ಅ.20 ಬೆಂಗಳೂರಿನಲ್ಲಿ ಪೇರ್ಡೂರು ಮೇಳದ ಅಹಂ ಬ್ರಹ್ಮಾಸ್ಮಿ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೆಂಗಳೂರು: ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಈಗಾಗಲೇ ಚಂಡೆ ಶಬ್ದ ಕೇಳಿಸಲು ಪ್ರಾರಂಭವಾಗಿದೆ ಆದರೆ ಬಹು ಜನರ ನಿರೀಕ್ಷೆ ಯಾವಾಗ ಪೇರ್ಡೂರು ಮೇಳದ ಎಂಟ್ರಿ ಎಂಬುದು . ಅನಿಲ್ ಕುಮಾರ್ ಶೆಟ್ಟಿ ಪೇರ್ಡೂರು ಆಯೋಜನೆಯಲ್ಲಿ ಜುಲೈ 20 ಶುಕ್ರವಾರ ಪೇರ್ಡೂರು ಮೇಳದ ಬೆಂಗಳೂರಿನ ಪ್ರಥಮ ಪ್ರದರ್ಶನ “ಅಹಂ ಬ್ರಹ್ಮಾಸ್ಮಿ” . ಊರಿನ ತಿರುಗಾಟದಲ್ಲಿ ನೂರು ಪ್ರದರ್ಶನಗಳನ್ನು ಕಂಡ ಪ್ರೋ. ಪವನ್ ಕಿರಣಕೆರೆ ವಿರಚಿತ ಕೃತಿ ಇದಾಗಿದ್ದು ಜನ್ಸಾಲೆ ಭಾಗವತಿಕೆಯಲ್ಲಿ ಪ್ರದರ್ಶನ ಕಾಣಲಿದೆ.

Call us

Call us

Visit Now

ರಾಘವೇಂದ್ರ ಆಚಾರ್ಯ ಜನ್ಸಾಲೆ ,ಬ್ರಹ್ಮೂರು ಗಾನ ಸಾರಥ್ಯ ನಿರ್ವಹಿಸಿದರೆ ಸುನಿಲ್ ಭಂಡಾರಿ , ಸುಜನ್ ಹಾಲಾಡಿ ಸಾಥ್ ನೀಡಲಿದ್ದಾರೆ . ಥಂಡಿಮನೆ , ಸುಬ್ರಮಣ್ಯ ಯಲಗುಪ್ಪ , ಕಡಬಾಳ್ , ಕಿರಾಡಿ , ಮಾಗೋಡು , ಕೆಕ್ಕಾರು ರಂಗ ವೈಭವಕ್ಕೆ ರಮೇಶ ಭಂಡಾರಿ , ರವೀಂದ್ರ ದೇವಾಡಿಗ , ಪುರಂದರ ಮೂಡ್ಕಣಿ ತ್ರಿವಳಿ ಹಾಸ್ಯ ಸಿಂಚನ ಮಾಡಲಿದ್ದಾರೆ. ಬಹುದಿನಗಳ ನಂತರ ಪೇರ್ಡೂರು ಮೇಳದ ಪ್ರದರ್ಶನಕ್ಕೆ ಆಗಮಿಸಿ ಪ್ರೋತ್ಸಾಹಿಸುವಂತೆ ಸಂಘಟಕರರಾದ ಅನಿಲ್ ಶೆಟ್ಟಿ ತಿಳಿಸಿದ್ದಾರೆ.

Click here

Call us

Call us

ಪ್ರವೇಶ ದರ ಇರುತ್ತದೆ.
ಸಂಘಟಕರ ಸಂಪರ್ಕ – 9036963626

Leave a Reply

Your email address will not be published. Required fields are marked *

5 × 2 =