ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಆಯುಷ್ ಧಾಮ ಆರ್ಥೋ ನ್ಯೂರೋ ಆಸ್ಪತ್ರೆ, ಹಿರಿಯ ನಾಗರಿಕರ ವೇದಿಕೆ ಮತ್ತು ನಿವೃತ್ತ ಸರಕಾರಿ ನೌಕರರ ಸಂಘ ಕುಂದಾಪುರ, ಇವರ ಆಶ್ರಯದಲ್ಲಿ ಉಚಿತ ಆರೋಗ್ಯ ಶಿಬಿರ ಆಯೋಜಿಸಲಾಗಿದ್ದು, ಕುಂದಾಪುರ ಸಹಾಯಕ ಆಯುಕ್ತ ಕೆ. ರಾಜು ಶಿಬಿರವನ್ನು ಉದ್ಘಾಟಿಸಿದರು.
ಉದ್ಘಾಟಿಸಿ ಮಾತನಾಡಿದ ಸಹಾಯಕ ಆಯುಕ್ತ ಕೆ. ರಾಜು, ಕೋವಿಡ್ 19 ಇದರ ನಿರ್ವಹಣೆಯಲ್ಲಿ ಆಯುಷ್ ಚಿಕಿತ್ಸಾ ಪದ್ಧತಿ ಪರಿಣಾಮಕಾರಿಯಾಗಿದ್ದು ಈಗೀಗ ಹೆಚ್ಛೆಚ್ಚು ಜನರು ಅದರ ಸದುಪಯೋಗ ಮನಗಂಡಿದ್ದಾರೆ. ಹಾಗೆಯೇ ಇನ್ನಿತರ ರೋಗಗಳನ್ನು ನಿಭಾಯಿಸುವಲ್ಲಿ ಆಯುಷ್ ಚಿಕಿತ್ಸಾ ಪದ್ಧತಿ ಪರ್ಯಾಪ್ತವಾಗಿದೆ ಎಂದರು.
ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಬಿ ವಿನಯಚಂದ್ರ ಶೆಟ್ಟಿ ಮಾತನಾಡಿ, ಹಿರಿಯ ನಾಗರಿಕರ ಮನೋದೈಹಿಕ ಸಮಸ್ಯೆಗಳು, ಅವುಗಳ ಪರಿಣಾಮಕಾರಿ ಚಿಕಿತ್ಸೆ, ಸಂಯೋಜನ ಚಿಕಿತ್ಸಾ ಪದ್ಧತಿಯ ಅಗತ್ಯತೆ ಹಾಗೂ ವೃದ್ದಾಪ್ಯಾದಲ್ಲಿ ಗುಣಮಟ್ಟದ ಅರೋಗ್ಯ ಕಾಪಾಡುವಲ್ಲಿ ಪರ್ಯಾಯ ಚಿಕಿತ್ಸಾ ಪದ್ಧತಿಗಳ ಮಹತ್ವದ ಬಗ್ಗೆ ವಿವರಿಸಿದರು.
ಆಯುರ್ವೇದ, ಯೋಗ, ನ್ಯಾಚುರೋಪತಿ, ಫಿಸಿಯೋಥೆರಪಿ, ಮರ್ಮ ಚಿಕಿತ್ಸೆ ಮುಂತಾದ ಚಿಕಿತ್ಸಾ ಪರಿಕ್ರಮ ಗಳ ಸಂಯೋಜನಾ ಪರಿಹಾರೋಪಾಯ,ಎಲ್ಲ ಚಿಕಿತ್ಸಾ ಪರಿಕರಗಳ ವ್ಯವಸ್ಥೆ ಗಳು, ಪ್ರಯೋಗಾಲಯ, ಔಷಧಾಲಯ, ಪಥ್ಯಾ ಆಹಾರ ವಿಭಾಗಗಳ ಸುಸಜ್ಜಿತ ವ್ಯವಸ್ಥೆ ಆಯುಷ್ ಧಾಮ ಆಸ್ಪತ್ರೆ ಯಲ್ಲಿ ಲಭ್ಯವಿದ್ದು, ಹಿರಿಯ ನಾಗರಿಕರು ವಿಶೇಷ ರಿಯಾಯಿತಿಯ ಆರೋಗ್ಯ ಸೌಲಭ್ಯವನ್ನು ಪಡೆದುಕೊಳ್ಳಬೇಕಾಗಿ ತಿಳಿಸಿದರು.
ಹಿರಿಯ ನಾಗರಿಕರ ವೇದಿಕೆ ಅಧ್ಯಕ್ಷ ಎಂ. ಪುಂಡಲೀಕ ಗಾಣಿಗ ಸಭೆಯ ಅಧ್ಯಕ್ಷತೆ ವಹಿಸಿದ್ದು, ನಿವೃತ್ತ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸಿ. ಹೆಚ್. ಜಗನ್ನಾಥ ಶೆಟ್ಟಿ, ಹಿರಿಯ ನಾಗರಿಕರ ವೇದಿಕೆ ಗೌರವ ಅಧ್ಯಕ್ಷ ಕೆ. ಜಿ. ರಮಾನಂದ ಹಾಗೂ ಆಯುಷ್ ಧಾಮ ಆಸ್ಪತ್ರೆಯ ಚೇರ್ಮೆನ್ ಸದಾಶಿವ ಶೆಟ್ಟಿ ವೇದಿಕೆ ಯಲ್ಲಿ ಉಪಸ್ಥಿತರಿದ್ದರು. ಶಿಬಿರದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಯುಷ್ ಕ್ವಾಥ ವಿತರಣೆ, ಉಚಿತ ರಕ್ತಪರೀಕ್ಷೆ ಮತ್ತು ಉಚಿತ ತಪಾಸಣೆ ನಡೆಸಲಾದ ಈ ಅರೋಗ್ಯ ಶಿಬಿರದ ಪ್ರಯೋಜನವನ್ನು ಸುಮಾರು ನೂರಕ್ಕೂ ಮಿಕ್ಕಿ ಜನರು ಪಡೆದುಕೊಂಡರು