ಆರ್‌ಎಸ್‌ಎಸ್‌ಗೆ ಸಮರ್ಪಣಾ ಸಂಕೇತವಾದ ಭಾಗವಧ್ವಜವೇ ಗುರು: ರವೀಂದ್ರ ಪುತ್ತೂರು

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಭಾರತ ದೇಶದಲ್ಲಿ ಗುರುಪರಂಪರೆಗೆ ವಿಶಿಷ್ಟ ಸ್ಥಾನವಿದೆ. ಪ್ರತಿಯೊಬ್ಬರ ಬದುಕಿನಲ್ಲೂ ಸನ್ಮಾರ್ಗವನ್ನು ತೋರಿಸುವ, ಕತ್ತಲೆಯಿಂದ ಬೆಳಕಿನೆಡೆಗೆ ನಡೆಸುವ ಮಹಾನ್ ಚೇತನ ಗುರು ಮಾತ್ರ ಎಂದು ಮಂಗಳೂರು ವಿಭಾಗ ಆರ್‌ಎಸ್‌ಎಸ್ ಸಂಪರ್ಕ ಪ್ರಮುಖ್ ರವೀಂದ್ರ ಪುತ್ತೂರು ಹೇಳಿದರು.

Call us

Call us

Call us

ಯಡ್ತರೆ ಜೆಎನ್‌ಆರ್ ಕಲಾಮಂದಿರದಲ್ಲಿ ನಡೆದ ’ಗುರುಪೂಜೆ’ ಕಾರ್ಯಕ್ರಮದ ಬೌದ್ಧಿಕ್‌ನಲ್ಲಿ ಮಾತನಾಡಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ಯಾವುದೇ ವ್ಯಕ್ತಿ ಗುರುವಾಗಲಾರ. ಆ ದಿಸೆಯಲ್ಲಿ ಆ ಸ್ಥಾನದಲ್ಲಿ ಸಂಘದ ಸ್ಥಾಪಕರಾದ ಡಾ. ಹೆಡಗೆವಾರು ಅವರು ಜ್ಞಾನ, ಪರಾಕ್ರಮ, ತ್ಯಾಗ ಹಾಗೂ ಸಮರ್ಪಣಾ ಸಂಕೇತವಾಗಿರುವ ಭಗವಾಧ್ವಜವನ್ನು ಗುರುವಾಗಿ ಪೂಜಿಸಲು ಪ್ರಾರಂಭಿಸಿದರು. ಒಂದು ಸಂಘಟನೆಯ ಪ್ರಮುಖ ವ್ಯಕ್ತಿ ಯಾರಾದರೂ ಆ ವ್ಯಕ್ತಿಗೆ ಸಾವಿದೆ. ಆತನ ಮರಣಾ ನಂತರ ಅದನ್ನು ಮುನ್ನೆಡೆಸಲು ಯೋಗ್ಯ ವ್ಯಕ್ತಿಗಳು ಇಲ್ಲದಿದ್ದರೆ ಅಂತಹ ಸಂಘಗಳು ಅವನತಿ ಹೊಂದುತ್ತದೆ. ಅದನ್ನು ಯೋಚಿಸಿ ಸಂಘವು ಅಜರಾಮರವಾಗಿರಬೇಕೆಂಬ ಉದ್ದೇಶದಿಂದ ಸ್ಥಾಪಕರು ಈ ನಿರ್ಧಾಕ್ಕೆ ಬಂದರು. ಹಾಗಾಗಿ ಕಳೆದ ೯೦ ವರ್ಷಗಳಿಂದ ಸಂಘದ ಸ್ವಯಂ ಸೇವಕರು ಭಗವಾಧ್ವಜವನ್ನು ಗುರುವಾಗಿ ಪೂಜಿಸುತ್ತಾ ಬಂದಿದ್ದಾರೆ ಎಂದರು.

Call us

Call us

ಉದ್ಯಮಿ ಅಶೋಕ್‌ಕುಮಾರ್ ಬಾಡ ಅಧ್ಯಕ್ಷತೆ ವಹಿಸಿದ್ದರು. ಮೂರ್ತಿ ಬೈಂದೂರು ಹಾಡಿದರು. ಸೇರಿದ ನೂರಾರು ಸ್ವಯಂ ಸೇವಕರು ಭಗವಾಧ್ವಜಕ್ಕೆ ಪ್ರಣಾಮ್ ಸಲ್ಲಿಸಿ ಹೂವು ಹಾಗೂ ಮಂತ್ರಾಕ್ಷತೆಗಳಿಂದ ಅರ್ಚಿಸಿ, ಗುರುಕಾಣಿಕೆ ಅರ್ಪಿಸಿದರು.

Leave a Reply

Your email address will not be published. Required fields are marked *

2 × four =