ಗಂಗೊಳ್ಳಿ : ಸುಮಾರು 450 ವರ್ಷಗಳ ಇತಿಹಾಸವುಳ್ಳ ಉಡುಪಿ ಜಿಲ್ಲೆಯ ಪುರಾತನ ದೇವಾಲಯಗಳಲ್ಲಿ ಒಂದಾಗಿರುವ ಕುಂದಾಪುರ ತಾಲೂಕಿನ ಬಸ್ರೂರು ಶ್ರೀ ಮಹಾಲಸಾ ನಾರಾಯಣೀ ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆಯುವ ನವರಾತ್ರಿ ಮಹೋತ್ಸವವು ಅ.13 ರಿಂದ 23ರವರೆಗೆ ಜರುಗಲಿದೆ.
ನವರಾತ್ರಿ ಮಹೋತ್ಸವದಲ್ಲಿ ಶ್ರೀದೇವಿಯ ಸನ್ನಿಧಿಯಲ್ಲಿ ದುರ್ಗಾಷ್ಟಮಿಯಂದು ದುರ್ಗಾ ದೀಪ ನಮಸ್ಕಾರ ಸೇವೆ, ವಿಜಯ ದಶಮಿಯಂದು ರಜತ ಪಲ್ಲಕಿ ಸೇವೆ, ಅ.25ರಂದು ಚಂಡಿಕಾ ಹವನ, ಗ್ರಾಮಪುರುಷ ದರ್ಶನ ಸೇವೆ, ಹರಕೆ ಸೀರೆಗಳ ಏಲಂ, ಸಂಜೆ ರಜತ ಪಲ್ಲಕಿ ಉತ್ಸವ ಸೇವೆ ಜರುಗಲಿದೆ. ನವರಾತ್ರಿ ದಿನದಂದು ಪ್ರತಿದಿನ ಮಧ್ಯಾಹ್ನ ಮಹಾಪೂಜೆ, ಮಹಾಸಮಾರಾಧನೆ, ಸಂಜೆ ವಿವಿಧ ಭಜನಾ ತಂಡಗಳಿಂದ ಭಜನಾ ಸೇವೆ ನಡೆಯಲಿದೆ ಎಂದು ದೇವಳದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಅ.13-23 : ಬಸ್ರೂರು ಮಹಾಲಸಾ ದೇವಳದಲ್ಲಿ ನವರಾತ್ರಿ ಮಹೋತ್ಸವ
