ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಕಳೆದ ಫೆ.20 ರಂದು ನಡೆದ ಕುಂದಾಪುರ ತಾಪಂ, ಜಿಪಂ ಚುನವಾವಣೆ ಮತ ಎಣಿಕೆ ಕುಂದಾಪುರ ಭಂಡಾರ್‌ಕಾರ್ಸ್ ಕಾಲೇಜ್‌ನಲ್ಲಿ ಬೆಳಗ್ಗೆ 8 ರಿಂದ ಆರಂಭವಾಗಲಿದೆ.
ಕುಂದಾಪುರ ಕ್ಷೇತ್ರದ ಹತ್ತು ಜಿಲ್ಲಾ ಪಂಚಾಯತ್ ಮತ್ತು ಮುವತ್ತೇಳು ತಾಲೂಕ್ ಪಂಚಾಯತಿಗೆ ಚುನಾವಣೆ ನಡೆದಿದ್ದು ತಾಪಂ ಒಟ್ಟು 37 ಸ್ಥಾನಕ್ಕ ಒಟ್ಟು 99 ಅಭ್ಯರ್ಥಿಗಳು ಮತ್ತು ಹತ್ತು ಜಿಲ್ಲಾ ಪಂಚಾಯತ್ ಕ್ಷೇತ್ರಕ್ಕೆ ಒಟ್ಟು 29 ಅಭ್ಯರ್ಥಿಗಳು ಚುನಾವಣೆ ಕಣದಲ್ಲಿದ್ದಾರೆ.
ಮಾಜಿ ಜಿಪಂ ಅಧ್ಯಕ್ಷ ರಾಜು ಪೂಜಾರಿ, ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಾಬು ಶೆಟ್ಟಿ ತಗ್ಗರ್ಸೆ, ಗೌರಿ ದೇವಾಡಿಗ, ಮಾಜಿ ಜಿಪಂ ವಿರೋಧ ಪಕ್ಷದ ನಾಯಕ ಅನಂತ ಮೋವಾಡಿ, ಮಾಜಿ ಜಿಪಂ ಸದಸ್ಯರಾದ ಹರ್ಕೂರು ಮಂಜಯ್ಯ ಶೆಟ್ಟಿ, ಮದನ್ ಕುಮಾರ್, ತಾರಾನಾಥ ಶೆಟ್ಟಿ, ಬಾಳೆಮನೆ ಸಂತೋಷ್ ಕುಮಾರ್ ಶೆಟ್ಟಿ, ಸಾಧು ಎಸ್.ಬಿಲ್ಲವ, ರಾಜು ದೇವಾಡಿಗ ಅವರ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರವಾಗಿದೆ.
ಮತ ಏಣಿಕೆ ಕೇಂದ್ರದಲ್ಲಿ ಎರಡು ಕೊಠಡಿಗಳಿದ್ದು, ೧೫ ಟೇಬಲ್‌ಗಳಲ್ಲಿ ಏಕಕಾಲಕ್ಕೆ ನಾಲ್ಕು ಕ್ಷೇತ್ರದ ಮತಏಣಿಕೆ ನಡೆಯಲಿದೆ. ಪ್ರತಿ ಟೇಬಲಿನಲ್ಲಿ ನಾಲ್ಕು ಸಿಬ್ಬಂಧಿಗಳಿರಲಿದ್ದಾರೆ. ಜಿಪಂ ಹಾಗೂ ತಾಪಂ ಟೇಬಲ್ ವ್ಯವಸ್ಥೆ ಮಾಡಲಾಗಿದೆ. ಮತ ಎಣಿಕೆ ಕೇಂದ್ರದ ಒಳಗೆ ತೆರಳಲು ಅಭ್ಯರ್ಥಿ ಹಾಗೂ ಇತರ ಈರ್ವರಿಗೆ ಅವಕಾಶವಿದೆ. ಮತ ಏಣಿಕೆ ಕೇಂದ್ರ ಸುತ್ತ ನೂರು ಮೀಟರ್ ಆವರಣದಲ್ಲಿ ನಿಪೇಧಾಜ್ಞೆ ಜಾರಿಗೊಳ್ಳಲ್ಲಿದ್ದು, ಡಿಎಸ್ಪಿ ಮಂಜುನಾಥ ಶೆಟ್ಟಿ ನೇತೃತ್ವದಲ್ಲಿ ಬಿಗಿ ಬಂದೋವಸ್ತ್ ಏರ್ಪಡಿಸಲಾಗಿದೆ.
►ಚುನಾವಣಾ ಫಲಿತಾಂಶದ ಬಗ್ಗೆ ಲೈವ್ ಅಪ್‌ಡೇಟ್ ಪಡೆಯಲು ಲಾಗಿನ್ ಮಾಡಿ – http://kundapraa.com/zp-tp-poll-results/ .