ಅನಂತ ಚತುರ್ದಶಿ: ದೇವಸ್ಥಾನಗಳಲ್ಲಿ ವೃತಾಚರಣೆ, ದೇವರಿಗೆ ವಿಶೇಷ ಪೂಜೆ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕೋಟೇಶ್ವರ ಶ್ರೀ ಪಟ್ಟಾಭಿ ರಾಮಚಂದ್ರ ದೇವಸ್ಥಾನದಲ್ಲಿ ಅನಂತ ಚತುರ್ದಶಿ ವೃತಾಚರಣೆ ವಿಜೃಂಭಣೆಯಿಂದ ನಡೆಯಿತು.

Call us

Call us

Call us

ಬೆಳಿಗ್ಗೆ ಶ್ರೀ ದೇವತಾ ಪ್ರಾರ್ಥನೆಯೊಂದಿಗೆ ಪ್ರಾರಂಭವಾಗಿ ಕೋಟಿ ತೀರ್ಥದಲ್ಲಿ ಗಂಗಾಪೂಜೆ, ಶೇಷಪೂಜೆ, ನಂತರ ಅನಂತ ಕಲಶವನ್ನು ಪುರಮೆರವಣಿಗೆಯೊಂದಿಗೆ ದೇವಳಕ್ಕೆ ತಂದು ಸ್ಥಾಪಿಸಿ ಕಲ್ಪೋಕ್ತ ಪೂಜೆ,ಗ್ರಂಥಿ ಪೂಜೆ ನಡೆಯಿತು. ಮಧ್ಯಾಹ್ನ ಮಹಾಪೂಜೆ, ಚತುರ್ದಶ ನಮಸ್ಕಾರಗಳು,ಮಹಾ ಸಂತರ್ಪಣೆ ನಡೆದವು. ರಾತ್ರಿ ಅಷ್ಟಾವಧಾನ ಸೇವೆ ಜರಗಿತು. ಧಾರ್ಮಿಕ ವಿಧಿವಿಧಾನ ದೇವಳದ ಅರ್ಚಕರಾದ ವೇ.ಮೂ.ಶ್ರೀನಿವಾಸ ಭಟ್ ಹಾಗೂ ವೇ.ಮೂ.ಪ್ರಶಾಂತ ಭಟ್ ನೇತೃತ್ವದಲ್ಲಿ ಶಾಸ್ತ್ರೋಕ್ತವಾಗಿ ನಡೆದವು. ಈ ಸಂಧರ್ಭದಲ್ಲಿ ದೇವಳದ ಮೋಕ್ತೇಸರರು,ಹತ್ತು ಸಮಸ್ತರು ಹಾಗೂ ಸಮಾಜ ಭಾಂದವರು ಉಪಸ್ಥಿತರಿದ್ದರು.

ಗಂಗೊಳ್ಳಿ : ಗಂಗೊಳ್ಳಿಯ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಅನಂತ ಚತುರ್ದಶೀ ವೃತಾಚರಣೆಯಂದು ಅಲಂಕೃತ ದೇವರು.

Leave a Reply

Your email address will not be published. Required fields are marked *

two × 5 =