ಆಮ್ ಆದ್ಮಿ ವಿಮಾ ಫಲಾನುಭವಿಗಳ ನೋಂದಣಿ ಶಿಬಿರ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಮರವಂತೆ ಗ್ರಾಮ ಪಂಚಾಯಿತಿ ಮತ್ತು ಕಾರ್ಮಿಕ ಇಲಾಖೆಯ ಏಕಗವಾಕ್ಷಿ ಯೋಜನೆಯ ಸಂಯುಕ್ತ ಆಶ್ರಯದಲ್ಲಿ ಗ್ರಾಮ ಪಂಚಾಯತ್ ಸುವರ್ಣ ಸಭಾಭವನದ ಅಟಲ್ ಬಿಹಾರಿ ವಾಜಪೇಯಿ ವೇದಿಕೆಯಲ್ಲಿ ಕಟ್ಟಡ ನಿರ್ಮಾಣ ಕಾರ್ಮಿಕರ ಮತ್ತು ಆಮ್ ಆದ್ಮಿ ವಿಮಾ ಯೋಜನೆಯ ಫಲಾನುಭವಿಗಳ ನೋಂದಣಿ ಶಿಬಿರ ಮಂಗಳವಾರ ನಡೆಯಿತು.

Call us

Call us

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನಿತಾ ಆರ್. ಕೆ. ಅಧ್ಯಕ್ಷತೆ ವಹಿಸಿದ್ದರು. ಎರಡು ಯೋಜನೆಗಳ ಮಾಹಿತಿ ನೀಡಿದ ಏಕಗವಾಕ್ಷಿ ಯೋಜನೆಯ ಸಂಯೋಜಕ ಮಂಜುನಾಥ ಕಟ್ಟಡ ಕಾರ್ಮಿಕರಿಗೆ ಮತ್ತು ಅವರ ಕುಟುಂಬದ ಸದಸ್ಯರಿಗೆ ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿಯಿಂದ ಸಿಗುವ ಸೌಲಭ್ಯಗಳನ್ನು ವಿವರಿಸಿದರು. ಆಮ್‌ಆದ್ಮಿ ವಿಮಾ ಯೋಜನೆಯಿಂದ ಬಡತನ ರೇಖೆಯ ಕೆಳಗಿರುವವರಿಗೆ ದೊರೆಯುವ ಸೌಲಭ್ಯ ಮತ್ತು ಪರಿಹಾರಗಳ ಮಾಹಿತಿ ನೀಡಿದರು.

ಕಾರ್ಯದರ್ಶಿ ಹರಿಶ್ಚಂದ್ರ ಆಚಾರ್ಯ ಸ್ವಾಗತಿಸಿ, ವಂದಿಸಿದರು. ಉಪಾಧ್ಯಕ್ಷ ಗಣೇಶ ಪೂಜಾರಿ, ಕಾರ್ಮಿಕ ನಿರೀಕ್ಷಕ ಸತ್ಯನಾರಾಯಣ ಉಪಸ್ಥಿತರಿದ್ದರು. ಶಿಬಿರದಲ್ಲಿ ಎರಡು ಯೋಜನೆಯಡಿ ಸುಮಾರು ೨೫೦ ಜನರು ನೋಂದಣಿ ಮಾಡಿಸಿಕೊಂಡರು.

Call us

Call us

2 thoughts on “ಆಮ್ ಆದ್ಮಿ ವಿಮಾ ಫಲಾನುಭವಿಗಳ ನೋಂದಣಿ ಶಿಬಿರ

Leave a Reply

Your email address will not be published. Required fields are marked *

five × five =