ಆರ್‌ಜೆಗಳಾಗಬೇಕೆ? ಪಟಪಟನೆ ಮಾತನಾಡುತ್ತೀರಾ?

Click Here

Call us

Call us

ನಾ ಮುಂದು, ತಾ ಮುಂದು ಎಂದು ಎಫ್‌ಎಂ ಚಾನೆಲ್‌ಗಳು ಆರಂಭವಾಗುತ್ತಿವೆ. ಮಧ್ಯಮ ಪ್ರಮಾಣದ ಬಂಡವಾಳ ತೊಡಗಿಸಿದರೆ ಹೆಚ್ಚಿನ ಲಾಭ ಇದರಲ್ಲಿ ಸಿಗುತ್ತದೆ ಎಂಬುದು ಕಾರಣ. ಒಂದು ಲಕ್ಷ ಮಿಕ್ಕಿ ಜನಸಂಖ್ಯೆ ಹೊಂದಿರುವ ನಗರಗಳಲ್ಲಿ ಎಫ್‌ಎಂ ಆರಂಭಕ್ಕೆ ವೇದಿಕೆ ಸಿದ್ಧವಾಗಿದೆ. ಭಾರತದಲ್ಲಿ 839 ಹೊಸ ಎಫ್‌ಎಂ ಚಾನೆಲ್‌ಗಳ ಆರಂಭಕ್ಕೆ ಅನುಮತಿ ಸಿಕ್ಕಿದೆ.

Call us

Call us

Visit Now

ಬೆಂಗಳೂರು,ಹುಬ್ಬಳ್ಳಿ- ಧಾರವಾಡ ಬೆಳಗಾವಿ,ಗುಲ್ಬರ್ಗಾ,ಮಂಗಳೂರು, ಮೈಸೂರು,ಮುಂತಾದ ನಗರಗಳಲ್ಲಿ ಸದ್ಯದಲ್ಲೇ ಎಫ್‌ಎಂ ಕಾರ್ಯಾರಂಭ ಮಾಡಲಿವೆ. ಇದರಿಂದಾಗಿ ಆರ್‌ಜೆಗಳಿಗೆ ಬೇಡಿಕೆ ಉಂಟಾಗಿದೆ. ಸದ್ಯ ಬೆಂಗಳೂರಿನಲ್ಲಿ ನಾಲ್ಕೈದು ಎಫ್‌ಎಂಗಳು ಕಾರ್ಯನಿರ್ವಹಿಸುತ್ತಿವೆ. ಆದರೂ ಇನ್ನೂ ನಾಲ್ಕು ಎಫ್‌ಎಂ ಕಾರ್ಯಾರಂಭ ಮಾಡುವ ಸಾಧ್ಯತೆಯಿದೆ. ಹುಬ್ಬಳ್ಳಿ-ಧಾರವಾಡದಲ್ಲಿ ಸದ್ಯ ಆಕಾಶವಾಣಿಯ ಒಂದು ಚಾನೆಲ್ ಕಾರ್ಯ ನಿರ್ವಹಿಸುತ್ತಿದೆ.

Click Here

Click here

Click Here

Call us

Call us

ಧಾರವಾಡದ ಕಷಿ ವಿಶ್ವವಿದ್ಯಾಲಯದಲ್ಲಿ ಮತ್ತೊಂದು ಬಿವಿಬಿ ಎಂಜಿನಿಯರ್ ಕಾಲೇಜಿನಲ್ಲಿ ಕೆಲವೇ ದಿನಗಳ ಹಿಂದಷ್ಟೆ ಸಮುದಾಯ ಬಾನುಲಿ ಕೇಂದ್ರ ಆರಂಭವಾಗಿದೆ. ಇಲ್ಲಿಯು ನಾಲ್ಕು ಎಫ್‌ಎಂ ಮತ್ತು ಗುಲ್ಬರ್ಗಾ ನಗರದಲ್ಲೂ ಎಫ್‌ಎಂ ಚಾನೆಲ್‌ಗಳು ಸದ್ಯ ಆರಂಭವಾಗಲಿವೆ. ಬೆಳಗಾವಿಯ ಕೆಎಲ್‌ಇ ಸಂಸ್ಥೆಯಲ್ಲಿ ಕೆಎಲ್‌ಇ ಧ್ವನಿ ಎಂಬ ಚಾನೆಲ್ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ಮಹಾನಗರಗಳಲ್ಲಿ ಆರಂಭವಾಗುವ ಎಫ್‌ಎಂಗಳಿಗೆ ಸಾಕಷ್ಟು ಸಂಖ್ಯೆಯಲ್ಲಿ ರೇಡಿಯೊ ಜಾಕಿಗಳು ಬೇಕಾಗಿದ್ದಾರೆ.

ಆರ್ ಜೆಗಳಾಗಲು ಅರ್ಹತೆಗಳೇನು?: ಪದವಿ, ಸ್ನಾತಕ ಪದವಿ, ಪಡೆದಿದ್ದರೆ ಉತ್ತಮ. ಚಾಕಚಕ್ಯತೆಯಿಂದ ಮಾತನಾಡುವ ಕಲೆ, ಅರಳು ಹುರಿದಂತೆ ಪಟಪಟನೆ ಮಾತನಾಡುವ ವೇಗ, ಪ್ರಚಲಿತ ವಿದ್ಯಮಾನಗಳ ಅರಿವು, ಸಂದರ್ಶನ ಮಾಡುವ ಕಲೆ, ಪಾರಸ್ಪರಿಕ ಸಂವಹನ ಕಲೆ, ಯುವಜನರನ್ನು ಸೆಳೆಯುವ ಕೌಶಲ. ಹೊಸ ಕಾರ್ಯಕ್ರಮ ರೂಪಿಸುವ ಜತೆಗೆ ಸೂಕ್ತವಾಗಿ ನಿರ್ವಹಿಸಲು ನೀವು ಸಬಲರಾಗಿದ್ದರೆ ಒಳ್ಳೆಯ ಅವಕಾಶಗಳುಂಟು.

ಯಾರ‌್ಯಾರು ಆರ್ ಜೆಗಳಾಗಬಹುದು?: ಎಲ್ಲರಿಗೂ ಮುಕ್ತ ಅವಕಾಶ, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಉಪನ್ಯಾಸಕರು, ಸಾಫ್ಟವೇರ್ ಎಂಜಿನಿಯರ್ಸ್‌ , ಸರ್ಕಾರಿ ಮತ್ತು ಖಾಸಗಿ ವಲಯದ ಉದ್ಯೋಗಿಗಳು ತಮ್ಮ ಬಿಡುವಿನ ವೇಳೆಯಲ್ಲಿ ಕೆಲಸ ಮಾಡಬಹುದು. ಅದಕ್ಕೆ ತಕ್ಕ ಸಂಭಾವನೆಯನ್ನು ಕೂಡಾ ನೀಡಲಾಗುತ್ತದೆ. ನಿಮ್ಮ ಕನಸು ನನಸಾಗುವ ಸಮಯ ಬಂದಿದೆ ಹಾಗಾದರೆ ಮತ್ತೇಕೆ ತಡ, ಪ್ರ್ಯಾಕ್ಟೀಸು ಶುರು ಹಚ್ಕೋಳ್ಳಿ. ಇನ್ನು ಕೆಲವೇ ದಿನಗಳಲ್ಲಿ ಚಾನೆಲ್‌ನವರು ಆರ್ ಜೆಗಳನ್ನು ಹುಡುಕುವ ಕೆಲಸ ಆರಂಭಿಸಲಿದ್ದಾರೆ.

ರೇಡಿಯೊ ಸಿಟಿ 91.1 ಎಫ್‌ಎಂ ನಲ್ಲಿ ವಿದ್ಯಾರ್ಥಿಗಳು 3 ತಿಂಗಳು ಇಂಟರ್ನಶಿಫ್ ಮಾಡಬೇಕಾಗುತ್ತದೆ. ಕೋರ್ಸ್ ಅವ 6 ತಿಂಗಳುಗಳಾಗಿದ್ದು, ಅಭ್ಯರ್ಥಿಗಳು 30 ವರ್ಷವನ್ನು ಮೀರಿರಬಾರದು.

* ಮಲ್ಲಿಕಾರ್ಜುನ ದಾಸನಕೊಪ್ಪ

Leave a Reply

Your email address will not be published. Required fields are marked *

five × two =