ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ವಿಶೇಷ ಉಪನ್ಯಾಸ ಕಾರ್ಯಕ್ರಮ ಮಲ್ಟಿಮೀಡಿಯಾ ಸ್ಟುಡಿಯೋದಲ್ಲಿ ನಡೆಯಿತು.
ಮುಖ್ಯ ಅಥಿತಿಯಾಗಿ ತುಮಕೂರು ವಿಶ್ವವಿದ್ಯಾನಿಲಯ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಪದ್ಮನಾಭ ಕೆ.ವಿ ಅಭಿವೃದ್ಧಿಯಲ್ಲಿ ಸಂವಹನದ ಪಾತ್ರದ ಕುರಿತು ಮಾತನಾಡಿದರು.
ಅಭಿವೃದ್ದಿಯೆಂದರೆ ಕೇವಲ ತಾವು ಶ್ರೀಮಂತರಾಗವುದಲ್ಲ. ಬದಲಿಗೆ ಅಭಿವೃದ್ಧಿ ಪಥದಲ್ಲಿ ಎಲ್ಲರನ್ನೂ ಒಟ್ಟಿಗೆ ಕೊಂಡೊಯ್ಯುವುದು. ಕೊನೆಯಲ್ಲಿದಾರೆಂದು ಯಾರನ್ನು ಬಿಟ್ಟು ಹೋಗಬಾರದು ಎಂದರು. ಪರಿಹಾರಯಿಲ್ಲದ ಸಮಸ್ಯೆಯಿಲ್ಲ, ಅಭಿವೃದ್ದಿಯಿಲ್ಲದೆ ದೇಶದಲ್ಲಿ ಏಳಿಗೆಯಿಲ್ಲ ಎಂದರು.
ಪ್ರಾದೇಶಿಕ ಕಲೆಯಾದ ಯಕ್ಷಗಾನದ ಮೂಲಕ ಸಂವಹನ ನಡೆದು ಬಂದ ರೀತಿಯನ್ನು ವಿವರಿಸಿ ಯಕ್ಷಗಾನದಲ್ಲಿ ಪೌರಾಣಿಕ ಕಥೆಗಳಲ್ಲದೆ “ಕಾಲಕ್ಕನುಗುಣವಾಗಿ ಜನರಿಗೆ ಅರ್ಥವಾಗುವ ರೀತಿಯಲ್ಲಿ ಸಮಾಜದಲ್ಲಿ ಜಾಗೃತಿ ಮೂಡಿಸುವ ಕೆಲಸ ಯಕ್ಷಗಾನ ಮಾಡುತ್ತಾ ಬಂದಿದೆ ಎಂದರು”. ಸಸ್ಯ ಸಂದಾನ, ಇಳಯಣ್ಣನ ಕಥೆ, ಅಕ್ಷರ ವಿಮೋಚನೆ, ವಿದ್ಯಾ ವಿಜಯ, ಮಿತ ಸಂತಾನದ ಮಹಿಮೆ, ನಿಸರ್ಗ ಸಂದಾನ ಮೊಹಿನಿ ಚರಿತ್ರೆ, ತಂಬಾಕು ಮಹಾತ್ಮೆ ಮುಂತಾದ ಹಳೆಯ ಪ್ರಸಂಗಗಳ ಮೂಲಕ ಜನರನ್ನು ವಿವಿಧ ಕಾಲ ಘಟ್ಟಗಳ ಜ್ವಲಂತ ಸಮಸ್ಯೆಯ ನೆಲೆಯಲ್ಲಿ ಜಾಗೃತಿಗೊಳಿಸಿದ ಪರಿಯನ್ನು ವಿವರಿಸಿದರು.
ಕಾರ್ಯಕ್ರಮ ವಿಭಾಗದ ಸಂಯೋಜಕರಾದ ಪ್ರಸಾದ್ ಶೆಟ್ಟಿ, ಸಹಾಯಕ ಪ್ರಾಧ್ಯಾಪಕರಾದ ಡಾ ಸಫಿಯಾ, ರವಿ ಮೂಡುಕೊಣಾಜೆ, ನಿಶಾನ್ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.