ಅಪರಾಧ ನಡೆಯದಂತೆ ಎಚ್ಚರ ವಹಿಸುವುದು ನಮ್ಮೆಲ್ಲರ ಕರ್ತವ್ಯ: ಡಿವೈಎಸ್ಪಿ ಶ್ರೀಕಾಂತ್ ಕೆ.

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಅಪರಾಧಗಳು ಸಂಭವಿಸಿದಾಗ ಪೋಲಿಸರಿದ್ದಾರೆ ಎಂದುಕೊಳ್ಳುವ ಮೊದಲು ಅಪರಾಧ ಸಂಭವಿಸದಂತೆ ಎಚ್ಚರವಹಿಸಬೇಕಿದೆ. ಅದು ಕೂಡ ನಮ್ಮದೇ ಕರ್ತವ್ಯವೂ ಆಗಿದೆ. ಬದುಕಿನ ಭದ್ರತೆಗೆ ನೀವೆಲ್ಲರೂ ಪೋಲಿಸ್‌ನಂತೆಯೇ ಎಚ್ಚರದಲ್ಲಿ ಇರಬೇಕು ಎಂದು ಕುಂದಾಪುರ ಪೋಲಿಸ್ ಉಪಾಧೀಕ್ಷಕರಾದ ಶ್ರೀಕಾಂತ್ ಕೆ. ಹೇಳಿದರು.

Call us

ಅವರು ಬಿ.ಬಿ. ಹೆಗ್ಡೆ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ಆಯೋಜನೆಯ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ತಂತ್ರಜ್ಞಾನವನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಬದಲಾಗಿ ಅದನ್ನು ದುರುಪಯೋಗ ಮಾಡಿಕೊಳ್ಳಬಾರದು. ಅಪರಾಧಗಳು ನಮ್ಮ ಬದುಕಿನ ಕನಸನ್ನು ಕಸಿದುಕೊಳ್ಳುತ್ತವೆ. ಹಾಗಾಗಿ ಕೆಟ್ಟದನ್ನು ನಾವು ಯೋಚಿಸಬಾರದು

ಕುಂದಾಪುರ ಪೊಲೀಸ್ ಉಪನಿರೀಕ್ಷಕ ಸದಾಶಿವ ಆರ್ ಗವರೋಜಿ ಮಾತನಾಡಿ ಪ್ರಸ್ತುತ ಅನೇಕ ಹೊಸ ಹೊಸ ರೀತಿಯ ವಂಚನೆಯ ಜಾಲಗಳಿವೆ. ಅವುಗಳ ಪ್ರಚೋದನೆಗೆ ನಾವು ಒಳಗಾಗಬಾರದು ಎಂದರು.

Call us

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಪ್ರಾಂಶುಪಾಲರಾದ ಪ್ರೊ. ಕೆ. ಉಮೇಶ್ ಶೆಟ್ಟಿ ವಹಿಸಿದ್ದರು. ಸಂಚಾರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಸುಧಾ ಪ್ರಭು ಉಪಸ್ಥಿತರಿದ್ದರು.

ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಗಳಾದ ರಕ್ಷಿತ್ ರಾವ್ ಸ್ವಾಗತಿಸಿ, ಲೋನಾ ಡಿಸೋಜಾ ವಂದಿಸಿದರು. ವಿದ್ಯಾರ್ಥಿನಿ ದೀಕ್ಷಾ ಪ್ರಾರ್ಥಿಸಿ, ಉಪನ್ಯಾಸಕಿ ರೇಷ್ಮಾ ಶೆಟ್ಟಿ ನಿರೂಪಣೆ ಮಾಡಿದರು. ಪೋಲಿಸ್ ಸಿಬ್ಬಂದಿಗಳು, ಬೋಧಕ ಮತ್ತು ಬೋಧಕೇತರರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

1 × five =