ಅಪೆಕ್ಸ್ ಹಾಗೂ ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯಗಳ ನಡುವೆ ತಾಂತ್ರಿಕ ಒಪ್ಪಂದ

Call us

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ:
ಅಕಾಡೆಮಿ ಇನ್ ಪರ್ಸ್ಯೂಟ್ ಆಫ್ ಇಂಜಿನಿಯರಿಂಗ್ ಎಕ್ಸಲೆನ್ಸ್ (ಅಪೆಕ್ಸ್) ಮತ್ತು ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯ, ಮೂಡುಬಿದಿರೆ ನಡುವೆ ತಾಂತ್ರಿಕ ಒಡಂಬಡಿಕೆಗೆ ಪರಸ್ಪರ ಸಹಿ ಹಾಕಲಾಯಿತು. ಉದಯೋನ್ಮುಖ ಇಂಜಿನಿಯರುಗಳಿಗೆ ಗೇಟ್ ಪರೀಕ್ಷೆಯ ಮಹತ್ವವನ್ನು ಗಮನದಲ್ಲಿರಿಸಿಕೊಂಡು ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯವು IIT, IISc ಯಂತಹ ಪ್ರತಿಷ್ಠಿತ ಮಹಾವಿದ್ಯಾಲಯಗಳಿಂದ ಎಂ.ಟೆಕ್ ಹಾಗೂ ಪಿ.ಎಚ್.ಡಿ ಪದವಿ ಪಡೆದ ನುರಿತ ಪರಿಣಿತರನ್ನು ಒಳಗೊಂಡ ಅಪೆಕ್ಸ್ ಸಂಸ್ಥೆಯ ಮುಖೇನ ಗೇಟ್ ತರಬೇತಿಯನ್ನು ಆರಂಭಿಸಿದೆ.

Call us

Click Here

Click here

Click Here

Call us

Visit Now

Click here

ಮೂಡುಬಿದಿರೆಯ ಆಳ್ವಾಸ್ ಸಂಸ್ಥೆಯ ಈ ಉತ್ತಮ ಗುಣಮಟ್ಟದ ತರಬೇತಿ ಕೇಂದ್ರವು ಇದೇ ನವಂಬರ್ 28ರಿಂದ ತರಗತಿಗಳನ್ನು ಆರಂಭಿಸುತ್ತಿದ್ದು ತರಬೇತಿಗಾಗಿ ದೂರದ ಹೈದರಾಬಾದ್ ಅಥವಾ ದೆಹಲಿಯವರೆಗೆ ತೆರಳುವ ಅನಿವಾರ್ಯತೆಯನ್ನು ನೀಗಿಸಲಿದೆ. ದೇಶದ ಯಾವುದೇ ಇಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ಹಾಗೂ ಸಿವಿಲ್ ವಿಭಾಗದ ವಿದ್ಯಾರ್ಥಿಗಳು ಮತ್ತು ಗೇಟ್ ಪರೀಕ್ಷಾಕಾಂಕ್ಷಿಗಳು ಈ ತರಬೇತಿಯ ಸೌಲಭ್ಯನ್ನು ಪಡೆದುಕೊಳ್ಳಬಹುದಾಗಿದೆ. ದೂರದ ಊರಿನ ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯವನ್ನು ಒದಗಿಸಲಾಗುವುದು. ಕಾಲೇಜಿನ ಆವರಣದಲ್ಲಿಯೇ ವಿ?ಯ ತಜ್ಞರುಗಳು ಹಾಗೂ ವಸತಿ ಸೌಕರ್ಯವು ಲಭ್ಯವಿರುವುದು ಆಳ್ವಾಸ್ ಗೇಟ್ ತರಬೇತಿ ಶಿಕ್ಷಣ ಕೇಂದ್ರದ ವೈಶಿ?ವಾಗಿದೆ. ಪ್ರತಿಷ್ಠಿತ ಸಂಸ್ಥೆಗಳಾದ IISc ಹಾಗೂ IISc ಗಳಲ್ಲಿ ಸ್ನಾತಕೋತ್ತರ ಹಾಗೂ ಪಿ.ಎಚ್.ಡಿ. ಪದವಿಗಳಿಗೆ ಅಗತ್ಯ. MRPL, IOCL, DRDO, ONGC KIOCL ಗಳಂತಹ ಸರಕಾರಿ ಅಥವಾ ಸಾರ್ವಜನಿಕ ಉದ್ಯಮ ವಲಯಗಳಲ್ಲಿ ಇಂಜಿನಿಯರಿಂಗ್ ಉದ್ಯೋಗಾವಕಾಶಗಳನ್ನು ಪಡೆಯಲು ಕಡ್ಡಾಯ. CSIR, ISRO, DRDO, IISc ಮತ್ತು IIT ಯಂತಹ ಸಂಸ್ಥೆಗಳಲ್ಲಿ ಫೆಲೋಶಿಪ್ ಪಡೆಯಲು ಸಹಕಾರಿ. ವಿದೇಶಿ ವಿಶ್ವವಿದ್ಯಾನಿಲಯಗಳಲ್ಲಿ ಉನ್ನತ ವ್ಯಾಸಂಗಕ್ಕೆ ನೆರವಾಗುತ್ತದೆ ಅಲ್ಲದೆ ಸರಕಾರಿ ಉದ್ಯೋಗಗನ್ನು ಪಡೆಯಲು ಗೇಟ್ ಉತ್ತೀರ್ಣತೆಯು ಸಹಕಾರಿಯಾಗಲಿದೆ. ಇದರೊಂದಿಗೆ, ಕ್ಯಾಂಪಸ್ ನೇಮಕಾತಿಗಳಿಗೂ ಗೇಟ್ ಪರೀಕ್ಷೆಯ ತಯಾರಿ ಬಹಳ? ಪ್ರಯೋಜನವಾಗಲಿದೆ.

ಒಡಂಬಡಿಕಾ ಕಾರ್ಯಕ್ರಮದಲ್ಲಿ ಅಪೆಕ್ಸ್ ಸಂಸ್ಥೆಯ ಸಂಸ್ಥಾಪಕರಾದ ಡಾ. ಅನಂತ ಪೈ ಎಸ್., ಪ್ರಾಂಶುಪಾಲರು ಡಾ. ಪೀಟರ್ ಫೆನಾಂಡಿಸ್, ಸಿವಿಲ್ ವಿಭಾಗದ ಮುಖ್ಯಸ್ಥರಾದ ಡಾ. ಅಜಿತ್ ಹೆಬ್ಬಾರ್, ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥರಾದ ಡಾ| ಸತ್ಯನಾರಾಯಣ ಮತ್ತು ಸಂಯೋಜಕರಾದ ಸಿವಿಲ್ ವಿಭಾಗದ ಪ್ರೊ. ಶಂಕರಗಿರಿ ಉಪಸ್ಥಿತರಿದ್ದರು.

ಹೆಚ್ಚಿನ ಮಾಹಿತಿಯನ್ನು https://apexacademics.co.in/ ಅಂತರ್ಜಾಲದಲ್ಲಿ ಪಡೆಯಬಹುದಾಗಿದೆ.

Leave a Reply

Your email address will not be published. Required fields are marked *

11 + 11 =