ಅಕ್ರಮ ಗೋ ಸಾಗಾಟ: ಆರೋಪಿಗಳು ಪರಾರಿ

Call us

Call us

Call us

Call us

ಕುಂದಾಪುರ: ಇಲ್ಲಿನ ಕಾವ್ರಾಡಿ ಗ್ರಾಮದ ಕಂಡ್ಲೂರಿನಲ್ಲಿ ಓಮ್ನಿ ವಾಹನದಲ್ಲಿ ಅಕ್ರಮವಾಗಿ ದನಗಳನ್ನು ಸಾಗಿಸುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದ್ದು ವಾಹನದಲ್ಲಿದ್ದ ಇಬ್ಬರು ಆರೋಪಿಗಳು ಪೊಲೀಸರನ್ನು ಕಂಡೊಡನೆ ದನ ಹಾಗೂ ವಾಹನವನ್ನು ಅಲ್ಲಿಯೇ ಬಿಟ್ಟು ಪರಾರಿಯಾದ ಘಟನೆ ಇಂದು ಬೆಳಿಗ್ಗೆ ನಡೆದಿದೆ. ಆರೋಪಿಗಳಲ್ಲಿ ಒಬ್ಬ ಜಾಕೀರ್ ಹುಸೈನ್ ಎಂದು ತಿಳಿದುಬಂದಿದೆ.

Call us

Click Here

Click here

Click Here

Call us

Visit Now

Click here

ಘಟನೆಯ ವಿವರ:

ಕಂಡ್ಲೂರಿನೆಡೆಗೆ ಅಕ್ರಮವಾಗಿ ಗೋವುಗಳನ್ನು ತುಂಬಿಸಿಕೊಂಡು ತೆರಳುತ್ತಿದ್ದಾರೆಂಬ ಮಾಹಿತಿಯನ್ನಾಧರಿಸಿ ಪೊಲೀಸರು ಕಂಡ್ಲೂರಿನ ಜುಲ್ಫಾ ಸ್ಟೋರ್ ಸಮೀಪ ವಾಹನವನ್ನು ಅಡ್ಡಗಟ್ಟಿದಾಗ ಆರೋಪಿಗಳು ಏಂ ೨೦ ಂ ೨೬೦೬ ನಂಬರಿನ ಓಮ್ಮಿಯನ್ನು ಅಲ್ಲಿಯೇ ಬಿಟ್ಟು ಕಾಲ್ಕಿತ್ತಿದ್ದಾರೆ. ಪೊಲೀಸರು ಅವರನ್ನು ಬೆನ್ನಟ್ಟಿಲು ಪ್ರಯತ್ನಿಸಿದರು ಅಷ್ಟರಲ್ಲೇ ಅವರು ಪರಾರಿಯಾಗಿದ್ದರು. ಬಳಿಕ ಓಮ್ನಿ ವಾಹನವನ್ನು ಪರಿಶೀಲಿಸಿದಾಗ ಅದರಲ್ಲಿ ಒಂದು ಹೆಣ್ಣುಕರು, ಎರಡು ಗಂಡುಕರು ಹಾಗೂ ಒಂದು ದನ ಸೇರಿ ಒಟ್ಟು ನಾಲ್ಕು ಜಾನುವಾರನ್ನು ಹಿಂಸಾತ್ಮಕವಾಗಿ ಕಟ್ಟಿಹಾಕಿ ಸಾಗಿಸುತ್ತಿದ್ದದ್ದು ತಿಳಿದುಬಂದಿತ್ತು.

ವಾಹನವನ್ನು ಪೊಲೀಸರು ವಶಪಡಿಸಿಕೊಂಡು ಘಟನೆಯ ಕುರಿತು ಗೋಹತ್ಯಾ ನಿಷೇಧ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ.

Leave a Reply

Your email address will not be published. Required fields are marked *

eleven − 9 =