ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ವಿಧಾನ ಪರಿಷತ್ ಚುನಾವಣೆಯಲ್ಲಿ ಮತಚಲಾಯಿಸುವ ಮುನ್ನ ಕೋಟತಟ್ಟು ಗ್ರಾಮ ಪಂಚಾಯತ್ ಸದಸ್ಯರು ವಿಧಾನ ಪರಿಷತ್ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರ ಭಾವಚಿತ್ರವನ್ನು ಮುಖವಾಡವಾಗಿ ಧರಿಸಿ ಮತದಾನ ಕೇಂದ್ರಕ್ಕೆ ತೆರಳಿದ್ದು ಗಮನ ಸೆಳೆಯಿತು.
ಕೊಟತಟ್ಟು ಗ್ರಾಮ ಪಂಚಾಯತಿ ಕೋಟ ಶ್ರೀನಿವಾಸ ಪೂಜಾರಿ ಅವರ ಹುಟ್ಟೂರಾಗಿದ್ದು, ಪಂಚಾಯತಿಯಲ್ಲಿ 7 ಮಹಿಳಾ ಸದಸ್ಯರು ಹಾಗೂ 6 ಮಂದಿ ಪುರಷ ಸದಸ್ಯ ಮತದಾರರಿದ್ದು, ಮತದಾನಕ್ಕೂ ಮುನ್ನ ಶ್ರೀನಿವಾಸ ಪೂಜಾರಿ ಅವರನ್ನು ಭೇಟಿಯಾಗಿ ಶುಭಕೋರಿದ್ದಾರೆ.

ಈ ಬಗ್ಗೆ ಸಚಿವ ಹಾಗೂ ಅಭ್ಯರ್ಥಿಯಾಗಿರುವ ಕೋಟ ಶ್ರೀನಿವಾಸ ಪೂಜಾರಿ ಅವರ ತಮ್ಮ ಸಾಮಾಜಿಕ ಸೋಶಿಯಲ್ ಹಾಂಡಲ್ಸ್’ನಲ್ಲಿ ‘ಇವರ ಪ್ರೀತಿಗೆ ಧನ್ಯವಾದಗಳು ಎಂಬ ಪದಗಳೂ ಕನಿಷ್ಠವಾಗಬಹುದು’ ಎಂದು ಬರೆದುಕೊಂಡಿದ್ದಾರೆ.