ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಾನೋ ಫ್ಲೂಯಿಡ್ ಕುರಿತು ರಾಷ್ಟ್ರಮಟ್ಟದ ಕಾರ್ಯಾಗಾರ

ಮೂಡುಬಿದಿರೆ: ಮಿಜಾರಿನ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ವತಿಯಿಂದ ಆಯೋಜಿಸಿದ ನಾನೋ ಫ್ಲೂಯಿಡ್ ಕುರಿತ ಒಂದು ದಿನದ ರಾಷ್ಟ್ರಮಟ್ಟದ ಕಾರ್ಯಾಗಾರವನ್ನು ಜಪಾನ್ ನ ಕುಮಾಮೊಟೊ ವಿವಿಯ ಸಹಾಯಕ ನಿರ್ದೇಶಕ ಮತ್ತು ಪ್ರಾಧ್ಯಾಪಕ ಡಾ. ಶುಯಿಚಿ ತೋರಿ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಡಾ. ಶುಯಿಚಿ ತೋರಿ, ಇಂದಿನ ವಿದ್ಯಾರ್ಥಿಗಳು ಸಂಶೋಧನಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ನಾನೋ ಫ್ಲೂಯಿಡ್ ಕ್ಷೇತ್ರದಲ್ಲಿ ಆಗುತ್ತಿರುವ ಅನೇಕ ಆವಿಷ್ಕಾರಗಳನ್ನು ವಿದ್ಯಾರ್ಥಿಗಳು ಅರಿತು ಅಧ್ಯಯನ ನಡೆಸಬೇಕು. ಆಳ್ವಾಸ್ ಮತ್ತು ಕುಮಾಮೊಟೊ ವಿವಿ ನಡುವಣ ಶೈಕ್ಷಣಿಕ ಒಪ್ಪಂದದಿಂದ ವಿದ್ಯಾರ್ಥಿ ವಿನಿಮಯ ಮತ್ತು ಉನ್ನತ ಸಂಶೋಧನೆ ಸಾಧ್ಯ ಎಂದು ಡಾ . ಶುಯಿಚಿ ತಿಳಿಸಿದರು .

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ ಈ ಸಂಶೋಧನಾ ಕಾರ್ಯಾಗಾರವು ವಿದ್ಯಾರ್ಥಿಗಳಿಗೆ , ಉದ್ಯಮಿಗಳಿಗೆ ಮತ್ತು ಬೋಧಕರಿಗೆ ಉಪಯುಕ್ತವಾಗಿದೆ. ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು ಮತ್ತು ಕುಮಾಮೊಟೊ ವಿಶ್ವವಿದ್ಯಾಲಯ ನವೀನ ಒಪ್ಪಂದವು ಪ್ರಮುಖ ಮೈಲಿಗಲ್ಲಾಗಿದ್ದು ಜಪಾನಿನ ಉನ್ನತ ತಂತ್ರಜ್ಞಾನ ನಮಗೆ ಮಾರ್ಗದರ್ಶನವಾಗಬಲ್ಲುದು. ಸಮಾಜೋಪಯೋಗಿ ಸಂಶೋಧನೆಗೆ ಕಾಲೇಜುಗಳಲ್ಲಿ ಮಹತ್ವ ಸಿಗಬೇಕು ಎಂದು ಕರೆಕೊಟ್ಟರು

ಕಾಲೇಜಿನ ಪ್ರಾಂಶುಪಾಲ ಡಾ.ಪೀಟರ್ ಫೆರ್ನಾಂಡಿಸ್ ಮಾತನಾಡಿ ಈ ಸಂಸ್ಥೆಯಲ್ಲಿ ಪ್ರಥಮ ಬಾರಿಗೆ ಅಂತಾರಾಷ್ಟ್ರೀಯ ಶೈಕ್ಷಣಿಕ ಒಪ್ಪಂದದ ಅಂಗವಾಗಿ ನಡೆಯುವ ಕಾರ್ಯಕ್ರಮ ಇದಾಗಿದ್ದು ಜಪಾನೀಯರ ಕಾರ್ಯಶೈಲಿ , ಶಿಸ್ತು ಮತ್ತು ಸಮಯ ಪರಿಪಾಲನೆ ನಮಗೆ ಮಾದರಿ ಎಂದರು. ನಾನೋ ಫ್ಲೂಯಿಡ್ ಕ್ಷೇತ್ರವು ಅಪರಿಮಿತ ಅವಕಾಶಗಳನ್ನೊಳಗೊಂಡಿದ್ದು ವಿಫುಲ ಸಂಶೋಧನೆಗೆ ಪೂರಕವಾಗಿದೆ ಎಂದು ತಿಳಿಸಿದರು.

ಕಾರ್ಯಾಗಾರದಲ್ಲಿ ತಿರುನೆಲ್ವೇಲಿಯ ಪಿಎಸ್‍ಎನ್ ಕಾಲೇಜಿನ ಉಪ ಪ್ರಾಂಶುಪಾಲ ಡಾ. ಪಿ. ಸೆಲ್ವ ಕುಮಾರ್, ಸುರತ್ಕಲ್ ಎನ್‍ಐಟಿಕೆ ಯ ಪ್ರಾಧ್ಯಾಪಕ ಡಾ. ಕೆ ಎನ್ ಪ್ರಭು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ .

ವಿಭಾಗದ ಮುಖ್ಯಸ್ಥ ಪೆÇ್ರ ಕೆ ವಿ ಸುರೇಶ ಅತಿಥಿಗಳನ್ನು ಸ್ವಾಗತಿಸಿದರು . ಪೆÇ್ರ ಯೋಗೇಶ್ ರಾವ್ ನಿರೂಪಿಸಿ ಸಂಯೋಜಕ ಡಾ . ಸತ್ಯನಾರಾಯಣ ವಂದಿಸಿದರು.

Leave a Reply

Your email address will not be published. Required fields are marked *

sixteen − nine =