ಆನ್‌ಲೈನ್ ಭರತನಾಟ್ಯ ಸ್ಪರ್ಧೆಯಲ್ಲಿ ಶರ್ಮದಾ ಪ್ರಥಮ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಹಾಸನದ ನ್ಯಾಷನಲ್ ಕ್ಲಾಸಿಕಲ್ ಡಾನ್ಸ್ ಅಕಾಡೆಮಿ ಇತ್ತೀಚಿಗೆ ಆನ್‌ಲೈನ್ ಮೂಲಕ ನಡೆಸಿದ ಆರನೇ ಹಂತದ ರಾಷ್ಟ್ರ ಮಟ್ಟದ ಭರತನಾಟ್ಯ ಸ್ಪರ್ಧೆಯಲ್ಲಿ ಕೋಟದ ಶರ್ಮದಾ ಎಮ್. ಪ್ರಥಮ ಸ್ಥಾನವನ್ನು ಪಡೆದಿದ್ದಾಳೆ. ಬೇರೆ ಬೇರೆ ರಾಜ್ಯಗಳಿಂದ ಭಾಗವಹಿಸಿದ್ದ ಸ್ಪರ್ಧಿಗಳ ಪೈಕಿ ಶರ್ಮದಾ ಎಮ್. ಅವರೊಂದಿಗೆ ಉಡುಪಿಯ ಅನ್ವಿತಾ ಹಾಗೂ ತೆಲಂಗಾಣದ ಪೆಂಡ್ಯಾಲಾ ಲಕ್ಷ್ಮೀ ಪ್ರಿಯಾ ಮೊದಲ ಸ್ಥಾನವನ್ನು ಹಂಚಿಕೊಂಡಿರುತ್ತಾರೆ.

ಭರತನಾಟ್ಯ ಹಾಗೂ ಸಂಗೀತದಲ್ಲಿ ಆಸಕ್ತಿ ಹೊಂದಿರುವ ಶರ್ಮದಾ ಕಳೆದ ೫ ವರ್ಷಗಳಿಂದ ಸಾಲಿಗ್ರಾಮದ ಚಿತ್ರಪಾಡಿಯ ’ಶ್ರೀ ನಟರಾಜ ನೃತ್ಯ ನಿಕೇತನ’ ಕೇಂದ್ರದಲ್ಲಿ ವಿದೂಷಿ ಭಾಗೀರಥಿ ಎಮ್. ರಾವ್ ಅವರ ಬಳಿ ಭರತನಾಟ್ಯ ಅಭ್ಯಾಸ ಮಾಡುತ್ತಿದ್ದಾರೆ. ೨೦೧೯ ರ ಏಪ್ರಿಲ್-ಮೇ ತಿಂಗಳಲ್ಲಿ ನಡೆದ ಭರತನಾಟ್ಯ ಜ್ಯೂನಿಯರ್ ಪರೀಕ್ಷೆಯಲ್ಲಿ ಶೇಕಡಾ ೯೩ ಅಂಕ ಪಡೆದು ಉರ್ತ್ತೀಣರಾಗಿದ್ದಾರೆ. ಜೊತೆಗೆ ಈ ವರ್ಷ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಜ್ಯೂನಿಯರ್ ಪರೀಕ್ಷೆಯನ್ನು ಬರೆಯಲಿದ್ದಾರೆ.

ಮೂಲತ ಉಪ್ಪುಂದ ಮಕ್ಕಿ ದೇವಸ್ಥಾನದವರಾಗಿದ್ದು, ಪ್ರಸ್ತುತ ಕೋಟದಲ್ಲಿ ನೆಲೆಸಿರುವ ಬೈಂದೂರು ತಹಶೀಲ್ದಾರ್ ಕಛೇರಿಯ ಪ್ರಥಮ ದರ್ಜೆ ಸಹಾಯಕ ರಾಮಚಂದ್ರ ಭಟ್ ಹಾಗೂ ಕೋಟ ವಿವೇಕ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಶೋಭಾ ಅವಭೃತ್ ದಂಪತಿಗಳ ಪುತ್ರಿಯಾದ ಶರ್ಮದಾ, ತೆಕ್ಕಟ್ಟೆಯ ’ವಿಶ್ವ ವಿನಾಯಕ ನ್ಯಾಷನಲ್ ಇಂಗ್ಲೀಷ್ ಮೀಡಿಯಂ ಸ್ಕೂಲ್’ನಲ್ಲಿ ಏಳನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ.

  • ವರದಿ: ವಿಧಾತ್ರಿ ಭಟ್ ಉಪ್ಪುಂದ

 

Leave a Reply

Your email address will not be published. Required fields are marked *

10 − five =