ಆಳ್ವಾಸ್‌ನಲ್ಲಿ ಪಿಸಿಒಎಸ್ ಕುರಿತು ಮಾಹಿತಿ ಕಾರ್ಯಗಾರ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದರೆ: ಆಳ್ವಾಸ್ ಕಾಲೇಜಿನ ವುಮೆನ್ ಡೆವಲಪ್‌ಮೆಂಟ್ ಸೆಲ್ ವತಿಯಿಂದ ಮಹಿಳಾ ದಿನಾಚರಣೆಯ ಅಂಗವಾಗಿ ನಡೆಯುತ್ತಿರುವ ‘ಮಹಿ-2021’ ಮಹಿಳಾ ಸಪ್ತಾಹದಲ್ಲಿ ಮಹಿಳಾ ಆರೋಗ್ಯದ ಕುರಿತು ಅತಿಥಿ ಉಪನ್ಯಾಸ ನಡೆಯಿತು.

Call us

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಆಳ್ವಾಸ್ ನ್ಯಾಚುರೋಪತಿ ಕಾಲೇಜಿನ ಉಪನ್ಯಾಸಕಿ ಡಾ.ಸ್ವಾತಿ ಪಿ.ಎಸ್., ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಪಿಸಿಒಸ್ (ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್) ಬಗ್ಗೆ ವಿದ್ಯಾರ್ಥಿನಿಯರಿಗೆ ಮಾಹಿತಿ ನೀಡಿದರು.

ಹುಡುಗಿಯರು ತಮ್ಮ ದೇಹದ ಆರೋಗ್ಯ ಹಾಗೂ ಋತುಚಕ್ರದ ಕುರಿತು ಹೆಚ್ಚಿನ ಕಾಳಜಿ ವಹಿಸಬೇಕು. ಪಿಸಿಒಎಸ್ ಸಮಸ್ಯೆ ಇರುವ ಮಹಿಳೆಯರ ಹಾರ್ಮೋನ್ ಸ್ರವಿಕೆಯಲ್ಲಿ ಏರಿಳಿತಗಳಿದ್ದು ಅದು ಸಮಸ್ಯೆಗಳನ್ನು ಸೃಷ್ಟಿಸಬಹುದು. ಇಂತಹ ಸಂದರ್ಭಗಳಲ್ಲಿ ಹುಡುಗಿಯರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದ ಅವರು ಪಿಸಿಒಎಸ್‌ನ ಲಕ್ಷಣಗಳನ್ನು ವಿವರಿಸಿದರು.

Call us

ಪಿಸಿಒಎಸ್‌ನಂತಹ ಸಮಸ್ಯೆಗಳುಂಟಾದಾಗ ವಹಿಸಬೇಕಾದ ಎಚ್ಚರಿಕೆಯ ಕ್ರಮಗಳ ಬಗ್ಗೆ ಹೇಳಿದ ಅವರು ಮಹಿಳಾ ಆರೋಗ್ಯದ ಪಂಚತಂತ್ರಗಳನ್ನು ವಿವರಿಸಿದರು. ದಿನನಿತ್ಯ ಯೋಗ-ವ್ಯಾಯಾಮ-ಧ್ಯಾನ, ಪ್ರಾರ್ಥನೆ, ನಿಯಮಿತ ನೀರು ಸೇವನೆ, ನಿಗದಿತ ಆಹಾರ ಹಾಗೂ ವಾರದಲ್ಲೊಂದು ದಿನ ಉಪವಾಸ ದೇಹಾರೋಗ್ಯವನ್ನು ಸರಿಯಾಗಿಡಲು ಸಹಾಯ ಮಾಡುತ್ತದೆ. ಯೋಗ ಮತ್ತು ಧ್ಯಾನಗಳು ಮನಸ್ಸು ಮತ್ತು ದೇಹವನ್ನು ನಿಯಂತ್ರಣದಲ್ಲಿಡುತ್ತವೆ. ಇಂತಹ ಆರೋಗ್ಯಕರ ನಿಯಮಗಳನ್ನು ಪಾಲನೆ ಮಾಡುವುದು ಅಗತ್ಯ ಎಂದರು.

ಕಾರ್ಯಕ್ರಮದಲ್ಲಿ ಕಾಲೇಜಿನ ವುಮೆನ್ ಡೆವಲಪ್‌ಮೆಂಟ್ ಸೆಲ್‌ನ ಸಂಯೋಜಕಿ ಶಾಝಿಯಾ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ಸ್ನಾತಕೋತ್ತರ ರಸಾಯನ ಶಾಸ್ತ್ರ ವಿಭಾಗದ ಉಪನ್ಯಾಸಕಿ ಶ್ರುತಿ ಹಾಗೂ ಭೌತಶಾಸ್ತ್ರ ವಿಭಾಗದ ನೂರ್‌ಜಹಾನ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಾದ ದಾಸರಿಸ್ವರ್ಣ ಕಾರ್ಯಕ್ರಮ ನಿರೂಪಿಸಿದರು. ಹಾಗೂ ರಫೀಯಫತೀಮ ಕಾರ್ಯಕ್ರಮವನ್ನು ವಂದಿಸಿದರು

Leave a Reply

Your email address will not be published. Required fields are marked *

nineteen + 6 =