ಆಳ್ವಾಸ್ ನುಡಿಸಿರಿಯಲ್ಲಿ ಕುಸ್ತಿಸಿರಿ ಮೆರಗು

Call us

Call us

ಮೂಡುಬಿದಿರೆ: ರಾಜ್ಯ ಮಟ್ಟದ ಮುಕ್ತ ಪುರುಷರ ಹಾಗೂ ಮಹಿಳೆಯರ ಕುಸ್ತಿಪಂದ್ಯಾಟವು ಕು.ಶಿ. ಹರಿದಾಸ ಭಟ್ಟ ವೇದಿಕೆಯಲ್ಲಿ ಅತ್ಯಂತ ನಡೆಯಿತು. ಈ ಕುಸ್ತಿ ಪಂದ್ಯಾಟದಲ್ಲಿ ರಾಷ್ಟ್ರೀಯ ಮಟ್ಟಗಳಲ್ಲಿ ಭಾಗವಹಿಸಿದ ಕ್ರೀಡಾಪಟುಗಳು ತಮ್ಮ ಪ್ರತಿಭೆಯನ್ನು ತೋರ್ಪಡಿಸಿ ಪ್ರಶಸ್ತಿಗಾಗಿ ಜಿದ್ದಾ ಜಿದ್ದಿನ ಹೋರಾಟ ನಡೆಸಿದರು. ನುಡಿಸಿರಿ ಇತಿಹಾಸದಲ್ಲಿಯೆ ಪ್ರಥಮ ಬಾರಿಗೆ ಏರ್ಪಡಿಸಿದ ಕುಸ್ತಿ ಪಂದ್ಯಾಟ ಮುಖ್ಯ ಆಕರ್ಷಣೆಯಾಗಿತ್ತು. ಕ್ರೀಡಾ ಪ್ರೇಮಿಗಳು ತುದಿಗಾಲಿನಲ್ಲಿ ನಿಲ್ಲುವಂತಹ ರೋಚಕ ಕ್ಷಣಗಳು ಕಂಡು ಬಂದವು. ಅನುಭವಿ ಕ್ರೀಡಾಪಟುಗಳು ತಮ್ಮ ಚಾಣಾಕ್ಷತನ ಪ್ರದರ್ಶಿಸಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದರು. ಅಂತರಾಷ್ಟ್ರೀಯ ಮಟ್ಟದಲ್ಲಿ ಕಾಣಬಹುದಾದಂತಹ ರೋಚಕ ಕ್ಷಣಗಳಿಗೆ ಹರಿದಾಸ ಭಟ್ಟವೇದಿಕೆ ಸಾಕ್ಷಿಯಾಯಿತು. ವಿದ್ಯಾರ್ಥಿಗಳು, ಹಿರಿಯರು, ಹಾಗೂ ಮಹಿಳೆಯರು ಹೆಚ್ಚು ಸಂಖ್ಯೆಯಲ್ಲಿ ಆಗಮಿಸಿ ಕುಸ್ತಿ ಸಿರಿಯ ವೈಭವನ್ನು ಸವಿದರು. ಬಾಲಕಿಯರ ಕಲಾತ್ಮಕ ಶೈಲಿಯ ಪ್ರದರ್ಶನ ವೀಕ್ಷಕರ ಹೃದಯ ಬಡಿತವನ್ನು ಹೆಚ್ಚಿಸಿತು.

Call us

Call us

Call us

ಕುಸ್ತಿ ಸಿರಿಯಲ್ಲಿ ಅತ್ಯಂತ ಪ್ರಮುಖವಾದ ಪ್ರಶಸ್ತಿಗಳಾದ ಆಳ್ವಾಸ್ ನುಡಿಸಿರಿ ಕೇಸರಿ ೨೦೧೬, ಪುರುಷರ ವಿಭಾಗದಲ್ಲಿ ಆಳ್ವಾಸ್ ನುಡಿಸಿರಿ ಕುಮಾರ ೨೦೧೬, ಮಹಿಳೆಯರ ವಿಭಾಗದಲ್ಲಿ ಆಳ್ವಾಸ್ ನುಡಿಸಿರಿ ಕುಮಾರಿ ೨೦೧೬ ಪ್ರಶಸ್ತಿಯನ್ನು ನಿಗದಿ ಪಡಿಸಲಾಗಿತ್ತು. ಕುಸ್ತಿ ಪಂದ್ಯಾಟದ ಮುಖ್ಯ ಆಕರ್ಷಣೆಯಾಗಿ ದೇಶದ ಸಿಪಾಯಿ ಹುದ್ದೆ ಹಾಗೂ ವಿವಿಧ ರಂಗದಲ್ಲಿ ಉದ್ಯೋಗದಲ್ಲಿರುವ ಆಟಗಾರರು ಭಾಗವಹಿಸಿ ವೀಕ್ಷಕರಿಗೆ ಕುಸ್ತಿಯ ರಸದೌತಣವನ್ನು ನೀಡಿದರು. ಅಂತಿಮವಾಗಿ ಕುಸ್ತಿ ಪಂದ್ಯಾಟದಲ್ಲಿ ಆಳ್ವಾಸ್ ನುಡಿಸಿರಿ ಕೇಸರಿಯನ್ನು ಎಸ್ ಟಿ ಸಿ ಧಾರವಡದ ರಿಯಾಝ್ ಆರ್ ಮುಲ್ಲಾ ಪಡೆದರೆ ಬೆಂಗಳೂರಿನ ಎಮ್ ಇ ಜಿಯ ನಾಗರಾಜ್ ಎನ್ ಆಳ್ವಾಸ್ ನುಡಿಸಿರಿ ಕುಮಾರ ಹಾಗೂ ಆಳ್ವಾಸ್ ನುಡಿಸಿರಿ ಕುಮಾರಿ ಪ್ರಶಸ್ತಿಯನ್ನು ಆಳ್ವಾಸ್‌ನ ಆತ್ಮಶ್ರೀಯವರು ಪಡೆದುಕೊಂಡರು.

Call us

Call us

Leave a Reply

Your email address will not be published. Required fields are marked *

eleven − four =