ಅಕ್ರಮ ಕಸಾಯಿಖಾನೆ: ಪೊಲೀಸರ ದಾಳಿ

Call us

Call us

ಕುಂದಾಪುರ: ತಾಲೂಕಿನ ಮಾವಿನಕಟ್ಟೆ ಜಂಕ್ಷನ್‌ ಬಳಿ ಅಕ್ರಮವಾಗಿ ಜಾನುವಾರುಗಳನ್ನು ಕೊಂದು ಮಾಂಸ ಮಾಡುತ್ತಿದ್ದ ಅಡ್ಡೆಗೆ ದಾಳಿ ನಡೆಸಿದ ಕುಂದಾಪುರ ಪೊಲೀಸರು, ಗೋ ಮಾಂಸ ಹಾಗೂ ಒಂದು ಕರುವನ್ನು ವಶಪಡಿಸಕೊಂಡಿದ್ದು, ಸ್ಥಳದಲ್ಲಿದ್ದ ಆರೋಪಿಗಳು ಪರಾರಿಯಾಗಿದ್ದಾರೆ.

Call us

Call us

Visit Now

ಮಾವಿನಕಟ್ಟೆ ಜಂಕ್ಷನ್ ಬಳಿ ಅಕ್ರಮ ಗೊಮಾಂಸ ಮಾಡುತ್ತಿದ್ದಾರೆಂಬ ಖಚಿತ ಮಾಹಿತಿ ಮೇರೆಗೆ ಕುಂದಾಪುರ ಪೊಲೀಸ್‌ ವೃತ್ತ ನಿರೀಕ್ಷಕ ದಿವಾಕರ್‌ ನೇತೃತ್ವದ ತಂಡ ದಾಳಿ ನಡೆಸಿತ್ತು. ಪೊಲೀಸರು ಬರುತ್ತಿದ್ದಾರೆಂಬ ಮಾಹಿತಿ ದೊರೆತ ಕೂಡಲೇ ಶಂಕಿತ ಆರೋಪಿಗಳಾದ ರಶೀದ್‌ ಹಾಗೂ ಇತರ ಇಬ್ಬರು ಪರಾರಿಯಾಗಿದ್ದಾರೆ. ಮಾಂಸಕ್ಕಾಗಿ ತಯಾರಿಸಿದ್ದ ಒಂದು ಕ್ವಿಂಟಾಲಿಗೂ ಅಧಿಧಿಕ ಗೋ ಮಾಂಸ, ಒಂದು ಜೀವಂತ ಕರು ಹಾಗೂ ಮೊಬೈಲ್‌, ಚೂರುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಪ್ರದೇಶ ಖಾಯಂ ಕಸಾಯಿಖಾನೆಯಾಗಿರದೇ ಗೋ ಮಾಂಸ ತಯಾರಿಕೆಗಾಗಿ ತಾತ್ಕಾಲಿಕವಾಗಿ ನಿರ್ಮಿಸಿದ ಅಡ್ಡೆಯಾಗಿತ್ತು ಎನ್ನಲಾಗಿದೆ. ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ

Click here

Call us

Call us

ಪೊಲೀಸರು ಏಕಾಏಕಿ ದಾಳಿ ನಡೆಸಿದ್ದರಿಂದ ಸ್ವಲ್ಪ ಸಮಯ ಬಿಗು ವಾತಾವರಣ ಕಂಡು ಬಂದು ಪರಿಸ್ಥಿತಿ ವಿಕೋಪಕ್ಕೆ ತಿರುಗಿತ್ತು. ಅಲ್ಲಿ ಜಮಾಯಿಸಿದ ಜನ ಮಾತಿನ ಚಕಮಕಿಗೆ ಇಳಿದರು. ಗಮನಿಸಿದ ಪೊಲೀಸರು ಅವರನ್ನು ಚದುರಿಸಲು ಲಘು ಲಾಠಿ ಪ್ರಹಾರ ನಡೆಸಿದರು. ಕುಂದಾಪುರ ಪೊಲೀಸ್‌ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Cattle1 Cattle2 Cattle3 Cattle4 Cattle5 Cattle6 Cattle7

Leave a Reply

Your email address will not be published. Required fields are marked *

7 − 7 =