ಆಳ್ವಾಸ್ ಇಂಟರ್‌ನಲ್ ಕಂಪ್ಲೆಂಟ್ಸ್ ಕಮಿಟಿ ಉದ್ಘಾಟನೆ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಡಾ. ವಿ ಎಸ್ ಆಚಾರ್ಯ ಸಭಾಂಗಣದಲ್ಲಿ ಪದವಿ ಪೂರ್ವ ಕಾಲೇಜಿನ ಇಂಟರ್‌ನಲ್ ಕಂಪ್ಲೆಂಟ್ಸ್ ಕಮಿಟಿ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

Click here

Click Here

Call us

Call us

Visit Now

Call us

Call us

ಉದ್ಘಾಟಕರಾಗಿ ಭಾಗವಹಿಸಿದ ಪದವಿ ಕಾಲೇಜಿನ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥೆ ಡಾ. ಮಧುಮಾಲ ಹದಿಹರೆಯದ ನಿಭಾವಣೆ ಕುರಿತು ಮಾತನಾಡಿ, ಜೀವನದ ವಿವಿಧ ಹಂತಗಳಲ್ಲಿ, ಅದರಲ್ಲೂ ಹದಿಹರೆಯದ ವಯಸ್ಸಿನಲ್ಲಿ- ಮಾನಸಿಕ ಬದಲಾವಣೆ, ದೈಹಿಕ ಬದಲಾವಣೆ, ಸಾಮಾಜಿಕ ಬದಲಾವಣೆಯೊಂದಿಗೆ ಸಾಧನೆಗೆ ಪೂರಕವಾದ ಸಮಯವಾಗಿರುತ್ತದೆ. ಶೈಕ್ಷಣಿಕ ಒತ್ತಡಗಳು ಉಂಟಾದಾಗ ಪರಿಸ್ಥಿತಿಯೊಂದಿಗೆ ಹೊಂದಿಕೊಳ್ಳುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಹದಿಹರೆಯದ ವಯಸ್ಸಿನಲ್ಲಿ ದೈಹಿಕ ಬದಲಾವಣೆ ಸರ್ವೆಸಾಮಾನ್ಯವಾಗಿದ್ದು, ಅಂತಹ ಸಂದರ್ಭದಲ್ಲಿ ನಮ್ಮ ದೇಹವನ್ನು ನಾವು ಗೌರವಿಸಿ, ಸ್ವಚ್ಛತೆಯನ್ನು ಕಾಪಾಡುವುದರಿಂದ ನಮ್ಮನ್ನು ಇತರರು ಗೌರವಿಸಲು ಸಾಧ್ಯ ಎಂದರು. ಈ ವಯಸ್ಸಿನಲ್ಲಿ ಪೌಷ್ಠಿಕಾಂಶಯುಕ್ತ ಆಹಾರ, ಸರಿಯಾದ ನಿದ್ರೆ, ಉತ್ತಮ ಭಾಂದವ್ಯ, ಆತ್ಮವಿಶ್ವಾಸ ಅಗತ್ಯವಾಗಿರುತ್ತದೆ ಎಂದು ವಿದ್ಯಾರ್ಥಿನಿಯರಿಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ರಮೇಶ್ ಶೆಟ್ಟಿ ಉಪಸ್ಥಿತರಿದ್ದರು. ಕಾಲೇಜಿನ ಇಂಟರ್‌ನಲ್ ಕಂಪ್ಲೆಂಟ್ಸ್ ಕಮಿಟಿಯ ಸಂಯೋಜಕಿ ಮರಿಯಾ ಲಿನೆಟ್ ಲೋಬೊ ಕಾರ‍್ಯಕ್ರಮವನ್ನು ಸಂಯೋಜಿಸಿದ್ದರು. ವಿದ್ಯಾರ್ಥಿನಿ ಮಿಥಾಲಿ ಸ್ವಾಗತಿಸಿ, ಕುಶಿರಾಜ್ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

11 − seven =