ಅಲ್ಪ ತಿಳಿದವರಿಗಷ್ಟೇ ದೇವರ ಅಸ್ತಿತ್ವದ ಬಗ್ಗೆ ಗೊಂದಲವಿದೆ: ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ವಿಜ್ಞಾನ ಎಷ್ಟೇ ಮುಂದುವರಿದರೂ ದೇವರು ಅದರ ಅಂತಸತ್ವವಾಗಿ ಉಳಿಯುತ್ತಾನೆ. ಖ್ಯಾತ ವಿಜ್ಞಾನಿಗಳೆಲ್ಲರೂ ದೇವರ ಅಸ್ತಿತ್ವವನ್ನು ಒಪ್ಪಿಕೊಂಡಿದ್ದಾರೆ. ಆದರೆ ಅಲ್ಪಸ್ವಲ್ಪ ತಿಳಿದವರು ದೇವರ ಅಸ್ತಿತ್ವವನ್ನು ಪ್ರಶ್ನಿಸುತ್ತಾರೆ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

Click Here

Call us

Call us

ತೆಂಕಬೆಟ್ಟು ನವೀಕೃತ ಶ್ರೀ ಕಾಲಭೈರವೇಶ್ವರ ದೇವಸ್ಥಾನದ ಬ್ರಹ್ಮಕಳಶೋತ್ಸವದ ಎರಡನೇ ದಿನ ಶುಕ್ರವಾರ ದೇವಳಕ್ಕೆ ಭೇಟಿನೀಡಿ ದೇವರ ದರ್ಶನ ಪಡೆದು ನಂತರ ಅವರು ಆಶೀರ್ವಚನಗೈದರು. ದೇವರು ಭಕ್ತರಲ್ಲಿ ಭಕ್ತಿ ತುಂಬುವ ಒಂದು ಶಕ್ತಿ. ದೇವಾಲಯಗಳಲ್ಲಿ ಭಯ ಭಕ್ತಿಯಿಂದ ನಾವು ಹೇಗೆ ಇರುತ್ತೇವೆಯೋ, ನಿಜ ಜೀವನದಲ್ಲಿಯೂ ಅದನ್ನು ನಾವು ರೂಢಿಸಿಕೊಳ್ಳಬೇಕು ಎಂದು ಅವರು ಅಭಿಪ್ರಾಯಪಟ್ಟರು.

Click here

Click Here

Call us

Visit Now

ಮಂಗಳೂರು ಆದಿಚುಂಚನಗಿರಿ ಶಾಖಾಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ, ಹಲವರಿ ಮಠದ ಶ್ರೀ ಜಗದೀಶಾನಂದನಾಥ ಸ್ವಾಮೀಜಿ ಆಶೀರ್ವಚನ ನೀಡಿದರು. ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಹಾಗೂ ಸಮಿತಿಯ ಪದಾಧಿಕಾರಿಗಳು ಇದ್ದರು.

Leave a Reply

Your email address will not be published. Required fields are marked *

16 − thirteen =