ಆಳ್ವಾಸ್‌ ತಾಂತ್ರಿಕ ಮಹಾವಿದ್ಯಾಲಯ: ಆಹಾರಮೇಳ ‘ಸ್ವಾದ ಸಾಧನ’

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ:
ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯದ ಸಿವಿಲ್ ವಿಭಾಗದ ವಿದ್ಯಾರ್ಥಿ ಸಂಘ “ಸಿವಿಯೇಶನ್” ವತಿಯಿಂದ “ಸ್ವಾದ ಸಾಧನ” ಆಹಾರ ಮೇಳವು ಕಾಲೇಜಿನ ಆವರಣದಲ್ಲಿ ನಡೆಯಿತು.

Call us

Click here

Click Here

Call us

Call us

Visit Now

Call us

ಆಳ್ವಾಸ್ ಪದವಿ ಕಾಲೇಜಿನ ಹೋಟೆಲ್ ಮ್ಯಾನೇಜ್ಮೆಂಟ್ ವಿಭಾಗದ ಮುಖ್ಯಸ್ಥ ಟೆರೆನ್ಸ್ ರೋಡ್ರಿಗಸ್ ಮೇಳವನ್ನು ಉದ್ಘಾಟಿಸಿದರು. ಇತ್ತೀಚಿಗಿನ ಜನರ ಬದಲಾಗುತ್ತಿರುವ ಜೀವನ ಶೈಲಿಯಿಂದ, ಆಹಾರ, ತಿಂಡಿ ತಿನಿಸುಗಳ ಬಗ್ಗೆ ಬೇಡಿಕೆ ಹೆಚ್ಚಿದ್ದು, ಮುಂದಿನ ದಿನಗಳಲ್ಲಿ ಆಹಾರೋದ್ಯಮವು ಬೃಹತ್ತಾಗಿ ಬೆಳೆಯಲಿದೆ ಎಂದು ಅವರು ಅಭಿಪ್ರಾಯಪಟ್ಟರು.

ಆಳ್ವಾಸ್ ಶಿಕ್ಷಣ ಪ್ರತಿ?ನದ ಮ್ಯಾನೆಜಿಂಗ್ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ತಾಂತ್ರಿಕ ಶಿಕ್ಷಣದೊಂದಿಗೆ ವಿದ್ಯಾರ್ಥಿಗಳೆ ಆಯೋಜಿಸಿದ ಇಂತಹ ಕಾರ್ಯಕ್ರಮಗಳಿಂದ ಅವರ ಆತ್ಮಸ್ಥೈರ್ಯ ಹೆಚ್ಚಾಗಲಿದ್ದು ಮುಂದಿನ ಜೀವನಕ್ಕೆ ಉಪಯೋಗವಾಗಲಿದೆ ಎಂದು ತಿಳಿಸಿದರು.

ಕಾಲೇಜಿನ ಪ್ರಾಂಶುಪಾಲ ಡಾ| ಪೀಟರ್ ಫೆನಾಂಡೀಸ್‌ರವರು ಮಾತನಾಡಿ, ಭಾರತೀಯ ಪರಂಪರೆ ಶೈಲಿಯ ಖಾದ್ಯಗಳ ಮಹತ್ವ, ಆಧುನಿಕ ಆಹಾರ ಪದ್ಧತಿ, ಆಹಾರ ಕ್ಷೇತ್ರದಲ್ಲಿ ಸಂಶೋಧನೆ ಇತ್ಯಾದಿ ವಿ?ಯಗಳ ಬಗ್ಗೆ ಮಾಹಿತಿ ನೀಡಿದರು.

ಮೇಳದಲ್ಲಿ ಕರ್ನಾಟಕದ ವಿವಿಧ ಶೈಲಿಯ ಖಾದ್ಯಗಳು, ಈಶಾನ್ಯ ರಾಜ್ಯಗಳ ತಿಂಡಿ ತಿನಿಸುಗಳು, ವಿವಿಧ ರೀತಿಯ ಹಣ್ಣುಗಳ ಜ್ಯೂಸ್ ಗಳ ಮಾರಾಟ ನಡೆಯಿತು. ಕಾಲೇಜಿನ ನೂರಾರು ವಿದ್ಯಾರ್ಥಿಗಳು ಈ ಮೇಳದಲ್ಲಿ ಭಾಗಿಯಾದರು.

Call us

ಕಾರ್ಯಕ್ರಮದಲ್ಲಿ ಸಿವಿಲ್ ವಿಭಾಗ ಮುಖ್ಯಸ್ಥ ಡಾ| ಅಜಿತ್ ಹೆಬ್ಬಾರ್, ಕಾರ್ಯಕ್ರಮ ಸಂಯೋಜಕರಾದ ಪ್ರೋ. ರಮೇಶ್ ರಾವ್, ಕಾಲೇಜಿನ ಅಧ್ಯಾಪಕ ವೃಂದ, ವಿದ್ಯಾರ್ಥಿ ಸಂಘದ ಅಧ್ಯಕ್ಷ ಚನ್ನಬಸವ, ಕಾರ್ಯದರ್ಶಿ ಶಿಲ್ಪಾ ಉಪಸ್ಥಿತರಿದ್ದರು. ವಿದ್ಯಾರ್ಥಿ ಧೀರಜ್ ಶಿಂಧೆ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

two × 1 =