ಆಳ್ವಾಸ್ ಕಾಲೇಜು: ನಾಯಕತ್ವ – ಯುವಜನಾಂಗ ಹಾಗೂ ರಾಷ್ಟ್ರ ನಿರ್ಮಾಣ ಶಿಬಿರ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ: ನಿರ್ದಿಷ್ಟ ವಿಷಯದ ಆಯ್ಕೆ ಹಾಗೂ ನಿರಂತರ ಓದುವಿಕೆ ಐಎಎಸ್ ಪರೀಕ್ಷೆಯಲ್ಲಿ ಸಫಲರಾಗಲೂ ಪ್ರಮುಖ ಪಾತ್ರ ವಹಿಸುತ್ತವೆ ಎಂದು ದಕ ಜಿಲ್ಲಾ ಪಂಚಾಯತ್ ಮುಖ್ಯ ಕಾರ‍್ಯನಿರ್ವಣಾಧಿಕಾರಿ ಡಾ ಸೆಲ್ವಮಣಿ ಆರ್ ತಿಳಿಸಿದರು.

ಅವರು ಮಂಗಳೂರು ವಿಶ್ವವಿದ್ಯಾನಿಲಯ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಆಳ್ವಾಸ್ ಕಾಲೇಜು ಇವುಗಳ ಜಂಟಿ ಆಶ್ರಯದಲ್ಲಿ ನಡೆದ ‘ನಾಯಕತ್ವ-ಯುವಜನಾಂಗ ಹಾಗೂ ರಾಷ್ಟ್ರ ನಿರ್ಮಾಣ’ ಎಂಬ ಶಿಬಿರದಲ್ಲಿ ಮಾತನಾಡಿ ಐಎಎಸ್ ಪರೀಕ್ಷೆಗೆ ಸತತ ಪ್ರಯತ್ನ ಅಗತ್ಯ. ಪರೀಕ್ಷೆಯಲ್ಲಿ ವಿಷಯದ ಕುರಿತು ಜ್ಞಾನದ ಜತೆಗೆ ಸಂಧರ್ಭಕ್ಕನುಗುಣವಾಗಿ ಓದಿದ ವಿಷಯವನ್ನು ಉಪಯೋಗಿಸಿಕೊಳ್ಳುವ ಕಲೆ ಅಗತ್ಯ ಎಂದರು.

ಇದೇ ಸಂಧರ್ಭದಲ್ಲಿ ಉಪಸ್ಥಿತರಿದ್ದ ಇನೋರ್ವ ಅತಿಥಿ ಪ್ರೋಬೇಶನರಿ ಐಎಎಸ್ ಅಧಿಕಾರಿ ರಾಹುಲ್ ಶಿಂಧೆ ಮಾತನಾಡಿ, ಐಎಎಸ್ ಪರೀಕ್ಷೆಗೆ ಆಯ್ಕೆ ಮಾಡುವ ವಿಷಯಗಳು, ಪ್ರಸ್ತುತ ದಿನಗಳಿಗೆ ಅನುಗುಣವಾದ ಪರೀಕ್ಷಾ ತಯಾರಿಯ ಬಗ್ಗೆ ವಿವರಿಸಿದರು.

ಅಧಿವೇಶನದಲ್ಲಿ ಭಾರತದ ಕಲ್ಪನೆ ಎಂಬ ವಿಷಯದ ಕುರಿತು ಮಾತನಾಡಿದ ತುಮಕೂರು ವಿವಿಯ ಕನ್ನಡ ಪ್ರಾಧ್ಯಪಕ ಡಾ ನಿತ್ಯಾನಂದ ಬಿ ಶೆಟ್ಟಿ ನಾನೊಬ್ಬ ಸಮಾಜದಲ್ಲಿ ಏನನ್ನು ಮಾಡಲಾರೆ, ಆದರೆ ನಾವು ಮಾಡಬಲ್ಲೆವು ಎಂಬ ಭಾವನೆ ಬಂದಾಗ ಭವ್ಯ ಭಾರತದ ನಿರ್ಮಾಣ ಸಾಧ್ಯ ಎಂದು ತಿಳಿಸಿದರು.

ಇತಿಹಾಸವನ್ನು ಗಮನಿಸಿದರೆ ಅನೇಕ ನಾಗರೀಕತೆಗಳು ಬಂದು ಹೋಗಿವೆ. ಅವೆಲ್ಲವುಗಳಿಂದ ಒಂದೊಂದು ಅಂಶವನ್ನು ನಾವು ಕಲಿತಿದ್ದೇವೆ. ಕಾರ್ಪೊರೇಟ್ ಯುಗದಲ್ಲಿರುವ ನಾವು ಮನು?ನಾಗಬೇಕು, ಮನು?ನ ಬೆಲೆ ಕಂಡುಕೊಳ್ಳಬೇಕು ಎಂದರು.

ನಾಯಕತ್ವದ ಗುಣಗಳು ಎಂಬ ವಿಚಾರವಾಗಿ ಮಾತನಾಡಿದ ಬೆಂಗಳೂರಿನ ಜೈನ್ ಯುನಿವರ್ಸಿಟಿಯ ಡಾ.ರಾಜ್ ದೀಪ್ ಮನ್ವಾನಿ, ಸೌಂದರ್ಯ ಎಂಬುದು ಆಂತರ್ಯದಲ್ಲಿದೆಯೆ ಹೊರತು ಬಾಹ್ಯ ಪ್ರದರ್ಶನದಲ್ಲಿಲ. ಒಬ್ಬ ನಾಯಕನಿಗೆ ಬಾಹ್ಯ ಸೌಂದರ್ಯದ ಅಗತ್ಯವಿಲ್ಲ ಆದರೆ ಆಂತರಿಕವಾಗಿ ಶುದ್ಧ ವಾಗಿರಬೇಕು ಹಾಗು ತೆರೆದ ಮನಸ್ಸಿನವನಾಗಿರಬೇಕು ಎಂದು ವಿವರಿಸುತ್ತಾ ಮದರ್ ತೆರೇಸಾರ ಉದಾರತೆ ಹಾಗೂ ನಾಯಕತ್ವವನ್ನು ಸ್ಮರಿಸಿದರು. ಇತರರ ಮಾತಿಗೆ ನಾವು ತಲೆಕೆಡಿಸಿಕೊಳ್ಳಬಾರದು, ನಾವು ಸದಾ ನಮ್ಮ ಅಭಿವೃದ್ಧಿಯತ್ತ ಗಮನಹರಿಸಬೇಕು ಎಂದು ಹೇಳಿದರು.

ಕಾರ‍್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜ್ಮೆಂಟ್ ಟ್ರಸ್ಟಿ ವಿವೇಕ್ ಆಳ್ವ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

five × five =