ಆತ್ಮ ಕಥನ ಮುಂದಿನ ಪೀಳಿಗೆಯ ಬದುಕಿಗೆ ದಾರಿದೀಪ: ನೀಲಾವರ ಸುರೇಂದ್ರ ಅಡಿಗ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಜಿ.ವಿ ಅಶೋಕ ಸಂಪಾದಿಸಿದ ದಿ. ಜಿ. ವಾಸುದೇವ ಹೇರ್ಳೆ ಆತ್ಮಕಥನ ಕೃತಿಯನ್ನು ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಲೋಕಾರ್ಪಣೆಗೊಳಿಸಿದರು.

Call us

ಕೃತಿ ಆನಾವರಣಗೊಳಿಸಿ ಮಾತನಾಡಿದ ನೀಲಾವರ ಸುರೇಂದ್ರ ಅಡಿಗ, ಆತ್ಮಕಥನಗಳು ನಮ್ಮ ಬದುಕಿಗೆ ದಾರಿದೀಪವಾಗಿದ್ದು ನಮ್ಮನ್ನು ಅವಲೋಕನ ಮಾಡಿಕೊಳ್ಳಲು ಒಂದು ಅವಕಾಶ, ಇದರಿಂದ ಬದುಕಿನ ಪಾಠಗಳ ಬಗ್ಗೆ ಅಥವಾ ಬದುಕಿನ ಬಗ್ಗೆ ಇರುವ ಹೆಜ್ಜೆಗುರುತನ್ನು , ಸಾಧಕನು ಸಾಧಿಸಿದ ಸಾಧನೆ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.

Call us

ಆರಂಭಿಕ ಮಾತುಗಳನ್ನಾಡಿದ ಸಂಪಾದಕ ಜಿ.ವಿ ಹೇರ್ಳೆರವರು  ತಂದೆಯವರ ಕುರಿತು ಮಾಡಿದ ಪುಸ್ತಕದ ಬಗ್ಗೆ ಅನಿಸಿಕೆ ಹಂಚಿಕೊಂಡರು.

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ಬ್ರಹ್ಮಾವರ ತಾಲೂಕು ಕ.ಸಾ.ಪ ಅಧ್ಯಕ್ಷರಾದ ನಾರಾಯಣ ಮಡಿ, ಕಾರ್ಕಳ ಕ.ಸಾ.ಪ ಅಧ್ಯಕ್ಷರಾದ ಪ್ರಭಾಕರ ಶೆಟ್ಟಿ, ಹೆಬ್ರಿ ತಾಲೂಕು ಕ.ಸಾ.ಪ ಅಧ್ಯಕ್ಷರಾದ ಆನಂದ್ , ಜಿಲ್ಲಾ ಸಂಘಟನಾ ಕಾರ್ಯದರ್ಶಿ ತಿಮ್ಮಪ್ಪ ಶೆಟ್ಟಿ, ಜಿ. ಅಶೋಕ ಹೇರ್ಳೆ ಧರ್ಮಪತ್ನಿ ಮತ್ತು ಮನೆಯವರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಉಡುಪಿ ಕ.ಸಾ.ಪ ಸಂಘಟನಾ ಕಾರ್ಯದರ್ಶಿ ನರೇಂದ್ರ ಕುಮಾರ್ ನಿರೂಪಿಸಿ, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಸ್ವಾಗತಿಸಿ, ಕ.ಸಾ.ಪ ಕೋಟ ಹೋಬಳಿ ಘಟಕದ ಅಧ್ಯಕ್ಷರಾದ ಸತೀಶ್ ವಡ್ಡರ್ಸೆ ವಂದಿಸಿದರು.

Leave a Reply

Your email address will not be published. Required fields are marked *

10 − 1 =