ಆಳ್ವಾಸ್ ಇಂಜಿನಿಯರಿಂಗ್ ಕಾಲೇಜ್: ಒಡಂಬಡಿಕೆಗೆ ಸಹಿ

ಕುಂದಾಪ್ರ ಡಾಟ್ ಕಾಂ ಸುದ್ದಿ
ಮೂಡುಬಿದಿರೆ: ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು ಹಾಗೂ ಮಂಗಳೂರಿನ ವಿ ಅಂಡ್ ಜಿ ಇಂಡಸ್ಟ್ರೀಸ್ ಟೆಸ್ಟಿಂಗ್ ಲ್ಯಾಬೊರೋಟರಿಸ್ ಪ್ರೈ.ಲಿನ ನಡುವೆ ಒಡಂಬಡಿಕೆಗೆ ಸಹಿ ಹಾಕಲಾಯಿತು. ಕಾಲೇಜಿನ ಪ್ರಾಂಶುಪಾಲ ಡಾ ಪೀಟರ್ ಫೆರ್ನಾಂಡೀಸ್ ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ಗಿರೀಶ್ ಬಾಬು ಒಡಂಬಡಿಕೆಗೆ ಸಹಿ ಹಾಕಿದರು.

ಈ ಒಡಂಬಡಿಕೆಯ ಪ್ರಕಾರ ಭವಿಷ್ಯದಲ್ಲಿ ವಿದ್ಯಾರ್ಥಿಗಳಿಗೆ ಟ್ರೈನಿಂಗ್ ಮತ್ತು ಸರ್ಟಿಫಿಕೇಶನ್ ಕೋರ್ಸುಗಳನ್ನು ಕಾಲೇಜಿನಲ್ಲಿ ಆರಂಭಿಸಿಲಾಗುತ್ತದೆ. ಜತೆಗೆ ಎನ್.ಡಿ.ಟಿ ತಂತ್ರಜ್ಞಾನದ ಟ್ರೈನಿಂಗ್ ಮತ್ತು ಸರ್ಟಿಫಿಕೇಶನ್ ಕೋರ್ಸು ಆರಂಭಿಸಲಾಗುತ್ತದೆ. ಸಂಶೋಧನಾ ವಿಭಾಗದಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಹೆಚ್ಚಿನ ಮನ್ನಣೆಯನ್ನು ನೀಡಲಾಗುವುದು.

ಈ ಸಂದರ್ಭದಲ್ಲಿ ಕಾಲೇಜಿನ ಡೀನ್ ಡಾ. ಪ್ರವೀಣ್ ಜೆ, ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಸತ್ಯನಾರಾಯಣ್, ಪ್ರಾಧ್ಯಪಕ ಕೆ.ವಿ ಸುರೇಶ್ ಮತ್ತು ವಿ ಅಂಡ್ ಜಿ ಯ ವೆಂಕಟ ಸುಬ್ರಮಣಿಯನ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

eleven − 2 =