ಕುಂದಾಪುರ: ಕರ್ನಾಟಕ ಸರಕಾರದ ಅಲ್ಪ ಸಂಖ್ಯಾತರ ಕಲ್ಯಾಣ ನಿರ್ದೇಶನಾಲಯದ ಆಶ್ರಯದಲ್ಲಿ ಎಸಿಸಿಪಿಎಲ್ ತರಬೇತಿ ಕೇಂದ್ರದ ಸಹಯೋಗದೊಂದಿಗೆ 2015-16ನೇ ಸಾಲಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಯೋಜನೆಯಡಿ ಅಲ್ಪ ಸಂಖ್ಯಾತರ ವಿದ್ಯಾರ್ಥಿಗಳಿಗೆ ಉಚಿತ ಸಿ.ಇ.ಟಿ. ತರಬೇತಿ ನೀಡಲಾಗುತ್ತಿದೆ.
ಪ್ರಸಕ್ತ ಸಾಲಿನಲ್ಲಿ ಪಿ.ಯು.ಸಿ. ಓದುತ್ತಿರುವ ವಿದ್ಯಾರ್ಥಿಗಳ ತರಬೇತಿಗೆ ಅಧ್ಯಾಯನ ಸಾಮಗ್ರಿಗಳನ್ನು ನಿರ್ದೇಶನಾಲಯದಿಂದ ಸರಬರಾಜು ಮಾಡಲಾಗುವುದು. ಉಚಿತ ಸಿಇಟಿ ತರಬೇತಿ ನೀಡುವ ಕೇಂದ್ರಗಳು ಉಡುಪಿ ಜಿಲ್ಲೆಯಲ್ಲಿ ಆರ್.ಎನ್.ಶೆಟ್ಟಿ ಕಾಲೇಜು ಕುಂದಾಪುರ, ಪೂರ್ಣಪ್ರಜ್ಞ ಪಿ.ಯು. ಕಾಲೇಜು ಉಡುಪಿ, ಭುವನೇಂದ್ರ ಪಿ.ಯು. ಕಾಲೇಜು ಕಾರ್ಕಳ, ಎಸ್.ಎಂ.ಎಸ್ ಕಾಲೇಜು ಬ್ರಹ್ಮಾವರ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೈಂಟ್ ಅಲೋಶಿಯಸ್ ಪಿ.ಯು. ಕಾಲೇಜು, ಮಂಗಳೂರು, ಸೈಂಟ್ ಆಗ್ನೇಸ್ ಪಿ.ಯು. ಕಾಲೇಜು ಮಂಗಳೂರು, ಸೈಂಟ್ ಫಿಲೋಮಿನಾ ಪಿ.ಯು. ಕಾಲೇಜು ಪುತ್ತೂರು, ಕಾರ್ಮೆಲ್ ಪಿ.ಯು. ಕಾಲೇಜು ಮೂಡನ್ಕಾಪ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಸೈಂಟ್ ಜೋಸೆಪ್ ಪಿ.ಯು. ಕಾಲೇಜು ಕಾರವಾರ, ಅಕ್ಷಯ ಕೋಚಿಂಗ್ ಕ್ಲಾಸಸ್ ಕುಮಟಾ ಮತ್ತು ಭಟ್ಕಳಗಳಲ್ಲಿ ತರಬೇತಿ ನೀಡಲಾಗುತ್ತದೆ. ಆಸಕ್ತ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಎರಡು ಭಾವಚಿತ್ರ, ಜಾತಿ ಹಾಗೂ ಆದಾಯ ಪ್ರಮಾಣ ಪತ್ರ, ಎಸ್‌ಎಸ್‌ಎಲ್‌ಸಿ ಮಾರ್ಕ್ಸ್ ಕಾರ್ಡ್ ಮತ್ತು ರೇಷನ್‌ಕಾರ್ಡ್ ಅಥವಾ ಆಧಾರ್ ಕಾರ್ಡ್‌ನೊಂದಿಗೆ ಹತ್ತಿರದ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯನ್ನು ಸಂಪರ್ಕಿಸಬಹುದಾಗಿದೆ.