ಆನ್ಲೈನ್ ಹಣ ಹೂಡಿಕೆಯ ಮೋಸದ ಜಾಲ ಪೊಲೀಸರ ಬಲೆಗೆ

Call us

Call us

ಉತ್ತರಪ್ರದೇಶದ ಅಲಹಾಬಾದ್ ಪೊಲೀಸರಿಂದ ಬಂಧನ. ಆರೋಪಿಗಳು ಕುಂದಾಪುರ ನ್ಯಾಯಾಲಯಕ್ಕೆ ಹಾಜರು

Call us

Call us

Visit Now

ಕುಂದಾಪುರ: ಹೂಡಿಕೆ ಮಾಡುವ ಹಣವನ್ನು ದುಪ್ಪಟ್ಟು ಮಾಡಿ ಹಿಂತಿರುಗಿಸುವುದಾಗಿ ಆನ್ಲೈನ್ ನಲ್ಲಿ ಜಾಹೀರಾತು ನೀಡಿ ಗ್ರಾಹಕರಿಗೆ ಲಕ್ಷಾಂತರ ರೂ. ವಂಚಿಸುತ್ತಿದ್ದ ಉತ್ತರಪ್ರದೇಶದ ಅಲಹಾಬಾದಿನ ಮೋಸದ ಜಾಲವೊಂದನ್ನು ಜಂಟಿ ಕಾರ್ಯಾಚರಣೆ ನಡೆಸಿದ ಕುಂದಾಪುರ ಹಾಗೂ ಅಲಹಾಬಾದಿನ ಪೊಲೀಸರು ಭೇದಿಸಿದ್ದು, ವಿಚಾರಣೆಗಾಗಿ ಆರೋಪಿಗಳನ್ನು ಕುಂದಾಪುರದ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Click here

Call us

Call us

ಫಟನೆಯ ವಿವರ:
ವಿದೇಶದ ಸಂತಾಂ ಮತ್ತು ಇಂಡೆಕ್ಸ್ ಟ್ರೇಡರ್ಸ್ ಎಂಬ ವಿದೇಶಿ ಹಣಕಾಸು ಸಂಸ್ಥೆಯು ನಮ್ಮ ಕಂಪೆನಿಯಲ್ಲಿ ನೀವು ಹೂಡಿಕೆ ಮಾಡುವ ಹಣದ ದುಪ್ಪಟ್ಟು ಮೊತ್ತವನ್ನು ಹಿಂಪಡೆಯಬಹುದು (‘ಒನ್ ಟೂ ಡಬ್ಬಲ್ ಸ್ಕೀಮ್) ಎಂಬ ಜಾಹೀರಾತನ್ನು ಅಂತರ್ಜಾಲದಲ್ಲಿ ಪ್ರದರ್ಶನಪಡಿಸಿತ್ತು. ಇದನ್ನು ನೋಡಿದ ವಂಡಾರಿನ ನವೀನ್ ಅಡಿಗ ಎನ್ನುವವರು ರಾಷ್ಟ್ರೀಕೃತ ಬ್ಯಾಂಕೊಂದರ ಮೂಲಕ ಹಣ ಹೂಡಿಕೆ ಮಾಡಿದ್ದರು. ಅವರನ್ನು ನಂಬಿಸಲು ‘ಒನ್ ಟೂ ಡಬ್ಬಲ್ ಸ್ಕೀಮ್’ನಲ್ಲಿ ಪ್ರತಿಭಾರಿಯೂ ಹೂಡಿಕೆ ಮಾಡಿದ ಹಣದ ಎರಡರಷ್ಟು ಮೊತ್ತವನ್ನು ನಮೂದಿಸಿದ ಚೆಕ್ ಹಾಗೂ ಆನ್ಲೈನ್ ಸ್ಟೇಟ್ಮೆಂಟ್ ಗಳನ್ನು ಇಮೇಲ್ ಮೂಲಕ ಕಳುಹಿಸಿ ನಂಬಿಸುತ್ತಿದ್ದರು. ಆದರೆ ನಿಗದಿತ ಅವಧಿಯಲ್ಲಿ ದ್ವಿಗುಣಗೊಂಡ ಹಣ ಕೈಸೇರದಿದ್ದಾಗ ಅನುಮಾನಗೊಂಡ ಅವರು ಕುಂದಾಪುರದ ಪೊಲೀಸರಿಗೆ ದೂರು ನೀಡಿದ್ದರು. ಮೋಸದ ಜಾಲವು ಪ್ರತಿಷ್ಠಿತ ಖಾಸಗಿ ಬ್ಯಾಂಕೊಂದರಲ್ಲಿ ನಕಲಿ ಖಾತೆ ತೆರೆದು ‘ಒನ್ ಟೂ ಡಬ್ಬಲ್ ಸ್ಕೀಮ್’ಗೆ ಚಾಲನೆ ನೀಡಿದ್ದರಲ್ಲದೇ, ನಂಬಿಕೆ ಹುಟ್ಟಿಸಲು ಆರಂಭದಲ್ಲಿ ಕೆಲವರಿಗೆ ಹಣ ನೀಡುತ್ತಿದ್ದರು. ಕುಂದಾಪುರದ ಒಟ್ಟು 5 ಮಂದಿ ‘ಒನ್ ಟೂ ಡಬ್ಬಲ್ ಸ್ಕೀಮ್’ನಲ್ಲಿ ಹಣ ಹೂಡಿಕೆ ಮಾಡಿದ್ದು ಒಟ್ಟು 53ಲಕ್ಷ ರೂ. ಹಣವನ್ನು ಕಳೆದುಕೊಂಡ ಬಗ್ಗೆ ತನಿಕೆಯ ವೇಳೆ ತಿಳಿದುಬಂದಿದೆ.

ಕುಂದಾಪುರ-ಅಲಹಾಬಾದ್ ಪೊಲೀಸರ ಯಶಸ್ವಿ ಕಾರ್ಯಾಚರಣೆ
ನವೀನ್ ಅಡಿಗ ಅವರು ನೀಡಿದ ದೂರಿನಂತೆ ಜನವರಿಯಲ್ಲಿ ಸೈಬರ್ ಅಪರಾಧದ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಕುಂದಾಪುರ ಪೊಲೀಸರು ಸಂತಾಂ ಮತ್ತು ಇಂಡೆಕ್ಸ್ ಟ್ರೇಡರ್ಸ್ ಸಂಸ್ಥೆಯ ಬಗೆಗೆ ಆನ್ಲೈನ್ ನಲ್ಲಿ ಮಾಹಿತಿ ಕಲೆ ಹಾಕಿದಾಗ ಕಂಪೆನಿಯು ಗ್ರಾಹಕರಿಗೆ ವಂಚಿಸುತ್ತಿದೆ ಎಂಬುದು ಅರಿವಿಗೆ ಬಂದಿತ್ತಲ್ಲದೇ ಇದರ ರೂವಾರಿಗಳು ಅಲಹಾಬಾದಿನಲ್ಲಿ ಕಾರ್ಯಾಚರಿಸುತ್ತಿರುವುದು ತಿಳಿದುಬಂದಿತ್ತು. ತಕ್ಷಣ ಉಡುಪಿ ಎಸ್ಪಿ ಅಣ್ಣಾಮಲೈ ಹಾಗೂ ಹೆಚ್ಚುವರಿ ಎಸ್ಪಿ ಸಂತೋಷಕುಮಾರ್ ಹಾಗೂ ಕುಂದಾಪುರ ಡಿವೈಎಸ್ಪಿ ಮಂಜುನಾಥ ಶೆಟ್ಟಿ ಮಾರ್ಗದರ್ಶನದಲ್ಲಿ ಕಾರ್ಯಾಚರಣೆಗಿಳಿದ ಕುಂದಾಪುರ ವೃತ್ತ ನಿರೀಕ್ಷಕ ದಿವಾಕರ್ ಅವರ ತಂಡ ಅಲಹಾಬಾದಿನ ಸೈಬರ್ ಕ್ರೈಮ್ ವಿಭಾಗದ ಹಿರಿಯ ಅಧಿಕಾರಿಗಳ ಮೂಲಕ ಆರೋಪಿಗಳನ್ನು ಜಾಡು ಪತ್ತೆ ಮಾಡಿತ್ತು.

ಪ್ರಕರಣದ ಬಗ್ಗೆ ಅಲಹಾಬಾದಿನ ಪೊಲೀಸರ ಸುಪರ್ದಿಗೆ ಒಪ್ಪಿಸಿದಾಗ, ಅಲ್ಲಿನ ಪೊಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ವಿಚಾರಣೆ ನಡೆಸುತ್ತಿರುವ ನ್ಯಾಯಾಲಯ ಮೂವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಸಂದೀಪ್, ಅರ್ಜಿತ್ ಹಾಗೂ ಸಂದೀಪ್ ಪಾಟೀಲ್ ಬಂಧಿತ ಆರೋಪಿಗಳಾಗಿದ್ದು ಅವರು ಎಲ್.ಎಲ್.ಬಿ, ಎಂಜಿನಿಯರಿಂಗ್ ಹಾಗೂ ಎಂಬಿಬಿಎಸ್ ವಿದ್ಯಾರ್ಥಿಗಳು ಎಂದು ತಿಳಿದುಬಂದಿದೆ. ಕುಂದಾಪುರದ ಪೊಲೀಸರು ಪ್ರಕರಣದ ವಿಚಾರಣೆಗಾಗಿ ಬಂಧಿತರನ್ನು ತಮ್ಮ ಸುಪರ್ದಿಗೆ ನೀಡುವಂತೆ ಮನವಿ ಅಲ್ಲಿನ ಸ್ಥಳೀಯ ನ್ಯಾಯಾಲಯಕ್ಕೆ ಮಾಡಿದ್ದ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ ಆರೋಪಿಗಳನ್ನು ಕುಂದಾಪುರಕ್ಕೆ ಕರೆತರಲು ಅನುಮತಿ ನೀಡಿತ್ತು. ಅದರಂತೆ ಕುಂದಾಪುರ ಪೊಲೀಸರು ಅಲಹಾಬಾದಿನ 15 ಮಂದಿ ಪೊಲೀಸರೊಂದಿಗೆ 3 ಮಂದಿ ಆರೋಪಿಗಳನ್ನು ಕರೆತಂದು ಇಲ್ಲಿನ ಕುಂದಾಪುರದ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಆರೋಪಿಗಳು ತಮ್ಮ ಪರ ವಾದ ಮಂಡಿಸಲು ಇಲ್ಲಿನ ವಕೀಲರನ್ನು ನೇಮಿಸಿಕೊಳ್ಳಲು ಕಾಲಾವಕಾಶ ನೀಡಬೇಕೆಂದು ಮನವಿ ಮಾಡಿಕೊಂಡ ಮೇರೆಗೆ ನ್ಯಾಯಾಲಯ 3 ದಿನಗಳ ಕಾಲಾವಕಾಶ ನೀಡಿ ಜುಲೈ 3ರಂದು ಆರೋಪಿಗಳನ್ನು ಮತ್ತೆ ಹಾಜರುಪಡಿಸುವಂತೆ ಆದೇಶಿಸಿದೆ. ಈ ನಡುವೆ ಕುಂದಾಪುರದ ಪೊಲೀಸರು ಪ್ರಕರಣದ ಸಮಗ್ರ ತನಿಖೆಯ ಹಿತದೃಷ್ಟಿಯಿಂದ ಆರೋಪಿಗಳನ್ನು ತಮ್ಮ ವಶಕ್ಕೆ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆನ್ನಲಾಗಿದೆ.

ಸೈಬರ್ ಕ್ರೈ ಅತ್ಯಂತ ಜಟಿಲವಾದ ಅಪರಾಧವಾಗಿದ್ದು ಈ ವಿಭಾಗದಲ್ಲಿ ಆರೋಪಿಗಳನ್ನು ಪತ್ತೆ ಹಚ್ಚುವುದೇ ಕಷ್ಟಕರ ಕೆಲಸ. ಪ್ರಕರಣವನ್ನು ಗಂಬೀರವಾಗಿ ತೆಗೆದುಕೊಂಡ ಕುಂದಾಪುರದ ಪೊಲೀಸರು ಕೊನೆಗೂ ಮೊಸದ ಜಾಲವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

Online Fraud1

Leave a Reply

Your email address will not be published. Required fields are marked *

9 + 2 =