ಆಳ್ವಾಸ್: ಡಿಪಾರ್ಟ್‌ಮೆಂಟಲ್ ಫೆಲಿಸಿಟೇಶನ್ 2019 – 20 ಕಾರ್ಯಕ್ರಮ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ: ಆಳ್ವಾಸ್ ಪದವಿ ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆಯ ಕೋಶ ಡಿಪಾರ್ಟ್‌ಮೆಂಟಲ್ ಫೆಲಿಸಿಟೇಶನ್  2019 – 20’ ಕಾರ್ಯಕ್ರಮವನ್ನು ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಆಯೋಜಿಸಲಾಗಿತು.

Call us

ಕಾರ‍್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಪ್ರಾಂಶುಪಾಲ ಡಾ. ಕುರಿಯನ್ ’ಮಾನ್ಯತೆ ನಂತರದ ಹಂತದಲ್ಲಿ ಕಾಲೇಜಿನ ಐಕ್ಯೂಎಸಿ ತಂಡ ಗುಣಮಟ್ಟದ ವರ್ಧನೆಗೆ ಉತ್ತಮ ಉಪಕ್ರಮವನ್ನು ತೆಗೆದುಕೊಂಡಿದ್ದನ್ನು ಶ್ಲಾಘಿಸಿದರು. ಪ್ರತಿ ವಿಭಾಗಗಳಿಂದ ಮುಂಬರುವ ದಿನಗಳಲ್ಲಿ ಸಮರ್ಪಿತ ಕಾರ‍್ಯದ ಮೂಲಕ ನ್ಯಾಕ್‌ನ ಮುಂದಿನ ಚಕ್ರದಲ್ಲಿ ಇನ್ನೂ ಹೆಚ್ಚಿನ ಪ್ರಗತಿಯನ್ನು ಸಾಧಿಸುವಂತಾಗಬೇಕು ಎಂದರು. ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ ಮಾತನಾಡಿದರು

Call us

ಶೈಕ್ಷಣಿಕ, ಶೈಕ್ಷಣಿಕೇತರ ಹಾಗೂ ಸಂಶೋಧನಾ ಚಟುವಟಿಕೆಗಳಲ್ಲಿನ ಶ್ರೇಷ್ಠತೆಗಾಗಿ ಅತ್ಯುತ್ತಮ ವಿಭಾಗವನ್ನ ಗುರುತಿಸಿ ಕಾಲೇಜಿನ 34 ಪದವಿ ಹಾಗೂ 17 ಸ್ನಾತಕೋತ್ತರ ಪದವಿಗಳಲ್ಲಿ 8 ಅತ್ಯುತ್ತಮ ವಿಭಾಗಗಳನ್ನು2019 – 20ರ ಶೈಕ್ಷಣಿಕ ವರ್ಷದ  ಅತ್ಯುತ್ತಮ ವಿಭಾಗಗಳಾಗಿ ಸನ್ಮಾನಿಸಲಾಯಿತು.

ಪದವಿ ವಿಭಾಗದಲ್ಲಿ ಬ್ಯಾಚುಲರ್ ಆಫ್ ಕಂಪ್ಯೂಟರ್ ಆಪ್ಲೀಕೇಶನ್ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡರೆ, ಸ್ನಾತಕೋತ್ತರ ವಿಭಾಗದಲ್ಲಿ ಡಿಪಾರ್ಟ್‌ಮೆಂಟ್ ಆಫ್ ಬಯೋಟೆಕ್ನಾಲಜಿ, ಪದವಿ ವಿಜ್ಞಾನ ವಿಭಾಗದಲ್ಲಿ ಎಫ್‌ಎನ್‌ಡಿ, ವಾಣಿಜ್ಯ ವಿಭಾಗದಲ್ಲಿ ಡಿಪಾರ್ಟ್‌ಮೆಂಟ್ ಆಫ್ ಕಾಮಾರ್ಸ್, ಡಿಪಾರ್ಟ್‌ಮೆಂಟ್ ಆಫ್ ಲ್ಯಾಂಗ್ವೇಜಸ್‌ನಲ್ಲಿ ಇಂಗ್ಲೀಷ್ ವಿಭಾಗ, ಕಲಾ ವಿಭಾಗದಲ್ಲಿ ಡಿಪಾರ್ಟ್‌ಮೆಂಟ್ ಆಫ್ ಸೋಶ್ಯಿಯಲ್ ವರ್ಕ್ಸ್ ಉತ್ತಮ ವಿಭಾಗಗಳೆಂದು ಗುರುತಿಸಿಕೊಂಡರೆ, ಸ್ನಾತಕೋತ್ತರ ಪದವಿಯ ಸೈನ್ಸ್ ವಿಭಾಗದಲ್ಲಿ ಎಫ್. ಎಸ್. ಎನ್, ವಾಣಿಜ್ಯ ಹಾಗೂ ಕಲಾ ವಿಭಾಗದಲ್ಲಿ ಪಿ. ಜಿ ಡಿಪಾರ್ಟ್‌ಮೆಂಟ್ ಆಫ್ ಸೋಶ್ಯಿಯಲ್ ವರ್ಕ್ಸ್ ಉತ್ತಮ ವಿಭಾಗಗಳೆಂಬ ಪ್ರಶಸ್ತಿಗೆ ಭಾಜನವಾದವು.

ಕಾರ‍್ಯಕ್ರಮದಲ್ಲಿ ಆಂತರಿಕ ಗುಣಮಟ್ಟ ಭರವಸೆಯ ಕೋಶದ ಸಂಯೋಜಕ ಡಾ. ರಾಜೇಶ್ ಉಪಸ್ಥಿತರಿದ್ದರು. ಆಂತರಿಕ ಗುಣಮಟ್ಟ ಭರವಸೆಯ ಕೋಶದ ಕಾರ‍್ಯನಿರ್ವಾಹಕ ಸಮಿತಿಯ ಸದಸ್ಯೆ ಡಾ. ಶ್ರುತಿ ಪ್ರಶಸ್ತಿ ವಿಜೇತರ ಪಟ್ಟಿಯನ್ನು ವಾಚಿಸಿದರು. ಸಹಾಯಕ ಪ್ರಾದ್ಯಾಪಕಿ ನೌಸಿನ್ ಭಾನು ಕಾರ‍್ಯಕ್ರಮ ನಿರ್ವಹಿಸಿದರು.

Leave a Reply

Your email address will not be published. Required fields are marked *

3 × five =