ಅದ್ದೂರಿಯಾಗಿ ಜರುಗಿದ ಕರಾವಳಿ ವಾಯ್ಸ್ ಆಫ್ ಬೈಂದೂರು ಫಿನಾಲೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕರಾವಳಿ ವಾಯ್ಸ್ ಆಫ್ ಬೈಂದೂರು ಇವರ ಆಶ್ರಯದಲ್ಲಿ ಕರಾವಳಿ ವಾಯ್ಸ್ ಆಫ್ ಬೈಂದೂರು ಇದರ ಫಿನಾಲೆ ಸ್ಪರ್ಧೆ -2019 ಬೈಂದೂರು ಗಾಂಧಿ ಮೈದಾನದಲ್ಲಿ ನಡೆಯಿತು.

ಹೋಟೆಲ್ ಅಂಬಿಕಾ ಇಂಟರ್ ನ್ಯಾಷನಲ್ ಆಡಳಿತ ನಿರ್ದೇಶಕ ಜಯಾನಂದ ಹೋಬಳಿದಾರ್ ಡ್ರಮ್ ಬಾರಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಪ್ರತಿಭಾವಂತರಿಗೆ ಸೂಕ್ತ ವೇದಿಕೆ ದೊರೆತಾಗ ಉತ್ತಮ ಸಾಧನೆ ಮಾಡಲು ಸಾಧ್ಯ. ಪಟ್ಟಣ ಪ್ರದೇಶಗಳಲ್ಲಿ ಹಲವು ಅವಕಾಶಗಳಿರುತ್ತದೆ. ಆದರೆ ಗ್ರಾಮೀಣ ಭಾಗದಲ್ಲಿ ಕಾರ್ಯಕ್ರಮ ಆಯೋಜಿಸುವುದು ಕ್ಲಿಷ್ಟಕರವಾದ ಕೆಲಸ. ಪ್ರಪ್ರಥಮ ಬಾರಿಗೆ ಬಂದೂರಿನಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯವಾಗಿದೆ. ಮುಂದಿನ ದಿನಗಳಲ್ಲಿ ಇಲ್ಲಿನ ಪ್ರತಿಭಾವಂತರು ರಾಜ್ಯಮಟ್ಟದಲ್ಲಿ ಸಾಧನೆ ಮಾಡುವಂತಾಗಲಿ ಎಂದರು.

ಮುಖ್ಯ ಅತಿಥಿಗಳಾಗಿ ಹಿನ್ನೆಲೆ ಗಾಯಕಿ ಅನನ್ಯ ಭಟ್, ಚಲನಚಿತ್ರ ನಿರ್ದೇಶಕ ಡಾ| ಸುರೇಶ್ ಚಿತ್ರಾಪು, ಬಹುಭಾಷ ಚಿತ್ರನಟ ಓಂಗುರು ಬಸ್ರೂರು, ಸಂಗೀತ ನಿರ್ದೇಶಕ ಉತ್ತಮ ಸಾರಂಗ್, ಉದ್ಯಮಿ ರಾಮ ಮೇಸ್ತ, ಶಿರೂರು ಗ್ರಾ.ಪಂ ಸದಸ್ಯರಾದ ರಘುರಾಮ ಕೆ.ಪೂಜಾರಿ, ಸಂಜೀವ ಮೊಗವೀರ, ಪರಮೇಶ್ವರ ಪೂಜಾರಿ, ಮಾಣಿಕ್ಯ ಹೋಬಳಿದಾರ್, ಅಲ್ವಿನ್ ಅಂದ್ರಾದೆ, ಉದ್ಯಮಿ ರಘುರಾಮ ಮೇಸ್ತ, ಬಂದೂರು ವಲಯ ಧ್ವನಿ ಬೆಳಕು ಸಂಘದ ಅಧ್ಯಕ್ಷ ಶಶಿಧರ ಶೆಣೈ ಉಪಸ್ಥಿತರಿದ್ದರು.

ಈ ಸಂದಭದಲ್ಲಿ ಹಿನ್ನೆಲೆ ಗಾಯಕಿ ಅನನ್ಯ ಭಟ್, ಚಲನಚಿತ್ರ ನಿರ್ದೇಶಕ ಡಾ| ಸುರೇಶ್ ಚಿತ್ರಾಪು, ಬಹುಭಾಷ ಚಿತ್ರನಟ ಓಂಗುರು ಬಸ್ರೂರು, ಸಂಗೀತ ನಿರ್ದೇಶಕ ಉತ್ತಮ ಸಾರಂಗ್, ಉದ್ಯಮಿ ಜಯಾನಂದ ಹೋಬಳಿದಾರ್‌ರವರನ್ನು ಸಮ್ಮಾನಿಸಲಾಯಿತು.

ಕರಾವಳಿ ವಾಯ್ಸ್ ಆಫ್ ಬೈಂದೂರು ಇದರ ಫಿನಾಲೆ ಸ್ಪರ್ಧೆಯಲ್ಲಿ ಲಿಷಾ ಕೊಕ್ಕರ್ಣೆ ಪ್ರಥಮ, ಗ್ರೀಷ್ಮಾ ಕಟೀಲು ದ್ವಿತೀಯ, ಧಾರಿಣಿ ಕೆ.ಎಸ್ ಕುಂದಾಪುರ ತೃತೀಯ ಸ್ಥಾನ ಪಡೆದರು. ನಾಗರಾಜ ಭಟ್ಕಳ ಕಾರ್ಯಕ್ರಮ ನಿರ್ವಹಿಸಿದರು. ಸಾತ್ವಿಕ್ ಮೇಸ್ತ ದೊಂಬೆ ವಂದಿಸಿದರು.

Leave a Reply

Your email address will not be published. Required fields are marked *

sixteen − 9 =