ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು-ಜಪಾನ್‌ನ ಕುಮಮೊಟೊ ವಿಶ್ವವಿದ್ಯಾಲಯ ಶೈಕ್ಷಣಿಕ ಒಪ್ಪಂದ

Click Here

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ: ಇಂಜಿನಿಯರಿಂಗ್ ಶಿಕ್ಷಣದಲ್ಲಿ ಆಧುನಿಕ ಅಗತ್ಯತೆ ಹಾಗೂ ಕಾರ್ಪೊರೇಟ್ ಸಂಸ್ಥೆಗಳ ನಿರೀಕ್ಷೆಗೆ ತಕ್ಕಂತ ಗುಣಮಟ್ಟದಲ್ಲಿ ಬದಲಾವಣೆಗಳನ್ನು ತರುವ ನಿಟ್ಟಿನಲ್ಲಿ ಮೂಡುಬಿದಿರೆಯ ಮಿಜಾರಿನಲ್ಲಿರುವ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು-ಕುಮಮೊಟೊ ವಿಶ್ವವಿದ್ಯಾಲಯ ಮಹತ್ವದ ಶೈಕ್ಷಣಿಕ ಒಪ್ಪಂದ ಮಾಡಿಕೊಂಡಿವೆ.

Call us

Call us

Click Here

Visit Now

ವಿದ್ಯಾರ್ಥಿಗಳಿಗೆ ಮತ್ತು ಪ್ರಾಧ್ಯಾಪಕರಿಗೆ ಉನ್ನತ ಅಧ್ಯಯನಕ್ಕೆ ಅವಕಾಶ ಕಲ್ಪಿಸುವುದು. ಹೊಸ ಆವಿಷ್ಕಾರಗಳ ಮೂಲಕ ಸಂಶೋಧನೆಗೆ ನೆರವಾಗುವುದು. ಸಂಶೋಧನೆಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಕುಮಮೊಟೊ ವಿಶ್ವವಿದ್ಯಾಲಯದಿಂದ ಸ್ಕಾಲರ್‌ಶಿಪ್ ಸೌಲಭ್ಯ.

Click here

Click Here

Call us

Call us

ಎರಡೂ ಸಂಸ್ಥೆಗಳು ಜಂಟಿಯಾಗಿ ತಾಂತ್ರಿಕ ಸಮ್ಮೇಳನಗಳನ್ನು ನಡೆಸುವುದು. ವಿದ್ಯಾರ್ಥಿಗಳ ಕಲಿಕಾ ಮತ್ತು ಪ್ರಾಧ್ಯಾಪಕರ ಭೋದನಾ ಗುಣಮಟ್ಟವನ್ನು ಹೆಚ್ಚಿಸಲು ಕಾರ್ಯಗಾರಗಳನ್ನು ಏರ್ಪಡಿಸುವುದಕ್ಕೆ ಎರಡೂ ಸಂಸ್ಥೆಗಳ ಸಹಕಾರ, ಇಂಟರ್ನ್ ಶಿಪ್ ಮೂಲಕ ತಂತ್ರಜ್ಞಾನದ ಮೂಲ ಮಾದರಿಗಳನ್ನು ತಯಾರಿಸಲು ವಿದ್ಯಾರ್ಥಿಗಳಿಗೆ ನೆರವು ಮಾತ್ರವಲ್ಲದೆ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸಲು ಮತ್ತು ಪ್ರಾದ್ಯಾಪಕರು ತಂತ್ರಜ್ಞಾನದಲ್ಲಿ ಹೊಸ ಸಂಶೋಧನೆಗಳಿಗೆ ನೆರವಾಗುವುದು, ಸಹಿತ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹಲವು ಮಹತ್ವ ಅಂಶಗಳನ್ನು ಒಪ್ಪಂದ ಒಳಗೊಂಡಿದೆ.

ಜಪಾನ್‌ನ ಕುಮಮೊಟೊ ವಿಶ್ವವಿದ್ಯಾಲಯದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಪೀಟರ್ ಫರ್ನಾಂಡಿಸ್ ಮತ್ತು ಕುಮಮೊಟೊ ವಿಶ್ವವಿದ್ಯಾಲಯದ ಗ್ಲೋಬಲ್ ಎಜ್ಯೂಕೇಷನ್ ಸೆಂಟರ್ ಫಾರ್ ಸೈನ್ಸ್ ಹಾಗೂ ಟೆಕ್ನಾಲಜಿಯ ನಿರ್ದೇಶಕ ಡಾ.ಸುಯೋಶಿ ಉಸಾಗವ ಪರಸ್ಪರ ಒಪಂದಕ್ಕೆ ಸಹಿ ಹಾಕಿದರು.

ಒಡಂಬಡಿಕೆಯ ರೂವಾರಿಗಳಾದ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ವಿಭಾಗದ ಪ್ರಾಧ್ಯಾಪಕ ಡಾ.ಸತ್ಯನಾರಾಯಣ ಹಾಗೂ ಕುಮಮೊಟೊ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ. ಕಾಜುಹಾಕಿ ಹೊಕೊಮೊಟೊ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

19 + fifteen =