ಆರೋಗ್ಯ ಸಹಾಯಕ ಆತ್ಮಹತ್ಯೆಗೆ ಕಾರಣವಾಯಿತೇ ಪ್ರೀತಿ?

Call us

Call us

Call us

Call us

ಕುಂದಾಪುರ: ತಾಲೂಕಿನ ದೇವಲ್ಕುಂದ ಆರೋಗ್ಯ ಉಪ ಕೇಂದ್ರದಲ್ಲಿ ಕಿರಿಯ ಆರೋಗ್ಯ ಸಹಾಯಕನಾಗಿ ಕಾರ್ಯನಿರ್ವಹಿಸುತ್ತಿದ್ದ ಕಿರಣ (28) ನಿನ್ನೆ ರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಬೆಳಕಿಗೆ ಬಂದಿದೆ.

Call us

Click Here

Click here

Click Here

Call us

Visit Now

Click here

ಮೂಲತಃ ಚಿತ್ರದುರ್ಗದ ಎ.ಎಸ್.ಐ ಕೆಂಚರಪ್ಪ ಅವರ ಮಗನಾದ ಕಿರಣ, ತಾನು ಪ್ರೀತಿಸುತ್ತಿದ್ದ ಹುಡುಗಿ ತನನ್ನು ತಿರಸ್ಕರಿಸಿದ್ದಾಳೆಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಶಂಕಿಸಲಾಗಿದೆ.

2009ರಲ್ಲಿ ಆರೋಗ್ಯ ಇಲಾಖೆಯ ನೌಕರನಾಗಿ ಗಂಗೊಳ್ಳಿಗೆ ನೇಮಕಗೊಂಡಿದ್ದ ಕಿರಣ್, ಕಳೆದ ಒಂದು ವರ್ಷದ ಹಿಂದಷ್ಟೇ ದೇವಲ್ಕುಂದದ ಉಪ ಆರೋಗ್ಯ ಕೇಂದ್ರದಲ್ಲಿ ಕಿರಿಯ ಆರೋಗ್ಯ ಸಹಾಯಕನಾಗಿ ವರ್ಗವಣೆಗೊಂಡಿದ್ದರು. ಆರೋಗ್ಯ ಕೇಂದ್ರದ ಬಳಿಯೇ ಇದ್ದ ವಸತಿಗೃಹದಲ್ಲಿ ಅವರು ವಾಸವಾಗಿದ್ದರು.

ನಿನ್ನೆ ಬೆಳಿಗ್ಗೆ ಗಂಗೊಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕಿರಣ್, ಮಧ್ಯಾಹ್ನದವರೆಗೆ ಸಹೋದ್ಯೊಗಿಗಳೊಂದಿಗೆ ಕಾಲ ಕಳೆದು ಬಳಿಕ ದೇವಲ್ಕುಂದದ ವಸತಿ ಗೃಹಕ್ಕೆ ತೆರಳಿದ್ದರು. ರಾತ್ರಿಯ ವರೆಗೆ ವಸತಿಗೃಹದಲ್ಲಿಯೇ ತಂಗಿದ್ದ ಕಿರಣ್ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇವತ್ತು ಬೆಳಿಗ್ಗೆ ಆಶಾ ಕಾರ್ತಕರ್ತೆಯೊಬ್ಬರು ಕಿರಣ್ ಮೊಬೈಲಿಗೆ ಎಷ್ಟು ಕರೆ ಮಾಡಿದರೂ ಸ್ವೀಕರಿಸದಿದ್ದಾಗ ಗಂಗೊಳ್ಳಿಯ ಇನ್ನೊರ್ವ ಆರೋಗ್ಯ ಸಹಾಯಕರ ಮೂಲಕ ಕರೆ ಮಾಡಿಸಿದ್ದಾರೆ. ಅವಾಗಲೂ ಕರೆ ಸ್ವೀಕರಿಸದ್ದಿದ್ದದ್ದರಿಂದ ಸೀದಾ ಅವರ ತಂಗಿದ್ದ ವಸತಿಗೆ ತೆರಳಿ ಬಾಗಿಲು ತೆರೆದಾಗ ಕಿರಣ ಮೃತದೇಹ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮೃತ ಕಿರಣ್ ಬಳಿ ಏಳು ಮೊಬೈಲ್ ಫೋನ್ ಇದ್ದು ಹಲವಾರು ಸಿಮ್‌ ಕಾರ್ಡುಗಳಿದ್ದವು.

Call us

ಬೈಂದೂರು ಶಾಸಕ ಗೋಪಾಲ ಪೂಜಾರಿ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಕುಂದಾಪುರ ಪಿಎಸ್ಐ ನಾಸಿರ್ ಹುಸೇನ್ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.‍

Leave a Reply

Your email address will not be published. Required fields are marked *

3 × 2 =