ಅ.5ರಂದು ಕಿಂಗ್ ಕ್ಲೀನ್ ಪುಸ್ತಕ ಬಿಡುಗಡೆ ಸಮಾರಂಭ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೆಂಗಳೂರು: ಸಿರಿ ಮಾಸ ಪತ್ರಿಕೆಯ ಸಂಪಾದಕ, ಲೇಖಕ ಸಂದೀಪ್ ಶೆಟ್ಟಿ ಹೆಗ್ಗದ್ದೆ ಯವರ ದುಬೈ ಪ್ರವಾಸ ಕಥನ ಕಿಂಗ್ ಕ್ಲೀನ್ ಕೃತಿ ಅ.5ರ ಶನಿವಾರ ಸಂಜೆ 4:30ಕ್ಕೆ ನಗರದ ಕನ್ನಡ ಸಾಹಿತ್ಯ ಪರಿಷತ್ ಚಾಮರಾಜಪೇಟೆ ಬೆಂಗಳೂರು ಇಲ್ಲಿ ಬಿಡುಗಡೆಯಾಗಲಿದೆ.

Call us

Call us

ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ರಾಮಚಂದ್ರ ಗುರೂಜಿ, ಪುಸ್ತಕ ಬಿಡುಗಡೆಯನ್ನು ಸಾಹಿತಿ ಪತ್ರಕರ್ತ ಜೋಗಿ, ಕೃತಿ ಪರಿಚಯವನ್ನು ಸಾಹಿತಿ ದೊಡ್ಡರಂಗೇಗೌಡ ಮತ್ತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಶ್ವವಾಣಿ ಪತ್ರಿಕೆಯ ಸಂಪಾದಕ ವಿಶ್ವೇಶ್ವರ್ ಭಟ್ ವಹಿಸಲಿದ್ದಾರೆ.ಅಲ್ಲದೇ ಕಾರ್ಯಕ್ರಮದಲ್ಲಿ ಕೆರಾಡಿ ವರಸಿದ್ಧಿ ವಿನಾಯಕ ಪದವಿ ಪೂರ್ವ ಕಾಲೇಜಿನ ಅಧ್ಯಕ್ಷರಾದ ಚಂದ್ರಶೇಖರ್ ಶೆಟ್ಟಿ ಮತ್ತು ಸಿರಿ ಮಾಸ ಪತ್ರಿಕೆಯ ವ್ಯವಸ್ಥಾಪಕ ನಿರ್ದೇಶಕರಾದ ಡಾ.ಸುರೇಶ್ ಚಿಕ್ಕಣ್ಣ ಕೂಡ ಭಾಗವಹಿಸಲಿದ್ದಾರೆ.

 

Leave a Reply

Your email address will not be published. Required fields are marked *

fifteen − 7 =