ಆಳ್ವಾಸ್ ಇಂಜಿನಿಯರ್ ಕಾಲೇಜು – ಐಐಐಟಿ-ಎ ಒಡಂಬಡಿಕೆ ವಿಸ್ತರಣೆ

Call us

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದರೆ:
ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ ಅಲಹಾಬಾದ್ (ಐಐಐಟಿ-ಎ) ಹಾಗೂ ಆಳ್ವಾಸ್ ಇಂಜಿನಿಯರ್ ಕಾಲೇಜಿನ ನಡುವಿನ ಒಪ್ಪಂದವು ಮುಂದಿನ ಐದು ವರ್ಷಕ್ಕೆ ವಿಸ್ತರಣೆಯಾಗಿದೆ. ಕಳೆದ ಮೂರು ವರ್ಷಗಳಲ್ಲಿ ಇದ್ದ ಒಪ್ಪಂದದಿಂದಾಗಿ ಆಳ್ವಾಸ್ ಸಂಸ್ಥೆಯ ವಿದ್ಯಾರ್ಥಿಗಳಿಗೆ ಉತ್ತಮ ಜ್ಞಾನ, ಅವಕಾಶಗಳು ಸಿಕ್ಕಿವೆ. ರಾಜ್ಯದ ಎರಡು ಖಾಸಗಿ ಶಿಕ್ಷಣ ಸಂಸ್ಥೆಗಳು ಐಐಐಟಿ ಜೊತೆ ಒಡಂಬಡಿಕೆ ಮಾಡಿದ್ದು, ಅದರಲ್ಲಿ ಆಳ್ವಾಸ್ ಕೂಡ ಒಂದು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜ್ಮೆಂಟ್ ಟ್ರಸ್ಟಿ ವಿವೇಕ್ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

Call us

Click Here

Click here

Click Here

Call us

Visit Now

Click here

ಒಡಂಬಡಿಕೆಯಿಂದಾಗಿ ಇಂಟರ್ಶಿಪ್, ಸಂಶೋಧನೆ ಮತ್ತು ಕಾರ್ಯಾಗಾರಗಳನ್ನು ಪ್ರಾಧ್ಯಾಪಕರು ಮತ್ತು ಸಂಶೋಧನಾ ವಿದ್ವಾಂಸರ ತಂಡವು ಡೇಟಾ ವಿಶ್ಲೇಷಣೆ, ಯಂತ್ರ ಕಲಿಕೆ, ಆಳವಾದ ಕಲಿಕೆ, ಪೈಥಾನ್, ಜಾವಾ ಮುಂತಾದ ಪ್ರಮುಖ ಕ್ಷೇತ್ರಗಳಲ್ಲಿ ಜಂಟಿಯಾಗಿ ನಡೆಸಲಾಗುತ್ತದೆ. ಮಾಹಿತಿ ಮತ್ತು ಸಂವಹನ ತಂತ್ರಜ್ಞಾನಗಳು ಮತ್ತು ಸಂಬಂಧಿತ ಪ್ರದೇಶಗಳಲ್ಲಿ ಪಿಎಚ್ಡಿ ಮತ್ತು ಪೋಸ್ಟ್ ಡಾಕ್ಟರೇಟ್ ಕಾರ್ಯಕ್ರಮಗಳನ್ನು ಮುಂದುವರಿಸಲು ಐಐಐಟಿ-ಎ ನಲ್ಲಿ ವಿದ್ಯಾರ್ಥಿಗಳು ಮತ್ತು ಎಐಇಟಿಯ ಅಧ್ಯಾಪಕರನ್ನು ಮೇಲ್ವಿಚಾರಣೆ ಮಾಡಲಾಗುತ್ತದೆ. ಒಪ್ಪಂದವು ಸಮಸ್ಯೆ ತಾಂತ್ರಿಕ ಪರಿಹರಿಸುವಲ್ಲಿ ಮತ್ತು ಕೋಡಿಂಗ್ ಕೌಶಲ್ಯಗಳನ್ನು ಕಲಿಯುವಲ್ಲಿ ವಿದ್ಯಾರ್ಥಿಗಳಿಗೆ ಪ್ರಯೋಜನವನ್ನು ನೀಡುತ್ತದೆ. ಐಐಐಟಿ-ಎ ಜೊತೆ ಉತ್ತಮ ಸಂಬಂಧ ವೃದ್ಧಿಸಲು ಆಳ್ವಾಸ್ ಪಿಯು ಕಾಲೇಜಿನ ಹಳೇ ವಿದ್ಯಾರ್ಥಿ ಪ್ರಸ್ತುತ ಐಐಐಟಿಯಲ್ಲಿ ಸಹ ಪ್ರಾಧ್ಯಾಪಕರಾಗಿರುವ ಜಾವೇದ್ ಅವರ ಪಾತ್ರ ಮಹತ್ವದ್ದು ಎಂದು ವಿವೇಕ್ ಆಳ್ವ ತಿಳಿಸಿದರು.

ಆನ್‌ಲೈನ್ ಮೂಲಕ ಮಾತನಾಡಿದ ಐಐಐಟಿ-ಎ ನಿರ್ದೇಶಕ ಡಾ.ನಾಗಭೂಷಣ್, ಈ ಒಪ್ಪಂದವು ಎರಡೂ ಸಂಸ್ಥೆಗಳು ಒಟ್ಟಿಗೆ ಮುನ್ನಡೆಯಲು ಅಭಿವೃದ್ಧಿಯಾಗಲು ಸಹಕಾರಿ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಒಡಂಬಡಿಕೆ ಪೂರಕ ವ್ಯವಸ್ಥೆ ಕಲ್ಪಿಸಿದೆ ಎಂದು ಹೇಳಿದರು.

ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಪೀಟರ್ ಫೆರ್ನಾಂಡಿಸ್, ವಿವಿಧ ವಿಭಾಗಗಳ ಮುಖ್ಯಸ್ಥರಾದ ಹರೀಶ್ ಕುಂದರ್, ಮಂಜುನಾಥ್ ಕೊಟ್ಟಾರಿ, ಡಿ. ವಿ ಮಂಜುನಾಥ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

three × 2 =