ಆಳ್ವಾಸ್‌ನಲ್ಲಿ ರಿಮೋಟ್ ಎಜುಕೇಶನ್ ಸಿಸ್ಟಮ್‌ಗೆ ಚಾಲನೆ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ:
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಳ್ವಾಸ್ ಅಕಾಡೆಮಿ ಫಾರ್ ಎಕ್ಸಲೆನ್ಸ್ ವತಿಯಿಂದ ಆಳ್ವಾಸ್ ರಿಮೋಟ್ ಎಜುಕೇಶನ್ ಸಿಸ್ಟಮ್ (ಎ ಆರ್ ಇ ಎಸ್)ಗೆ ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಡಿಜಿಟಲ್ ಚಾಲನೆ ನೀಡಿದರು.

Click here

Click Here

Call us

Call us

Visit Now

Call us

Call us

ಜಾಗತಿಕವಾಗಿ ಕಾಡಿದ ಸಾಂಕ್ರಾಮಿಕ ರೋಗವು ಶೈಕ್ಷಣಿಕ ಚಟುವಟಿಕೆಗಳ ಮೇಲೆ ದುಷ್ಪರಿಣಾಮ ಬೀರಿದೆ. ವಿದ್ಯಾರ್ಥಿಗಳಿಗೆ ಸಿಇಟಿ, ನೀಟ್, ಜೆಇಇ ಹಾಗೂ ಇತರ ಕೋರ್ಸ್ಗಳಿಗೆ ಸರಿಯಾದ ತರಬೇತಿ ಸಿಗುತ್ತಿಲ್ಲ ಎನ್ನುವ ಕಾರಣದಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ನುರಿತ ಶಿಕ್ಷಕರು ಆನ್ಲೈನ್ ಮುಖೇನ 8ರಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಫೌಂಡೇಶನ್ ಕೋರ್ಸ್, ಪಿಯುಸಿ ವಿದ್ಯಾರ್ಥಿಗಳಿಗೆ ನೀಟ್, ಜೆಇಇ, ಸಿಇಟಿ ಕ್ರಾಶ್ ಕೋರ್ಸ್ ಹಾಗೂ ಪ್ರಶ್ನೋತ್ತರ ಮಾಲಿಕೆಯನ್ನು ಆಳ್ವಾಸ್ ರಿಮೋಟ್ ಎಜುಕೇಶನ್ ಸಿಸ್ಟಮ್ ಯೋಜನೆಯಲ್ಲಿ ಒದಗಿಸಲಾಗುತ್ತಿದೆ.

ಈ ಯೋಜನೆಯು ಎಲ್ಲಾ ವರ್ಗದ ಜನರಿಗೂ ಸುಲಭವಾಗಿ ತಲುಪುವಂತೆ ಮಿತವಾದ ದರದಲ್ಲಿ ಗುಣಮಟ್ಟದ ಶಿಕ್ಷಣ, ನೇರ ತರಗತಿ, ಚಿತ್ರೀಕರಿಸಿದ ವಿಡಿಯೋ ತರಗತಿ, ಕಲಿಕಾ ಸಾಮಗ್ರಿ, ಪರೀಕ್ಷೆಗಳು, ದಿನನಿತ್ಯ ಅಭ್ಯಾಸ ಪ್ರಶ್ನೆ ಪತ್ರಿಕೆಗಳು, ಕಲಿಕಾ ಸಂಶಯ ನಿವಾರಣಾ ಕಾರ್ಯವನ್ನು ಒಳಗೊಂಡಿದೆ. ಹೆಚ್ಚಿನ ಮಾಹಿತಿಗೆ https://alvas.co.in/ ವೆಬ್ಸೈಟ್ ನ್ನು ಪರಿಶೀಲಿಸಬಹುದು.

ಉದ್ಘಾಟನಾ ಸಮಾರಂಭದಲ್ಲಿ ಮ್ಯಾನೇಜ್ಮೆಂಟ್ ಟ್ರಸ್ಟಿ ವಿವೇಕ್ ಆಳ್ವ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ. ಸದಾಕತ್, ಗಣಿತ ಶಿಕ್ಷಕಿ ವಿದ್ಯಾ, ಎ ಆರ್ ಇಎಸ್ ಸಂಯೋಜಕ ಪ್ರೀತಮ್ ಕ್ಯಾಸ್ಟಲಿನೊ ಉಪಸ್ಥಿತರಿದ್ದರು. ಕನ್ನಡ ಪ್ರಾಧ್ಯಾಪಕ ಗುರುಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

fifteen − nine =