ಆಳ್ವಾಸ್ ವಿದ್ಯಾರ್ಥಿಸಿರಿ : ಉದ್ಘಾಟಕರಾಗಿ ಡಾ. ಬಿ. ಜಯಶ್ರೀ ಆಯ್ಕೆ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ
ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ನಡೆಸುವ ವಿದ್ಯಾರ್ಥಿ ಸಾಹಿತ್ಯ ಸಂಸ್ಕøತಿ ಸಮ್ಮೇಳನ ಆಳ್ವಾಸ್ ವಿದ್ಯಾರ್ಥಿಸಿರಿ 2016 ಇದರ ಉದ್ಘಾಟನೆಗೆ ಖ್ಯಾತ ರಂಗಭೂಮಿ ಕಲಾವಿದೆ ಡಾ. ಬಿ. ಜಯಶ್ರೀ ಆಗಮಿಸಲಿದ್ದಾರೆ. ನವೆಂಬರ್ 179.30ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಎಂ. ಮೋಹನ ಆಳ್ವ ತಿಳಿಸಿದ್ದಾರೆ. ಸಮ್ಮೇಳನ ಅಧ್ಯಕ್ಷತೆಯನ್ನು ಎಸ್.ಡಿ.ಎಂ. ಪ್ರೌಢಶಾಲೆ ಬೆಳ್ತಂಗಡಿಯ ವಿದ್ಯಾರ್ಥಿನಿ ಕುಮಾರಿ ಅನನ್ಯ ವಹಿಸಲಿದ್ದಾರೆ.

Click Here

Call us

Call us

ಆಳ್ವಾಸ್ ವಿದ್ಯಾರ್ಥಿ ಸಿರಿ ಪುರಸ್ಕಾರವನ್ನು ಪ್ರಧಾನ ಮಾಡಲಾಗುವುದು. ಪ್ರಸಿದ್ಧ ಮಕ್ಕಳ ಸಾಹಿತಿ ಸಂಘಟಕ ಕಾಸರಗೋಡಿನ ವಿ.ಬಿ.ಕುಳವರ್ಮ ಕುಂಬಳೆ, ಮಂಗಳೂರಿನ ಅನೌಪಚಾರಿಕ ಶಿಕ್ಷಣ ಪ್ರಯೋಗ ಕೇಂದ್ರವಾದ ಗೋಪಾಡ್ಕರ್ ಸ್ವರೂಪ ಅಧ್ಯಯನ ಕೇಂದ್ರ ಹಾಗೂ ಬಾಲ ಪ್ರತಿಭೆ ಚಿಕ್ಕಮಗಳೂರು ಸೈಂಟ್ ಮೇರೀಸ್ ಇಂಟರ್‍ನ್ಯಾಷನಲ್ ಶಾಲೆಯ ವೈಷ್ಣವಿ ಎನ್.ರಾವ್ ಇವರಿಗೆ ಈ ಬಾರಿಯ ಆಳ್ವಾಸ್ ವಿದ್ಯಾರ್ಥಿಸಿರಿ ಪುರಸ್ಕಾರವನ್ನು ನೀಡಲಾಗುವುದು.

Click here

Click Here

Call us

Visit Now

ಸಮ್ಮೇಳನದಲ್ಲಿ ಬೆಂಗಳೂರಿನ ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಜಾನಕಿ ಸುಂದರೇಶ್ ಇವರು ಯುವಜನತೆ ಮತ್ತು ಸವಾಲುಗಳು ಎನ್ನುವ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿನಿ ಪೂರ್ಣಿಮ ಆರ್. ಜೈನ್ ಇವರು ಮರೆಯಾಗುತ್ತಿರುವ ಮನೆ ಸಾಹಿತ್ಯ ಎಂಬ ವಿಷಯದ ಕುರಿತು, ಸುಳ್ಯ ಅರಂತೋಡಿನ ಎನ್. ಎಂ. ಪಿ.ಯು ಕಾಲೇಜಿನ ಪೂಜಾ ಕೆ.ಎಂ. ಇವರು ಸ್ವಚ್ಛ ಭಾರತ ವಿದ್ಯಾರ್ಥಿಗಳ ಪಾತ್ರ ಎಂಬ ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ.

ಸಂಜೆ 4 ಗಂಟೆಗೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜಿನ ಸುಶ್ಮಿತಾ ಕೆ. ರೈ ಸಮಾರೋಪ ಭಾಷಣ ಮಾಡಲಿದ್ದಾರೆ. ಸಮ್ಮೇಳನದಲ್ಲಿ ವಿವಿಧ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದೆ.

Leave a Reply

Your email address will not be published. Required fields are marked *

twenty − four =