ಅಟಲ್‌ಜೀ ಜನಸ್ನೇಹಿ ಕೇಂದ್ರ: ಅರ್ಜಿ ವಿಲೇವಾರಿಯಲ್ಲಿ ಕುಂದಾಪುರ ಮೊದಲು

Call us

Call us

ಸುನಿಲ್ ಬೈಂದೂರು | ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪುರ: ಅಟಲ್‌ಜೀ ಜನಸ್ನೇಹಿ ಕೇಂದ್ರಕ್ಕೆ ಸಲ್ಲಿಸಲಾಗುವ ಅರ್ಜಿಗಳನ್ನು ಸಕಾಲದಲ್ಲಿ ವಿಲೇವಾರಿ ಮಾಡಿ ಕೇಂದ್ರದಲ್ಲಿ ಶೂನ್ಯ ಅರ್ಜಿ ಸಾಧನೆಗೈದಿರುವ ಕುಂದಾಪುರ ಹೋಬಳಿಯ ಅಟಲ್‌ಜೀ ಜನಸ್ನೇಹ ಕೇಂದ್ರವು ಸಕಾಲಿಕ ವಿಲೇವಾರಿಯಲ್ಲಿ  (AJSK TImely Disposal Ranking) ರಾಜ್ಯದಲ್ಲೇ ಮೊದಲ ಪಡೆದಿದೆ.

Click here

Click Here

Call us

Call us

Visit Now

Call us

Call us

ಕೋಲಾರ ಜಿಲ್ಲೆಯ ಮುಳುಬಾಗಿಲು ಅವನಿ ದ್ವಿತೀಯ ಪಡೆದಿದ್ದರೇ, ಬಳ್ಳಾರಿ ಜಿಲ್ಲೆಯ ಶಿರುಗುಪ್ಪ ಹಚ್ಚೋಳ್ಳಿ ತೃತೀಯ ಹಾಗೂ ಉತ್ತರ ಕನ್ನಡದ ಸಿರಸಿ ಮತ್ತು ಉಡುಪಿ ತಾಲೂಕು ಅನುಕ್ರಮವಾಗಿ ಐದನೇ ಮತ್ತು ಏಳನೇ ಸ್ಥಾನ ಪಡೆದುಕೊಂಡಿದೆ. ಈ ಹಿಂದೆ ಮೂರನೇ ಸ್ಥಾನದಲ್ಲಿದ್ದ ಕುಂದಾಪುರ ಈ ಭಾರಿ ಉತ್ತಮ ಪ್ರಗತಿ ಸಾಧಿಸಿದೆ. ತಾಲೂಕಿನ ಒಟ್ಟು ಮೂರು ನಾಡ ಕಛೇರಿಗಳಲ್ಲಿ ಜನಸ್ನೇಹಿ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ.

ಕುಂದಾಪುರ ಮಿನಿವಿಧಾನಸೌಧದಲ್ಲಿ ಕಾರ್ಯಾಚರಿಸುತ್ತಿರುವ ಅಟಲ್‌ಜೀ ಜನಸ್ನೇಹಿ ಕೇಂದ್ರಕ್ಕೆ ಕಳೆದ ತಿಂಗಳಿನಲ್ಲಿ ಒಟ್ಟು 947 ಅರ್ಜಿ ಸಲ್ಲಿಕೆಯಾಗಿದ್ದವು. ಆ ಪೈಕಿ 48 ಅರ್ಜಿಗಳು ತಿರಸ್ಕೃತಗೊಂಡಿದ್ದು, ಉಳಿದ ಅಷ್ಟೂ ಅರ್ಜಿ ವಿಲೇವಾರಿಯಾಗಿದ್ದವು. ಪ್ರತಿದಿನ ಕೇಂದ್ರಕ್ಕೆ ಸಲ್ಲಿಕೆಯಾಗುವ ಹಾಗೂ ವಿಲೇವಾರಿಯಾಗುವ ಅರ್ಜಿಗಳ ಆಧಾರದ ಮೇಲೆ ಈ ರ್ಯಾಂಕಿಂಗ್ ನಿರ್ಧರಿಸಲಾಗುತ್ತದೆ. ಕುಂದಾಪ್ರ ಡಾಟ್ ಕಾಂ. ಕೇಂದ್ರಕ್ಕೆ ಜಾತಿ, ಆದಾಯ ಪ್ರಮಾಣ ಪತ್ರ ಸೇರಿದಂತೆ ಒಟ್ಟು 42 ನಮೂನೆಯ ಅರ್ಜಿಗಳಲ್ಲದೇ, ಆರ್.ಟಿ.ಸಿ, ಬೆಳೆ ಎಂಟ್ರಿ, ಜನನ ಮರಣ ಪ್ರಮಾಣ ಪತ್ರ ಹಾಗೂ ಆಧಾರ್ ಕಾರ್ಡ್‌ಗಾಗಿ ಸಾರ್ವಜನಿಕರಿಂದ ಅರ್ಜಿಗಳು ಸಲ್ಲಿಕೆಯಾಗುತ್ತವೆ. ಇಬ್ಬರು ಸಿಬ್ಬಂಧಿಗಳು ಅಟಲ್‌ಜೀ ಜನಸೇವಾ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಆಯಾ ಇಲಾಖೆಯ ಅಧಿಕಾರಿಗಳು ಶೀಘ್ರ ಸೇವೆಯನ್ನು ಒದಗಿಸುವಲ್ಲಿ ಸಾಥ್ ನೀಡುತ್ತಿದ್ದಾರೆ.  ಕೇಂದ್ರದಲ್ಲಿ ನೀಡಲಾಗುವ ಸೇವೆಗಳ ಬಗ್ಗೆ ಡಾಟಾ ಎಂಟ್ರಿ ಆಪರೇಟರ್ ಜಯರಾಮ ಪೂಜಾರಿ ಕೆಲಸದ ಬಗ್ಗೆ ತೃಪ್ತಿ ಇದೆ ಎಂದು ಹೇಳಿಕೊಂಡಿದ್ದರೇ, ತಹಶೀಲ್ದಾರ್ ಗಾಯತ್ರಿ ನಾಯತ್ ಶೀಘ್ರ ವಿಲೇವಾರಿಗೆ ಸಾಥ್ ನೀಡಿದ ಎಲ್ಲಾ ಅಧಿಕಾರಿಗಳನ್ನು ಅಭಿನಂದಿಸಿದ್ದಾರೆ.

[quote font_size=”15″ bgcolor=”#ffffff” bcolor=”#dd3333″ arrow=”yes”]ಅಟಲ್‌ಜೀ ಜನಸೇವಾ ಕೇಂದ್ರದಲ್ಲಿ ೪೨ಕ್ಕೂ ಹೆಚ್ಚು ಬಗೆಯ ಅರ್ಜಿಗಳನ್ನು ಸ್ವೀಕರಿಸಲಾಗುತ್ತದೆ. ಸಕಾಲ ಕಾಯ್ದೆಯಡಿಯಲ್ಲಿ ಕಾಲಮಿತಿಯೊಳಕ್ಕೆ ಅರ್ಜಿ ವಿಲೇವಾರಿ ಮಾಡುವುದು ನಮ್ಮ ಜವಾಬ್ದಾರಿ. ಆದರೆ ಕುಂದಾಪುರದಲ್ಲಿ ಅರ್ಜಿಯನ್ನು ನೀಡಿ ಒಂದೆರಡು ದಿನದ ಒಳಗಾಗಿ ಅರ್ಜಿ ವಿಲೇವಾರಿ ಮಾಡಲಾಗುತ್ತಿದೆ. ಕಂಪ್ಯೂಟರ್ ಆಪರೇಟರ್‌ನಿಂದ ಹಿಡಿದು ವಿಎ, ಉಪತಹಶೀಲ್ದಾರ್, ಆರ್‌ಐ, ಕೇಸ್ ವರ್ಕರ್ ಎಲ್ಲರ ಟೀಮ್ ವರ್ಕ್‌ನಿಂದ ಇದು ಸಾಧ್ಯವಾಗಿದೆ. ಕಳೆದ ಕೆಲವು ದಿನಗಳಿಂದ ಕುಂದಾಪುರ ರ‍್ಯಾಂಕಿಂಗ್‌ನಲ್ಲಿ ಮೊದಲ ಸ್ಥಾನದಲ್ಲಿಯೇ ಇದೆ. ಜೂನ್ ತಿಂಗಳಿನಲ್ಲಿಯೂ ಇದೇ ರ‍್ಯಾಂಕಿಂಗ್ ಕಾಯ್ದಿಟ್ಟುಕೊಳ್ಳುವುದು ನಮಗೆ ಸವಾಲು – ಗಾಯತ್ರಿ ನಾಯ್ಕ್, ತಹಶೀಲ್ದಾರ್ ಕುಂದಾಪುರ[/quote]

[quote font_size=”15″ bgcolor=”#ffffff” bcolor=”#1b2fc4″ arrow=”yes”]ಜಾತಿ ಪ್ರಮಾಣಪತ್ರ, ಆರ್‌ಟಸಿ ಮುಂತಾದವುಗಳನ್ನು ಪಡೆಯಲು ನಾನು ಹಲವು ಭಾರಿ ಕುಂದಾಪುರದ ಅಟಲ್‌ಜಿ ಜನಸೇವಾ ಕೇಂದ್ರಕ್ಕೆ ಬಂದಿದ್ದೇನೆ. ಪ್ರತಿ ಭಾರಿ ಬಂದಾಗಲೂ ಕೇಂದ್ರದ ಸಿಬ್ಬಂಧಿಗಳು ಸಕಾರಾತ್ಮಕವಾಗಿ ಸ್ಪಂದಿಸುತ್ತಾರೆ. ಅರ್ಜಿಗಳ ತುಂಬಲು ತಿಳಿಯದಿದ್ದರೇ ಮಾರ್ಗದರ್ಶನ ನೀಡುತ್ತಾರೆ. ಏನು ಮಾಡಬೇಕು ಎಂಬುದರ ಬಗ್ಗೆ ಸಲಹೆ ನೀಡುತ್ತಾರೆ. – ಶ್ರೀಧರ್, ಕಮ್ಮಾರಬೆಟ್ಟು ಬೀಜಾಡಿ[/quote]

Call us

Leave a Reply

Your email address will not be published. Required fields are marked *

15 − fifteen =