ಅ.20: ಗಂಗೊಳ್ಳಿಯಲ್ಲಿ ವಿಶೇಷ ದಸರಾ ಸ್ಪರ್ಧಾಕೂಟ

Call us

ಗಂಗೊಳ್ಳಿ: ಸೇವಾ ಸಂಘ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿಯ ಆಶ್ರಯದಲ್ಲಿ ನಡೆಯಲಿರುವ 41ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವದ ಪ್ರಯುಕ್ತ ಗಂಗೊಳ್ಳಿಯಲ್ಲಿ ವಿಶೇಷ ದಸರಾ ಸ್ಪರ್ಧಾ ಕೂಟ ಆಯೋಜಿಸಲಾಗಿದೆ.

Call us

ಪುರುಷರಿಗಾಗಿ ಅ.20ರಂದು ತ್ರಾಸಿಯಿಂದ ಗಂಗೊಳ್ಳಿಯ ಬಂದರ್ ಬಸ್ ನಿಲ್ದಾಣದವರೆಗೆ ಸೈಕಲ್ ರೇಸ್ ಸ್ಪರ್ಧೆ, ಅ.21ರಂದು ತ್ರಾಸಿಯಿಂದ ಗಂಗೊಳ್ಳಿಯ ಬಂದರ್ ಬಸ್ ನಿಲ್ದಾಣದವರೆಗೆ ಕ್ರಾಸ್ ಕಂಟ್ರಿ ರೇಸ್ ಏರ್ಪಡಿಸಲಾಗಿದೆ. ಅ.17ರಂದು ಮಧ್ಯಾಹ್ನ 2 ಗಂಟೆಯಿಂದ ಮಹಿಳೆಯರು ಹಾಗೂ ಮಕ್ಕಳಿಗಾಗಿ ಗಂಗೊಳ್ಳಿಯ ಶ್ರೀ ಶಾರದಾ ಮಂಟಪದಲ್ಲಿ ರಂಗೋಲಿ ಸ್ಪರ್ಧೆ, ಅ.22ರಂದು ಬೆಳಿಗ್ಗೆ 9 ಗಂಟೆಯಿಂದ ಸಾರ್ವಜನಿಕ ಮಹಿಳೆಯರಿಗಾಗಿ ಆಟೋಟ ಸ್ಪರ್ಧೆ, ಅ.23ರಂದು ಬೆಳಿಗ್ಗೆ 9 ಗಂಟೆಯಿಂದ ಮಹಿಳೆಯರು ಹಾಗೂ ಮಕ್ಕಳಿಗಾಗಿ ಗಂಗೊಳ್ಳಿಯ ಶ್ರೀ ಶಾರದಾ ಮಂಟಪದಲ್ಲಿ ಭಕ್ತಿಗೀತೆ ಸ್ಪರ್ಧೆ, ಮಧ್ಯಾಹ್ನ 2 ಗಂಟೆಯಿಂದ ಭಾಷಣ ಸ್ಪರ್ಧೆ, ನಾಡಗೀತೆ ಹಾಡುವ ಸ್ಪರ್ಧೆ ಮತ್ತು ಅ.24ರಂದು ಪುರುಷರು ಮತ್ತು ಮಹಿಳೆಯರಿಗಾಗಿ ಹೂಮಾಲೆ ಕಟ್ಟುವ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸತೀಶ್ ಜಿ. (೯೪೮೨೨೫೦೮೦೧), ಸವಿತಾ ಯು.ದೇವಾಡಿಗ (೭೩೫೩೬೨೨೩೫೭) ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *

one × 3 =