‘ಆಳ್ವಾಸ್ ನಿರಾಮಯ’ ಮಲ್ಟಿಸ್ಪೆಶಾಲಿಟಿ ಆಯುಷ್ ಆಸ್ಪತ್ರೆ ಉದ್ಘಾಟನೆ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ:
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವೈದ್ಯಕೀಯ ಕಾಲೇಜುಗಳ ಭಾಗವಾಗಿ ಆರಂಭಗೊಂಡಿರುವ ‘ಆಳ್ವಾಸ್ ನಿರಾಮಯ’- ಆಯುಷ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಉದ್ಘಾಟನೆ ಇಂದು ನಡೆಯಿತು. ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಆವರಣದಲ್ಲಿ ನಿರ್ಮಾಣಗೊಂಡಿರುವ ಈ ನೂತನ ಆಸ್ಪತ್ರೆಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವರ ತಂದೆ ಶತಾಯುಷಿ ಆನಂದ ಆಳ್ವ ಉದ್ಘಾಟಿಸಿದರು.

Call us

Click here

Click Here

Call us

Call us

Visit Now

Call us

ಮೂಡುಬಿದಿರೆ ಹಾಗೂ ಸುತ್ತಲಿನ ಪ್ರದೇಶಗಳ ಜನರಿಗೆ ಉನ್ನತ ದರ್ಜೆಯ ವೈದ್ಯಕೀಯ ಸೌಲಭ್ಯಗಳನ್ನು ದೊರಕಿಸಿಕೊಡಬೇಕೆಂಬ ಉದ್ದೇಶದಿಂದ ‘ಆಳ್ವಾಸ್ ನಿರಾಮಯ’ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಯನ್ನು ಆರಂಭಿಸಲಾಗಿದೆ. ಆಯುರ್ವೇದ, 60 ಬೆಡ್‌ಗಳ ಈ ಆಸ್ಪತ್ರೆಯಲ್ಲಿ ನ್ಯಾಚುರೋಪತಿ ಹಾಗೂ ಹೋಮಿಯೋಪತಿ ಚಿಕಿತ್ಸಾ ಸೌಲಭ್ಯಗಳಿದ್ದು, ಜನಸಾಮಾನ್ಯರ ಕೈಗೆಟಕುವ ದರದಲ್ಲಿ ವೈದ್ಯಕೀಯ ಸೇವೆಯನ್ನು ನೀಡುವ ಆಶಯವನ್ನು ಹೊಂದಿದೆ. ಸುಸಜ್ಜಿತವಾದ ಒಳರೋಗಿ ಹಾಗೂ ಹೊರರೋಗಿ ವಿಭಾಗಗಳಿದ್ದು, ಒಳರೋಗಿಗಳಿಗೆ ಸಕಲ ಸೌಲಭ್ಯಗಳಿರುವ ಸ್ಪೆಷಲ್, ಡಿಲಕ್ಸ್ ಹಾಗೂ ಸೂಟ್ ರೂಮ್‌ಗಳು ಲಭ್ಯವಿರುತ್ತವೆ. ಚಿಕಿತ್ಸೆಗೆ ಬರುವ ಉದ್ಯೋಗಿಗಳಿಗೆ ‘ವರ್ಕ್ ಫ್ರಂ ಹಾಸ್ಪಿಟಲ್’ ವಿಶಿಷ್ಟ ಅವಕಾಶವಿದ್ದು, ವೈ ಫೈ ಕನೆಕ್ಷನ್, ವರ್ಕ್ ಸ್ಟೇಶನ್ ಹಾಗೂ ಒಳಾಂಗಣ ಕ್ರೀಡೆಗಳ ಸೌಕರ‍್ಯವಿದೆ. ವಿಶೇಷ ಡಯೆಟ್ ಸೆಕ್ಷನ್ ತಜ್ಞ ವೈದ್ಯರ ತಂಡ ಇಲ್ಲಿದ್ದು, ವಿವಿಧ ವಿಭಾಗಳಿಗೆ ವಿಶೇಷ ಕನ್ಸಲ್ಟನ್ಸಿ ಕೂಡ ಇದೆ.

ಆಯುರ್ವೇದ ವಿಭಾಗ
ಆಯುರ್ವೇದ ವಿಭಾಗದಲ್ಲಿ ಪಂಚಕರ್ಮ, ಕೇರಳೀಯ ಆಯುರ್ವೇದ ಚಿಕಿತ್ಸೆ, ಕಾಯಕಲ್ಪ (ರಿಜುವೆನೇಶನ್ ಮತ್ತು ಡಿಸ್ಟ್ರೆಸ್), ಅನುಶಾಸ್ತ್ರ ಚಿಕಿತ್ಸೆ (ಫಿಸ್ಟುಲಾ ಹಾಗೂ ಮೂಲವ್ಯಾಧಿಗಾಗಿ ಕ್ಷಾರಸೂತ್ರ ಚಿಕಿತ್ಸೆ, ಸಂಧಿವಾತಕ್ಕಾಗಿ ಅಗ್ನಿಕರ್ಮ, ಮೂಲವ್ಯಾಧಿಗಾಗಿ ಕ್ಷಾರಕರ್ಮ, ಚರ್ಮ ಹಾಗೂ ಸಂಧಿವಾತಕ್ಕಾಗಿ ರಕ್ತಮೋಕ್ಷಣ ಮುಂತಾದ ಪ್ಯಾರಾಸರ್ಜಿಕಲ್ ಚಿಕಿತ್ಸೆಗಳು), ಕ್ರಿಯಾಕಲ್ಪ (ಕಣ್ಣು, ಕಿವಿ, ಮೂಗು ಹಾಗೂ ಗಂಟಲು ಚಿಕಿತ್ಸೆ), ಗರ್ಭಿಣಿ ಪರಿಚರ‍್ಯ (ಪ್ರೆಗ್ನನ್ಸಿ ಕೇರ್), ಸೂಥಿಕ ಪರಿಚರ‍್ಯ (ಪೋಸ್ಟ್ ಡೆಲಿವರಿ ಕೇರ್), ಯೋಗ ಹಾಗೂ ಫಿಸಿಯೋಥೆರಪಿ ಚಿಕಿತ್ಸೆಗಳು ಲಭ್ಯವಿವೆ.

ಪಾರ್ಶ್ವವಾಯು ಹಾಗೂ ನ್ಯೂರೋಲಾಜಿಕಲ್ ಸಮಸ್ಯೆಗಳಿಗಾಗಿ ನ್ಯೂರೋಫಿಸಿಯೋಥೆರಪಿ, ಸಂಧಿವಾತದ ಸಮಸ್ಯೆಗಳಿಗಾಗಿ ಆರ್ಥೋಫಿಸಿಯೋಥೆರಪಿ, ಬೆನ್ನುಮೂಳೆಯ ಸಮಸ್ಯೆಗಳಿಗಾಗಿ ಸ್ಪೈನ್ ಕೇರ್, ಪಿಸಿಒಡಿ ಹಾಗೂ ಪ್ರಸೂತಿ ಸಂಬಂಧೀ ಚಿಕಿತ್ಸೆಗಳು, ಸ್ಥೂಲಕಾಯತೆ ಹಾಗೂ ಇತರೆ ಜೀವನಶೈಲಿ ಅಸ್ವಸ್ಥತೆಗಳಿಗಾಗಿ ವಿಶೇಷ ಆರೈಕೆ ನೀಡಲಾಗುತ್ತದೆ. ಆಪ್ತಸಮಾಲೋಚನೆ, ಸ್ಪೋರ್ಟ್ಸ್ ಮೆಡಿಸಿನ್, ಕಲರಿಮರ್ಮ ಚಿಕಿತ್ಸೆ ಹಾಗೂ ಇನ್‌ಫರ್ಟಿಲಿಟಿಗಾಗಿ ವಿಶೇಷ ಚಿಕಿತ್ಸಾ ವ್ಯವಸ್ಥೆ ಇದೆ. 1/3/7/15/21 ದಿನಗಳ ಪುನಶ್ಚೇತನ ಪ್ಯಾಕೇಜ್ (ರಿಜುವೆನೇಶನ್ ಪ್ಯಾಕೇಜ್) ಕೂಡ ಲಭ್ಯವಿದೆ.

ನ್ಯಾಚುರೋಪತಿ ವಿಭಾಗ
ನ್ಯಾಚುರೋಪತಿ ವಿಭಾಗದಲ್ಲಿ ಹೈಡ್ರೋಥೆರಪಿ, ಅಕ್ಯುಪಂಕ್ಚರ್, ಅಕ್ಯುಪ್ರೆಶರ್, ರಿಫ್ಲೆಕ್ಸಾಲಜಿ, ಡಯೆಟ್ ಥೆರಪಿ, ಮಸಾಜ್ ಥೆರಪಿ, ಸೋನ ಥೆರಪಿ, ಯೋಗ ಥೆರಪಿ ವಿಶೇಷ ಚಿಕಿತ್ಸೆಗಳ ಸೌಲಭ್ಯವಿದೆ. ಸ್ಥೂಲಕಾಯತೆ, ನಿದ್ರಾಹೀನತೆ, ಹೈಪರ್‌ಟೆನ್ಶನ್‌ಯಂತಹ ಜೀವನಶೈಲಿ ಅಸ್ವಸ್ಥತೆಗಳು, ಡಯಾಬಿಟಿಸ್, ಹೈಪರ್‌ಥೈರಾಯ್ಡಿಸಂನಂತಹ ಮೆಟಬಾಲಿಕ್ ಡಿಸ್‌ಆರ್ಡರ್, ಪಿಸಿಒಎಸ್, ಇನ್‌ಫರ್ಟಿಲಿಟಿನಂತಹ ಪ್ರಸೂತಿ ಸಮಸ್ಯೆಗಳು, ಸೋರಿಯಾಸಿಸ್, ಎಕ್ಸೆಮಾ ತರಹದ ಚರ್ಮರೋಗಗಳು, ರ‍್ಯೂಮಟಾಯ್ಡ್ ಆರ್ಥೈಟಿಸ್, ಬೆನ್ನುನೋವು ಮೊದಲಾದ ಸ್ನಾಯು ಹಾಗೂ ಮೂಳೆ ಸಂಬಂಧೀ ರೋಗಗಳು, ಸ್ಟ್ರೋಕ್, ಪ್ಯಾರಲೈಸಿಸ್ ಮುಂತಾದ ನ್ಯೂರೋಲಾಜಿಕಲ್ ಡಿಸ್‌ಆರ್ಡರ್‌ಗಳಿಗೆ ನ್ಯಾಚುರೋಪತಿ ಚಿಕಿತ್ಸಾ ವ್ಯವಸ್ಥೆ ಇದೆ. ಪೋಸ್ಟ್ ಕೋವಿಡ್ ಕೇರ್ ಹಾಗೂ ಇಮ್ಯುನಿಟಿ ಇಂಪ್ರೂವ್‌ಮೆಂಟ್ ವಿಭಾಗ ಕೂಡ ಇದ್ದು ಆರೋಗ್ಯವರ್ಧನೆಗೆ ಎಲ್ಲ ರೀತಿಯಲ್ಲೂ ಸಹಾಯಕವಾಗಲಿದೆ.

Call us

ಅಡ್ವಾನ್ಸ್ ಬುಕಿಂಗ್ ಅವಕಾಶವಿದ್ದು ಹೆಚ್ಚಿನ ಮಾಹಿತಿಗಾಗಿ 9742473545 ಗೆ ಸಂಪರ್ಕಿಸಬಹುದಾಗಿದೆ.

Leave a Reply

Your email address will not be published. Required fields are marked *

eleven + 9 =