ಅ. 1 ರಿಂದ ಉಡುಪಿ – ಹೈದರಾಬಾದ್ ಕೆ.ಎಸ್. ಆರ್. ಟಿ. ಸಿ ಸಾರಿಗೆ ಸೌಲಭ್ಯ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಮಂಗಳೂರು ವಿಭಾಗದ ಮಂಗಳೂರು ಬಸ್ಸು ನಿಲ್ದಾಣದಿಂದ ಹೈದರ್‌ಬಾದ್‌ಗೆ  ಉಡುಪಿ, ಕುಂದಾಪುರ, ಭಟ್ಕಳ, ಹುಬ್ಬಳ್ಳಿ, ಗದಗ, ಕೊಪ್ಪಳ, ರಾಯಚೂರು ಮಾರ್ಗವಾಗಿ ಹಾಗೂ ಹೈದರ್‌ಬಾದ್‌ದಿಂದ ಇದೇ ಮಾರ್ಗವಾಗಿ ಮಂಗಳೂರಿಗೆ ಸಾರ್ವಜನಿಕರ ಬೇಡಿಕೆಗನುಗುಣವಾಗಿ ‘ಅಂಬಾರಿ ಡ್ರೀಮ್ಕ್ಲಾಾಸ್ ಮಲ್ಟಿಅಕ್ಸ್ಲ್‍ ಎ. ಸಿ. ಸ್ಲೀಪರ್’ ವಾಹನ ಹಾಗೂ ಉಡುಪಿ ಬಸ್ಸ್ ನಿಲ್ದಾಣದಿಂದ ಉಡುಪಿ – ಹೈದರಾಬಾದ್ ವಯಾ ಮಣಿಪಾಲ್-ಕುಂದಾಪುರ – ಸಿದ್ದಾಪುರ – ತೀರ್ಥಹಳ್ಳಿ – ಶಿವಮೊಗ್ಗ – ಹರಿಹರ – ಹರಪ್ಪನಹಳ್ಳಿ – ಹೊಸಪೇಟೆ – ಗಂಗಾವತಿ – ಮಾನ್ವಿ – ರಾಯಚೂರು ಮಾರ್ಗದಲ್ಲಿ ರಾಜಹಂಸ ವಾಹನವನ್ನು ಅಕ್ಟೋಬರ್ 1 ರಿಂದ ಆರಂಭಿಸಲಾಗುತ್ತಿದೆ.

Call us

Call us

ಈ ಹಿನ್ನಲೆಯಲ್ಲಿ ನಿಗಮದ ವಾಹನಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ಹಾಗೂ ಆರೋಗ್ಯದ ಹಿತದೃಷ್ಟಿಯಿಂದ ನಿಗಮದ ಎಸ್ಒನಪಿ (Standard operating procedure) ರಲ್ಲಿಯ ನಿರ್ದೇಶನಗಳಂತೆ ನಿಗಮದ ವಾಹನಗಳಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗುವುದು. ಈ ಸಾರಿಗೆಗೆ ಅವತಾರ್ ವ್ಯವಸ್ಥೆ ಮೂಲಕ ಮುಂಗಡ ಆಸನ ಕಾದಿರಿಸುವ ವ್ಯವಸ್ಥೆ ಇದ್ದು, ಸಾರ್ವಜನಿಕರು ಸದರಿ ಸಾರಿಗೆಯ ಸದುಪಯೋಗ ಪಡೆದುಕೊಳ್ಳುವಂತೆ ಮಂಗಳೂರು  ಕರಾರಸಾಸಂ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

12 + fifteen =