ಅ.13ಕ್ಕೆ ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ಪೌರಾಣಿಕ ಯಕ್ಷರಾತ್ರಿ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೆಂಗಳೂರು: ಇಲ್ಲಿನ ರವೀಂದ್ರ ಕಲಾಕ್ಷೇತ್ರದಲ್ಲಿ ಮೇಳದ ಕಲಾವಿದರ ಜೊತೆ ಅತಿಥಿ ಕಲಾವಿದರು ಆಗಮಿಸಿ ಪೌರಾಣಿಕ ಯಕ್ಷ ರಸದೌತಣ ನೀಡಲು ಸಜ್ಜಾಗಿದ್ದಾರೆ. ವಿಶೇಷ ಆಯೋಜನೆಯ ಪೌರಾಣಿಕ ಆಖ್ಯಾನಗಳನ್ನು ಕಣ್ತುಂಬಿಕೊಳ್ಳಲು ಸಾಲಿಗ್ರಾಮ ಮೇಳದ ಈ ಸುತ್ತಿನ ಪ್ರಪ್ರಥಮ ಆಟ ಆಗಸ್ಟ್ 13 ಶನಿವಾರ ನಡೆಯಲಿದೆ.

Call us

“ಕೃಷ್ಣಾರ್ಜುನ – ಕಾರ್ತವೀರ್ಯ – ಕೃಷ್ಣ ಪರಂಧಾಮ” ಅಪ್ಪಟ್ಟ ಪೌರಾಣಿಕ ಪ್ರಿಯರು ಅಪೇಕ್ಷೆಯ ಮೆರೆಗೆ ಆಯೋಜಿಸಲಾಗಿದೆ . ಭಾಗವತಿಕೆಯಲ್ಲಿ ಮಯ್ಯ ಹಿಲ್ಲೂರು, ಅಂಕೋಲ, ಜೊತೆ ಹೊಸಂಗಡಿ ರವೀಂದ್ರ ಶೆಟ್ಟಿ ರಂಜಿಸಲಿದ್ದಾರೆ .ಹೊಸ ಹುರುಪಿನ ಸಾಲಿಗ್ರಾಮ ಮೇಳದ ಜೊತೆ ಪ್ರೀತಿಯಿಂದ ಗೋಡೆ ನಾರಾಯಣ ಹೆಗಡೆ, ಜಲವಳ್ಳಿ ವಿಧ್ಯಾಧರ್ ರಾವ್, ಸುಬ್ರಮಣ್ಯ ಚಿಟ್ಟಾಣಿ ,ಕೋಡಿ ವಿಶ್ವನಾಥ್ ಗಾಣಿಗರು ಭಾಗವಹಿಸಲಿದ್ದಾರೆ.

ಎಪ್ಪತ್ತರ ಚಿರಯುವಕ ಯಕ್ಷರಂಗದ ಕೌರವ ಖ್ಯಾತಿಯ ಗೋಡೆ ನಾರಾಯಣ ಹೆಗಡೆ ಅರ್ಜುನ ಸುಬ್ರಮಣ್ಯ ಚಿಟ್ಟಾಣಿಯವರ ಕೃಷ್ಣ ಮತ್ತು ಜಲವಳ್ಳಿಯವರ ರಾವಣ ಪ್ರಸನ್ನ ಶೆಟ್ಟಿಗಾರ್ ಪ್ರೇಕ್ಷಕರಿಗೆ ಕುತೂಹಲ ಹೆಚ್ಚಿಸಿದೆ . ಅಪರೂಪದ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಸಂಘಟಕರಾದ ಅಂಪಾರು ರತ್ನಾಕರ ಶೆಟ್ಟಿ ಮತ್ತು ನೈಕಂಬ್ಳಿ ನಾಗರಾಜ್ ಶೆಟ್ಟಿ ವಿನಂತಿಸಿದ್ದಾರೆ. ಪಾಸ್ ಇರುವುದಿಲ್ಲ, ಟಿಕೆಟ್ ದರ 300 ಮತ್ತು 200 . ಸಂಪರ್ಕ 9741474255 – 95917 54722

Leave a Reply

Your email address will not be published. Required fields are marked *

twenty − 8 =