ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ನಮ್ಮನ್ನು ತೆಗಳುವವರು, ತಿರಸ್ಕರಿಸುವವರನ್ನು ಮತ್ತು ತಪ್ಪು ಹುಡುಕುವವರನ್ನು ದೂರ ಇಡದೆ ಜೊತೆಯಲ್ಲೇ ಇರಿಸಿಕೊಂಡರೆ ನಮ್ಮ ಹೋರಾಟಕ್ಕೆ ಅವರೇ ಸ್ಪೂರ್ತಿಯಾಗುತ್ತಾರೆ ಎಂದು ಸಂಗೀತ ನಿರ್ದೇಶಕ ರವಿ ಬಸ್ರೂರು ಹೇಳಿದರು.
ಅವರು ಕಲಾಕ್ಷೇತ್ರ – ಕುಂದಾಪುರ ಟ್ರಸ್ಟ್ ಇದರ ಇನಿದನಿ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿ ಕೆಲಸ ಅಥವಾ ಗುರಿ ತಲುಪಿದ ನಂತರ ಸಿಗುವ ಖುಷಿಗಿಂತ ಆ ಗುರಿ ಸಾಧನೆ ಮಾಡುವ ನೆಪದಲ್ಲಿ ಪಡುವ ಪರಿಶ್ರಮ ಇದೆಯಲ್ಲ ಆ ಅನುಭವವೇ ಮನಸ್ಸಿಗೆ ಖುಷಿ ಕೊಡುತ್ತದೆ ಮತ್ತು ಅದು ಜೀವನಕ್ಕೂ ಪಾಠವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಅಧ್ಯಕ್ಷ ಬಿ. ಕಿಶೋರ್ ಕುಮಾರ್, ದಾಮೋದರ ಪೈ, ಕೆ.ಆರ್. ನಾಯಕ್, ಡಾ. ರಾಜರಾಮ್ ಶೆಟ್ಟಿ, ಸನತ್ ಕುಮಾರ್ ರೈ, ಕುಮಾರ್ ಕಾಂಚನ್, ರಾಜೇಶ್ ಕಾವೇರಿ, ಕಲಾವಿದ ಭಾಸ್ಕರ ಆಚಾರ್ಯ, ಗೋಪಾಲ ವಿ, ಶ್ರೀಧರ ಸುವರ್ಣ, ಡಾ. ಹರಿಪ್ರಸಾದ್ ಶೆಟ್ಟಿ, ಪ್ರಕಾಶ್ಚಂದ್ರ ಹೆಗ್ಡೆ, ಬಿ.ಎನ್. ರಾಮಚಂದ್ರ, ಮೋಹನ್ ಸಾರಂಗ್, ಸಾಯಿನಾಥ ಶೇಟ್, ಶೇಖರ ಖಾರ್ವಿ, ಶ್ರೀಪತಿ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.