೊರೆಯೆ ನೀನು ಕೈಬಿಟ್ಟರೆ ನನ್ನನು ಯಾರು ಪಲಿಸುವರು ಹರಿಯೆ. ನಿನ್ನ ಭಕ್ತರ ಪಾದದಧೂಳು ನನ್ನ ಹಣೆಯ ಮೇಲೆ ಇರಲಿ ಸದಾ. ನಾನೆಂದು ನಿನ್ನನ್ನು ಮರೆಯದಂತೆ ನಂಗೆ ನಿನ್ನಮೆಲೆ ಸದಾ ಭಕ್ತಿ ಕೊಟ್ಟು ಪಾಲಿಸುವುದು ಹರಿಯೆ. ಆಗಿದ್ದು ಆಯಿತು ಅದರ ಬಗ್ಗೆ ಚಿಂತೆ ಬಿಟ್ಟು ಮುಂದೆ ಸಾಗಬೇಕು, ಮುಂದೆ ಬರುವ ದಿನಗಳಲ್ಲಿ ನಿನ್ನ ಭಕ್ತನಾಗಲು ಬೇಕಾಗುವ ಒಳ್ಳೆಯ ಜ್ಞಾನ ಆಯುಷ್ಯ ಆರೋಗ್ಯ ಐಶವರ್ಯ, ಸದಾ ಎಲ್ಲರಿಗೂ ಒಳ್ಳೆಯದನ್ನೇ ಬಯಸುವ ಮನಸ್ಥಿತಿ, ಮತ್ತು ಇನ್ನೊಬ್ಬರು ಬಗ್ಗೆ ದೂರು ಹೇಳದಂತೆ ಅವರು ನಂಗೆ ತೊಂದರೆ ಕೊಟ್ಟರು ಪರ್ವಾಗಿಲ್ಲ ಅವರಿಗೆ ನಾನು ಕೆಟ್ಟದ್ದು ಬಯಸದೆ ನಾನು ಅವರನ್ನು ಪ್ರೀತಿಸುವ ಹಾಗೆ ನನ್ನನ್ನು ಕರುಣಿಸು. ಅದಲ್ಲದೆ ನನಗೆ ಯಾವ ಅಹಂಕಾರವು ಬಾರದ ಹಾಗೆ ನೋಡಿಕೋ ತಂದೆ.
    ಆಚಾರ್ಯ ಮಧ್ವರೆ ನೀವು ನನ್ನ ತಾಯಿ ನನ್ನ ತಂದೆ ನನ್ನ ಪರಮ ಗುರುಗಳು. ಮತ್ತು ನನ್ನ ಸಹೋದರ ನನ್ನ ಆತ್ಮೀಯ ಗೆತಿಯ. ನಿಮ್ಮಲ್ಲಿ ನಾನು ಕೇಳುವುದು ನಿಷ್ಕಲ್ಮಷವಾದ ಭಕ್ತಿ, ನನಗೆ ನಿಮ್ಮ ಮೇಲೆ ಮತ್ತು ನಿಮ್ಮ ಮೇಲಿನವರ ಮೇಲೆ ಸದಾ ನಿಷ್ಲ್ಮಶವಾಗಿಲ್ಲದ ಭಕ್ತಿ ಕೊಟ್ಟು ಕಾಪಾಡಿ.
    ರಾಘವೇಂದ್ರ ಗುರುಗಳೆ ನೀಮ್ಮ ಪಾದದ ಧೂಳು ಸದಾ ನನ್ನ ತಲೆ ಮೇಲೆ ಇರಲಿ. ಆಧೂಳಿನಿಂದ ನನ್ನ ಜೀವನ ಸಾರ್ಥಕವಾಗಲಿ.

Leave a Reply

Your email address will not be published. Required fields are marked *

19 − eight =