ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಅ.27ರ ಬುಧವಾರ ಉಡುಪಿ ಜಿಲ್ಲೆಯ ಎಲ್ಲಾ ಸರಕಾರಿ ಆಸ್ಪತ್ರೆಗಳ ವ್ಯಾಪ್ತಿಯ ಲಸಿಕಾ ಕೇಂದ್ರಗಳಲ್ಲಿ ಬೆಳಿಗ್ಗೆ 9 ರಿಂದ ಸಂಜೆ 4:30ರ ತನಕ ಕೋವಿಡ್ ಪ್ರಥಮ ಹಾಗೂ ಎರಡನೇ ಡೋಸ್ ಲಸಿಕಾಕರಣ ಜರುಗಲಿದೆ. 18 ವರ್ಷ ಮೇಲ್ಪಟ್ಟ ಇದುವರೆಗೂ ಕೋವಿಡ್ ಲಸಿಕೆ ಪಡೆಯದವರು ಲಸಿಕಾ ಕೇಂದ್ರಕ್ಕೆ ಬಂದು ಪ್ರಥಮ ಡೋಸ್ ಲಸಿಕೆ ಪಡೆಯಬಹುದು. ಕೋವಿಶಿಲ್ಡ್ ಮೊದಲ ಡೋಸ್ ಪಡೆದು 84 ದಿನ ಹಾಗೂ ಕೋವಾಕ್ಸಿನ್ ಮೊದಲ ಡೋಸ್ ಪಡೆದು 28 ದಿನ ಮೀರಿದವರು 2ನೇ ಡೋಸ್ ಲಸಿಕೆ ಪಡೆದುಕೊಳ್ಳಬಹುದು. ಲಸಿಕಾ ಕೇಂದ್ರದಲ್ಲಿ ಕೋವಿಡ್-19 ಸ್ವ್ಯಾಬ್ ಟೆಸ್ಟ್ ಇರುವುದಿಲ್ಲ.
ಪ್ರಥಮ ಡೋಸ್ ಲಸಿಕೆ ಪಡೆದ ದಿನಾಂಕ ನೆನಪಿಲ್ಲದಿರುವವರು ಕೋವಿಡ್ ಲಸಿಕಾ ಕೇಂದ್ರಕ್ಕೆ ಮೊಬೈಲ್ ಸಂಖ್ಯೆ ಅಥವಾ ಆಧಾರ್ ಕಾರ್ಡಿನೊಂದಿಗೆ ಬಂದು ಪರಿಶೀಲಿಸಿ ಎರಡನೇ ಡೋಸ್ ಪಡೆಯಲು ಅರ್ಹರಿದ್ದರೆ ಪಡೆದುಕೊಳ್ಳಬಹುದು. 2ನೇ ಡೋಸ್ ಪಡೆಯುವ ನಿಗದಿತ ದಿನಾಂಕದಿಂದ ತುಂಬಾ ತಡವಾದಲ್ಲಿ ಕೋವಿಡ್ನಿಂದ ಆಗುವ ತೊಂದರೆ ಹೆಚ್ಚಿರುವುದರಿಂದ ಕೂಡಲೇ ಲಸಿಕೆ ಪಡೆಯುವಂತೆ ಎಂದು ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ನಾಗಭೂಷಣ ಉಡುಪ ಹೆಚ್. ಅವರು ತಿಳಿಸಿದ್ದಾರೆ.
ಕುಂದಾಪುರ ಹಾಗೂ ಬೈಂದೂರು ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ವ್ಯಾಕ್ಸಿನೇಶನ್ ನಡೆಯುವ ಸ್ಥಳದ ಮಾಹಿತಿ ಈ ಕೆಳಗಿನಂತಿದೆ.

