ಅತಿಯಾಸೆಯೇ ಹಣದುಬ್ಬರಕ್ಕೆ ಕಾರಣ: ನಿವೃತ್ತ ಲೋಕಾಯುಕ್ತ, ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ:
ಮನುಷ್ಯರಲ್ಲಿ ತೃಪ್ತಿ ದೂರವಾಗಿ, ಮಾನವೀಯ ಗುಣವೇ ಮರೆಯಾಗುತ್ತಿದೆ. ಕೇವಲ ಹಣ ಮತ್ತು ಅಧಿಕಾರಕ್ಕೆ ಬೆಲೆ ಕೊಡಲಾಗುತ್ತಿದೆ. ಸ್ವಸ್ಥ ಸಮಾಜ ನಿರ್ಮಾಣವು ಇಂದಿನ ಅಗತ್ಯವಾಗಿದೆ ಎಂದು ನಿವೃತ್ತ ಲೋಕಾಯುಕ್ತ, ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಹೇಳಿದರು.

Click Here

Call us

Call us

ಆಳ್ವಾಸ್ ಗಣರಾಜ್ಯೋತ್ಸವದ ಅಂಗವಾಗಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಕರ್ನಾಟಕ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ವಿದ್ಯಾಗಿರಿಯ ಮುಂಡ್ರುದೆಗುತ್ತು ಕೆ ಅಮರನಾಥ್ ಶೆಟ್ಟಿ ವೇದಿಕೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ’ನಾಯಕತ್ವ ತರಬೇತಿ ಕಾರ್ಯಕ್ರಮ’ದಲ್ಲಿ ಅವರು ಮಾತನಾಡಿದರು.

Click here

Click Here

Call us

Visit Now

’ಕಾನೂನಿನ ಶ್ರೇಷ್ಠತೆ ಕಾಪಾಡುವುದು ಕೇವಲ ಕೋರ್ಟ್ಗಳ ಕೆಲಸವಲ್ಲ. ಪ್ರತಿ ನಾಗರಿಕನ ಜವಾಬ್ದಾರಿ’ ಎಂದರು. ನ್ಯಾಯದಾನ ಪ್ರಕ್ರಿಯೆಯು ಬಾಹ್ಯ ಪ್ರಭಾವಿ ಅಂಶಗಳಿಂದ ಮುಕ್ತವಾಗಿರಬೇಕು. ನ್ಯಾಯಾಂಗವು ದೇಶಕ್ಕೆ ಅನೇಕ ಕೊಡುಗೆಗಳನ್ನು ನೀಡಿದೆ. ಆದರೂ, ಈಚೆಗೆ ಕೆಲವೊಮ್ಮೆ ವಿಫಲ ಹಾಗೂ ವಿಳಂಬವಾಗಿದೆ ಎಂಬ ಭಾವನೆ ಹಲವರಿಗೆ ಕಾಡಿದೆ. ಇತ್ತ ಅಪರಾಧಗಳೂ ಹೆಚ್ಚುತ್ತಿವೆ ಎಂದರು.

ಭಾರತೀಯರಿಗೆ ಸಂವಿಧಾನವೇ ಆಧಾರ. ಇದು ದೇಶದ ಧ್ಯೇಯೋದ್ದೇಶ ಹಾಗೂ ನಿಲುವುಗಳನ್ನು ಸ್ಪಷ್ಟವಾಗಿ ತಿಳಿಸುತ್ತದೆ. ಎಲ್ಲರೂ ಸಂವಿಧಾನವನ್ನು ಗೌರವಿಸಬೇಕು. ದೇಶದ ಪ್ರಗತಿಗೆ ಸಂವಿಧಾನದ ಮೂರು ಅಂಗಗಳಾದ ನ್ಯಾಯಾಂಗ, ಶಾಸಕಾಂಗ ಹಾಗೂ ಕಾರ್ಯಾಂಗ ದ ಜತೆಗೆ ಮಾಧ್ಯಮಗಳು ಪಾರದರ್ಶಕವಾಗಿ ಕೆಲಸ ನಿರ್ವಹಿಸಬೇಕು ಎಂದು ಆಶಯ ವ್ಯಕ್ತಪಡಿಸಿದರು.

ದುರಾಸೆಗೆ ಈ ಜಗತ್ತಿನಲ್ಲಿ ಔಷಧಿಯಿಲ್ಲ. ಮನುಷ್ಯನ ಅತಿಯಾಸೆಯೇ ಹಣದುಬ್ಬರಕ್ಕೆ ಕಾರಣ. ಸಂಘ?ರಹಿತ ಜೀವನವು ಇಂದಿನ ಅಗತ್ಯವಾಗಿದೆ ಎಂದರು.

Call us

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಪ್ರಜಾಪ್ರಭುತ್ವ ಎಂದು ಕರೆಸಿಕೊಳ್ಳುವ ಭಾರತದಲ್ಲಿ ಪ್ರಜೆಗಳೇ ಪ್ರಭುಗಳಾಗಿದ್ದಾರಾ? ಎನ್ನುವ ಪ್ರಶ್ನೆ ಎದುರಾಗಿದೆ. ಇಲ್ಲಿ ಕೆಲವು ರಾಜಕಾರಣಿಗಳು ತಮ್ಮ ಕರ್ತವ್ಯ ನಿರ್ವಹಿಸುವ ಬದಲಾಗಿ ಪರಸ್ಪರ ದೂಷಿಸಿಕೊಂಡು ಕಾಲಹರಣ ಮಾಡುವುದೇ ಸಮಸ್ಯೆಯಾಗಿದೆ. ಎಲ್ಲ ನಾಗರಿಕರು ’ಅಭಿಪ್ರಾಯ ನಿರೂಪಕರಾಗಿ’ ಪರಿವರ್ತನೆ ಗೊಳ್ಳಬೇಕಾದ ಅನಿವಾರ್ಯ ಎದುರಾಗಿದೆ ಎಂದರು.
ವಿದ್ಯಾರ್ಥಿಗಳ ಸಂವಿಧಾನದ ಎಲ್ಲ ಮಾಹಿತಿ ಅವಶ್ಯಕವಾಗಿ ತಿಳಿದುಕೊಂಡಿರಬೇಕು ಎಂದರು.

ಮಂಗಳೂರು ನಗರ ಪೊಲೀಸ್ ಕಮಿ?ನರ್ ಕೆ.ಶಶಿಕುಮಾರ್ ಮಾತನಾಡಿ, ದೇಶದ ಅಭಿವೃದ್ಧಿಯಲ್ಲಿ ಮಾಧ್ಯಮದ ಪಾತ್ರ ಅಪಾರ. ಭಾರತ ಸಂವಿಧಾನವು ದೇಶವನ್ನು ಆಳುವ ಸರ್ಕಾರದ ಮೂಲ ರಚನೆಯನ್ನು ನಿರ್ದಿ?ಪಡಿಸುತ್ತದೆ. ಕಾಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗ ತನ್ನದೇ ಜವಬ್ದಾರಿ ಹೊಂದಿದೆ. ಇವುಗಳ ಕಾರ್ಯವೈಖರಿಯನ್ನು ಸದಾ ಪರೀಕ್ಷಿಸುತ್ತಾ, ಜನರಿಗೆ ಉತ್ತಮವಾದದ್ದು ನಿರೀಕ್ಷಿಸುವಂತೆ ಮಾಡುವುದು, ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎಂದು ಕರೆಯಲ್ಪಡುವ ಮಾಧ್ಯಮದ ಕಾರ್ಯ ಎಂದರು.

ವಿದಾನ ಪರಿಷತ್ ಮಾಜಿ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್ ನಾಯಕತ್ವದ ಕುರಿತು ಉಪನ್ಯಾಸ ನೀಡಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ, ಆಳ್ವಾಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಇದ್ದರು. ವಿದ್ಯಾರ್ಥಿಗಳಾದ ಅಯನಾ, ಅಖಿಲಾ, ಶಶಾಂಕ್, ವೃಂದಾ, ಅಮೃತ, ಸದ್ವಿತಾ ನಿರೂಪಿಸಿದರು. ದಕ್ಷಿಣ ಕನ್ನಡದ ವಿವಿಧ ಕಾಲೇಜುಗಳಿಂದ ಆಗಮಿಸಿದ ಪದವಿಪೂರ್ವ ಹಾಗೂ ಪದವಿಯ ೧೪೦೦ಕ್ಕೂ ಅಧಿಕ ವಿದ್ಯಾರ್ಥಿಗಳು ಕಾರ‍್ಯಕ್ರಮದಲ್ಲಿ ಪಾಲ್ಗೊಂಡರು.

Leave a Reply

Your email address will not be published. Required fields are marked *

17 − 7 =