ಅ.1-10: ಕೋಟದಲ್ಲಿ ಸಾಹಿತ್ಯಿಕ, ಸಾಂಸ್ಕೃತಿಕ ದಿಬ್ಬಣ ಚಿತ್ತಾರ 2015

Call us

Call us

Call us

Call us

ಕುಂದಾಪುರ: ಈ ಬಾರಿ ಕೋಟತಟ್ಟು ಗ್ರಾಮ ಪಂಚಾಯಿತಿ, ಡಾ.ಶಿವರಾಮ ಕಾರಂತ ಟ್ರಸ್ಟ್(ರಿ.) ಉಡುಪಿ, ಡಾ.ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ(ರಿ.) ಕೋಟ ಸಾರಥ್ಯದಲ್ಲಿ ಡಾ.ಶಿವರಾಮ ಕಾರಂತ ಜನ್ಮದಿನೋತ್ಸವದ ಅಂಗವಾಗಿ ಅಕ್ಟೋಬರ್ 1 ರಿಂದ 10ರ ವರೆಗೆ ಸಾಹಿತ್ಯಿಕ ಸಾಂಸ್ಕೃತಿಕ ದಿಬ್ಬಣ ಚಿತ್ತಾರ 2015 ಕಾರ್ಯಕ್ರಮಗಳು ನಡೆಯಲಿದೆ. ಅಕ್ಟೋಬರ್ 1ರಂದು ಮಹಿಳಾ ಸಾಹಿತ್ಯ ಸಾಮವೇಶ ಚೇತನ, 2ರಂದು ನೃತ್ಯ ಮತ್ತು ನಾಟಕ ಕಾರ್ಯಕ್ರಮ, 3ರಂದು ತಾಳಮದ್ದಳೆ, 4ರಂದು ಪುಟಾಣಿಗಳ ಸಮಾವೇಶ ಅಕ್ರೂಟ್, 5ರಂದು ಉಡುಪಿ ಜಿಲ್ಲಾ ಪ್ರೌಢಶಾಲಾ ಶಿಕ್ಷಕರ ಸಮಾವೇಶ ಪ್ರೇರಣ, 6ರಂದು ಸಾಮರ್ಥ್ಯ ಅಭಿವೃದ್ಧಿ ತರಬೇತಿ ಕಮ್ಮಟ, 7ರಂದು ಪ್ರಗತಿಪರ ಸಮಾವೇಶ ಒತ್ತಾಸೆ, 8ರಂದು ಉರಗ ಪ್ರದರ್ಶನ- ಪ್ರಾತ್ಯಕ್ಷಿಕೆ ಹಾವು ನಾವು, 9ರಂದು ಪಂಚಾಯಿತಿ ಹಬ್ಬ ಮತ್ತು 10ರಂದು ಕಾರಂತರ ಹುಟ್ಟೂರ ಪ್ರಶಸ್ತಿ ಪ್ರಧಾನ , ಯಕ್ಷನಾಟ್ಯ ವೈಭವ ಸಂಗೀತ ಸುಧೆ ಚಿತ್ತ ಚಿತ್ತಾರ ನಡೆಯಲಿದೆ. ಅಲ್ಲದೇ ಅಂತರಾಷ್ಟ್ರೀಯ ವ್ಯಂಗ್ಯಚಿತ್ರಕಾರ ಸತೀಶ್ ಆಚಾರ್ ಕುಂದಾಪುರ ಅವರಿಂದ ಕಾರ್ಟೂನ್ ಹಬ್ಬ ಮತ್ತು ಕಾರಂತ ಮಹಾಸಾಗರ ಸಾಕ್ಷ್ಯಚಿತ್ರ ಪ್ರದರ್ಶನ ನಡೆಯಲಿದೆ ಎಂದರು.

Call us

Click Here

Click here

Click Here

Call us

Visit Now

Click here

ಈ ಬಾರಿ ಮುಂಬೈನ ರಂಗನಟ, ನಿರ್ದೇಶಕ, ರಂಗ ಸಂಯೋಜಕ, ಟಿ.ವಿ, ಸೀರಿಯಲ್, ಸಾಕ್ಷ್ಯಚಿತ್ರ ಮತ್ತು ಚಲನಚಿತ್ರಗಳ ನಿರ್ಮಾಪಕ, ನಾಟಕ, ಕಥೆ, ಕಾದಂಬರಿಗಳ ಲೇಖಕ, ಪ್ರಕಾಶಕ, ಹಲವು ಪ್ರತಿಷ್ಠಾನಗಳಿಗೆ ಪ್ರಾಯೋಜಕ, ನಾಟಕರಂಗಕಲೆಯ ತರಬೇತಿಗಾರನಾಗಿ ಸೇವೆ ಸಲ್ಲಿಸುತ್ತಿರುವ ಸದಾನಂದ ಸುವರ್ಣ ಅವರಿಗೆ ಈ ಬಾರಿಯ ಕಾರಂತ ಹುಟ್ಟೂರ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

Leave a Reply

Your email address will not be published. Required fields are marked *

5 + 13 =