ಆಳ್ವಾಸ್‌ನಲ್ಲಿ ವಿರೇಚನ ಶಿಬಿರಕ್ಕೆ ಚಾಲನೆ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ:
ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಆಸ್ಪತ್ರೆಯ ಪಂಚಕರ್ಮ ಸ್ನಾತಕೋತ್ತರ ವಿಭಾಗದ ವತಿಯಿಂದ ಆಕ್ಟೊಬರ್ 7ರಿಂದ ಡಿಸೆಂಬರ್ 4ರವರೆಗೆ ನಡೆಯಲಿರುವ ವಿರೇಚನ ಶಿಬಿರಕ್ಕೆ ಡಾ. ಎಂ. ಮೋಹನ್ ಆಳ್ವ ಚಾಲನೆ ನೀಡಿದರು.

Call us

Call us

ಶರತ್ ಋತುವಿನಲ್ಲಿ ಕಂಡುಬರುವ ದೇಹದ ಅತಿಯಾದ ಪಿತ್ತದೋಷವನ್ನು ನಿವಾರಿಸಲು ವಿರೇಚನ ಶಿಬಿರ ಅಯೋಜಿಸಲಾಗಿದ್ದು, ಪಿತ್ತ ದೋಷ, ಮಲಬದ್ಧತೆ, ಚರ್ಮರೋಗಗಳಾದ ಸೋರಿಯಾಸಿಸ್, ಇಸುಬು, ಹುಳಕಡ್ಡಿ, ಮೊಡವೆ, ಕಾಮಾಲೆ, ಮಧುಮೇಹ, ಮುಟ್ಟಿನ ಸಮಸ್ಯೆ ಸೇರಿದಂತೆ ದೇಹದ ಸ್ವಾಸ್ಥ್ಯ ಹಾಗೂ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಲು ಈ ಚಿಕಿತ್ಸೆಯನ್ನು ನೀಡಲಾಗುತ್ತದೆ.

Call us

Call us

ಬೆಳಿಗ್ಗೆ 9 ರಿಂದ ಸಂಜೆ 4ರವರೆಗೆ ಸಾರ್ವಜನಿಕರು ವಿರೇಚನಾ ಚಿಕಿತ್ಸೆ ಪಡೆಯಬಹುದು. ನೋಂದಣಿ ಹಾಗೂ ಹೆಚ್ಚಿನ ಮಾಹಿತಿಗೆ ಆಸ್ಪತ್ರೆಯ ಪಂಚಕರ್ಮ ಹೊರರೋಗಿ ವಿಭಾಗ ಅಥವಾ ದೂರವಾಣಿ 962048೦722, 9663555378ನ್ನು ಸಂಪರ್ಕಿಸಬಹುದು.

Leave a Reply

Your email address will not be published. Required fields are marked *

six + 15 =