ಅರಾಟೆ ಸೇತುವೆ ಬಳಿ ಗಾಂಜಾ ಮಾರುತ್ತಿದ್ದ ವ್ಯಕ್ತಿಯ ಬಂಧನ

ಕುಂದಾಪ್ರ ಡಾಟ್ ಕಾಂ ಸುದ್ದಿ.

ಕುಂದಾಪುರ: ತಾಲೂಕಿನ ಹೊಸಾಡು ಗ್ರಾಮದ ಅರಾಟೆ ಸೇತುವೆ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಗಂಗೊಳ್ಳಿ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಕಟ್‌ಬೆಲ್ತೂರು ಗ್ರಾಮದ ಹರೆಗೋಡು ನಿವಾಸಿ ನಾಗರಾಜ ಮೊಗವೀರ (35) ಅಲಿಯಾಸ್ ಬುಲೆಟ್ ನಾಗ ಬಂಧಿತ ಆರೋಪಿ.

ಅರಾಟೆ ಸೇತುವೆ ಕೆಳಗಡೆ ಹೊಳೆಯ ಬದಿಯಲ್ಲಿ ನಾಗರಾಜ ಮೊಗವೀರ ಎಂಬಾತ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಗಂಗೊಳ್ಳಿ ಪಿಎಸ್ಐ ಭೀಮಾಶಂಕರ್ ಹಾಗೂ ಸಿಬ್ಬಂದಿಗಳು ಅಂದಾಜು ರೂ.16,000 ಮೌಲ್ಯದ 540 ಗ್ರಾಂ ತೂಕದ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

ಕುಂದಾಪುರ ಪೊಲೀಸ್ ಉಪವಿಭಾಗದ ಡಿವೈಎಸ್ಪಿ ಶ್ರೀಕಾಂತ್ ಕೆ., ಬೈಂದೂರು ವೃತ್ತ ನಿರೀಕ್ಷಕ ಸಂತೋಷ್ ಕಾಯ್ಕಿಣಿ ಮಾರ್ಗದರ್ಶನದಲ್ಲಿ ಗಂಗೊಳ್ಳಿ ಪಿಎಸ್ಐ ಭೀಮಾಶಂಕರ್ ಸಿನ್ನೂರ ಸಂಗಣ್ಣ ಅವರು ಕುಂದಾಪುರ ತಹಶಿಲ್ದಾರ್ ಆನಂದಪ್ಪ ಅವರ ಸಮಕ್ಷಮ ಈ ದಾಳಿ ನಡೆಸಿದ್ದು ಕಾರ್ಯಾಚರಣೆಯಲ್ಲಿ ಗಂಗೊಳ್ಳಿ ಪೊಲೀಸ್ ಠಾಣೆ ಕ್ರೈಮ್ ವಿಭಾಗದ ಸಿಬ್ಬಂದಿಗಳಾದ ಮೋಹನ್ ಪೂಜಾರಿ ಶಿರೂರು, ಚಂದ್ರಶೇಖರ್ ಅರೆಶಿರೂರು, ಶ್ರೀಧರ್ ಸೆಳ್ಳೆಕುಳ್ಳಿ, ಪ್ರಿನ್ಸ್ ಕೆ.ಜೆ. ನೀರ್ಗದ್ದೆ, ಮೌನೇಶ್, ಸೂರ ನಾಯ್ಕ್, ಸರೋಜಾ, ಚಾಲಕ ದಿನೇಶ್ ಪಡುವರಿ ಇತರರು ಇದ್ದರು.

Leave a Reply

Your email address will not be published. Required fields are marked *

2 × five =