ಅಕ್ಷತಾ ಗಿರೀಶ್ ಅವರಿಗೆ ಸಾಧನಾಶ್ರೀ ಪ್ರಶಸ್ತಿ ಪ್ರದಾನ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಜೇಸಿಐ ಭಾರತ ವಲಯ 15ರ ವ್ಯವಹಾರ ಸಮ್ಮೇಳನ ‘ಉನ್ನತಿ’ ಇಲ್ಲಿನ ಸಹನಾ ಕನ್ವೆಕ್ಷನ್ ಹಾಲ್‌ನಲ್ಲಿ ಜರುಗಿತು.

Call us

Call us

ಈ ಸಂದರ್ಭ ಜೇಸಿಐ ಪೂವ೯ ವಲಯ ಉಪಾಧ್ಯಕ್ಷೆ , ಪತ್ರಕರ್ತೆ ಅಕ್ಷತಾ ಗಿರೀಶ್ ಅವರಿಗೆ ಸಾಧನಾಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Call us

Call us

ಅವರು, ಜೇಸಿ ಕುಂದಾಪುರದ ಪೂರ್ವ ಅಧ್ಯಕ್ಷರಾಗಿ, ಕೋಟೇಶ್ವರ ರೋಟರಿ ಕ್ಲಬ್‌ನ ಆನ್ಸ್ ಘಟಕದ ಅಧ್ಯಕ್ಷರಾಗಿ ಪ್ರಧಾನಮಂತ್ರಿ ಪ್ರಚಾರ ಪ್ರಸಾರ ಸಮಿತಿಯ ಜಿಲ್ಲಾ ಮಹಿಳಾ ಅಧ್ಯಕ್ಷರಾಗಿ, ಅನೇಕ ಸಂಘ ಸಂಸ್ಥೆಗಳಲ್ಲಿ ಸದಸ್ಯರಾಗಿ, ತರಬೇತುದಾರರಾಗಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಕಾರ್ಯಕ್ರಮದಲ್ಲಿ ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷರಾದ ಜೆಸಿ ಸದಾನಂದ ನಾವಡ, ವಲಯ ಅಧ್ಯಕ್ಷೆ ಸೌಜನ್ಯ ಹೆಗ್ಡೆ, ಸಂಯೋಜಕರಾದ ಸಮದ್ ಖಾನ್, ಉಪಾಧ್ಯಕ್ಷರಾದ ಜೆಸಿ ಗಿರೀಶ್ ಎಸ್ ಪಿ, ಜೆಸಿ ದರ್ಶಿತ್ ಶೆಟ್ಟಿ, ಜೆಸಿ ಶರತ್ ಕುಮಾರ್, ಜೆಸಿಐ ಕುಂದಾಪುರ ಅಧ್ಯಕ್ಷರಾದ ವಿಜಯ ನರಸಿಂಹ ಐತಾಳ್, ಪೂರ್ವಾಧ್ಯಕ್ಷರಾದ ವಿಷ್ಣು ಕೆ ಬಿ., ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

9 + fourteen =