ಆಂಗ್ಲ ಮಾಧ್ಯಮ ಸಂಸ್ಥೆಗಳಲ್ಲಿ ಕನ್ನಡದ ಕಾಯಕ ಶ್ಲಾಘನೀಯ: ಸಂದೀಪ್ ಶೆಟ್ಟಿ ಹೆಗ್ಗದ್ದೆ

Click Here

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ಸೈಂಟ್ ಥೋಮಸ್ ವಸತಿ ಶಾಲೆ ಮತ್ತು ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ೬೩ನೇ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಸಂಸ್ಥೆಯ ಪ್ರಾಂಶುಪಾಲ ರೆ. ಫಾ. ಡಾ. ವಿನ್ಸೆಂಟ್ ಜಾರ್ಜ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

Call us

Call us

Click Here

Visit Now

ಅತಿಥಿಯಾಗಿ ಆಗಮಿಸಿದ್ದ ಪತ್ರಕರ್ತ, ಹೆಗ್ಗದ್ದೆ ಪ್ರಕಾಶನದ ಸಂದೀಪ್ ಶೆಟ್ಟಿ ಹೆಗ್ಗದ್ದೆ, ಮಾತನಾಡಿ ಆಂಗ್ಲಮಾಧ್ಯಮ ಶಿಕ್ಷಣ ಸಂಸ್ಥೆಗಳಲ್ಲಿ ಕನ್ನಡದ ಕಾಯಕ ನಿಜಕ್ಕೂ ಶ್ಲಾಘನೀಯ, ವಿದ್ಯಾರ್ಥಿ ಪ್ರತಿಭೆಗಳು ಅರಳಲು ಇಂತಹ ವೇದಿಕೆಗಳು ಸಾಕ್ಷಿ ಎಂದ ಶುಭಹಾರೈಸಿದರು.

Click here

Click Here

Call us

Call us

ಈ ಸಂದರ್ಭ ವಿದ್ಯಾರ್ಥಿ ರಚನೆಯ ಐದನೇಯ ಕವನ ಸಂಕಲನ ’ನವಿರು’ ಹಾಗೂ ವಿದ್ಯಾರ್ಥಿ ಚಿಂತನ ಮಂಥನಗಳ ಧ್ವನಿ ಸುರುಳಿ ’ಅಂತರಂಗ’ವನ್ನು ಬಿಡುಗಡೆಗೊಳಿಸಲಾಯಿತು. ರಾಜ್ಯ ಸಾಹಿತ್ಯ ಸಿರಿ ಪ್ರಶಸ್ತಿ ವಿಜೇತ ಕಾಲೇಜು ವಿಭಾಗದ ಕನ್ನಡ ಉಪನ್ಯಾಸಕ ಉದಯ್ ನಾಯ್ಕ್ ಇವರನ್ನು ಸಂಸ್ಥೆಯ ಪರವಾಗಿ ಗೌರವಿಸಿ ಅಭಿನಂದಿಸಲಾಯಿತು.

ವಿದ್ಯಾರ್ಥಿ ಪೋಷಕ ಪ್ರತಿನಿಧಿಗಳಾಗಿರುವ ಉದಯ್, ಜಯರಾಮ ಶೆಟ್ಟಿ, ಹಾಗೂ ಸಂಸ್ಥೆ ಬೋಧಕವ್ರಂದ, ವಿದ್ಯಾರ್ಥಿಗಳು, ಪೋಷಕವ್ರಂದದವರು ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿಗಳಿಂದ ಕನ್ನಡ ನಾಡು-ನುಡಿ ಸಂಸ್ಕ್ರತಿಯನ್ನು ಬಿಂಬಿಸುವ ವೈವಿಧ್ಯಮಯ ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆಯಿತು. ಶಾಲಾ ವಿದ್ಯಾರ್ಥಿ ನಾಯಕ ಆದಿತ್ಯ ಬಿ, ಎನ್, ರಾವ್ ಸ್ವಾಗತಿಸಿ, ಧನುಷ್ ಎಸ್ ಮದ್ದೋಡಿ ಹಾಗೂ ಶ್ರೀಶಮ್ಮ ಕಾರ್ಯಕ್ರಮ ನಿರೂಪಿಸಿದರು. ವೈಷ್ಣವಿ ವಂದಿಸಿದರು.

Leave a Reply

Your email address will not be published. Required fields are marked *

eight + nine =