ಆಳ್ವಾಸ್ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದಿಂದ ಪತ್ರಿಕೋದ್ಯಮ ಕೌಶಲ್ಯಗಳ ಕುರಿತು ಕಾರ್ಯಗಾರ

Call us

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ: ಆಳ್ವಾಸ್ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ಸ್ನಾತಕೋತ್ತರ ವಿಭಾಗವು ಮೂಡುಬಿದಿರೆಯ ಶ್ರೀಧವಳಾ ಕಾಲೇಜಿನ ಎನ್‌ಎಸ್‌ಎಸ್ ಘಟಕದ ಸಹಯೋಗದಲ್ಲಿ ಪತ್ರಿಕೋದ್ಯಮ ಕೌಶಲ್ಯಗಳ ಕುರಿತು ಒಂದು ದಿನದ ಕಾರ್ಯಗಾರವನ್ನು ಆಯೋಜಿಸಲಾಯಿತು.

Call us

Click Here

Click here

Click Here

Call us

Visit Now

Click here

ಕಾರ್ಯಗಾರವನ್ನು ಉದ್ಘಾಟಿಸಿದ ಆಳ್ವಾಸ್ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ಸ್ನಾತಕೋತ್ತರ ವಿಭಾಗದ ಸಂಯೋಜಕ ಪ್ರಸಾದ್ ಶೆಟ್ಟಿ ಮಾತನಾಡಿ, ಪತ್ರಿಕೋದ್ಯಮವೆಂಬುದು ವಿಪುಲ ಅವಕಾಶಗಳಿರುವ ಕ್ಷೇತ್ರ. ನವಯುಗದ ಕೌಶಲ್ಯಗಳನ್ನು ತಮ್ಮ ಕಾರ‍್ಯ ಕ್ಷೇತ್ರದಲ್ಲಿ ಆಳವಡಿಸಿಕೊಂಡರೆ ಅತ್ಯಂತ ಹೆಚ್ಚು ಬೇಡಿಕೆ ಇರುವ ವ್ಯಕ್ತಿಗಳಾಗಿ ನಾವು ಬೆಳಯಬಹುದು. ಇಂತಹ ವಿಭಿನ್ನ ಕ್ಷೇತ್ರಕ್ಕೆ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಸ್ಥೆವಹಿಸಿ ಬರುವಂತಾಗಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀಧವಳಾ ಕಾಲೇಜಿನ ಪ್ರಾಂಶುಪಾಲ ಡಾ. ಸುದರ್ಶನ್‌ಕುಮಾರ್ ಮಾತನಾಡಿ, ಭಾರತದಂತಹ ಪ್ರಜಾಸತ್ತಾತ್ಮಕ ರಾಷ್ಟ್ರದಲ್ಲಿ ಪತ್ರಿಕೋದ್ಯಮ ಕ್ಷೇತ್ರಕ್ಕೆ ಅದರದ್ದೇ ಆದ ಮಹತ್ವವಿದೆ. ಇದು ಸಾಕಷ್ಟು ಸದವಕಾಶಗಳನ್ನು ಒದಗಿಸುವ ಕ್ಷೇತ್ರವಾಗಿರುವುದರಿಂದ ವಿದ್ಯಾರ್ಥಿಗಳು ಇದರ ಕಡೆಗೆ ಗಮನಹರಿಸಬೇಕು. ಈ ಹಿನ್ನೆಲೆಯಲ್ಲಿ ಪತ್ರಿಕೋದ್ಯಮ ಕೌಶಲ್ಯಗಳನ್ನು ಒದಗಿಸುವ ಈ ಕಾರ್ಯಗಾರ ಪ್ರಾಮುಖ್ಯತೆ ಪಡೆದಿದೆ’ ಎಂದರು.

ಕಾರ್ಯಗಾರದಲ್ಲಿ ಪತ್ರಿಕೋದ್ಯಮದ ವಿವಿಧ ಕೌಶಲ್ಯಗಳಾದ ವರದಿಗಾರಿಕೆ, ಸಾಮಾಜಿಕ ಜಾಲತಾಣಗಳ ನಿರ್ವಹಣೆ, ವಿಕಿಪೀಡಿಯಾ ಸಂಪಾದನೆ, ಕಾರ್ಟೂನಿಂಗ್, ಫೋಟೋಗ್ರಫಿ ಹಾಗೂ ನ್ಯೂಸ್ ಆಂಕರಿಂಗ್-ವಿಜೆ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಯಿತು. ವಿವಿಧ ಪ್ರಾಯೋಗಿಕ ಚಟುವಟಿಕೆಗಳ ಮೂಲಕ ತರಬೇತಿ ನೀಡಲಾಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಆಳ್ವಾಸ್ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ಸ್ನಾತಕೋತ್ತರ ವಿಭಾಗದ ಉಪನ್ಯಾಸಕರಾದ ಡಾ.ಸಫಿಯಾ, ಅಕ್ಷಯ್ ರೈ, ಶ್ರೀಗೌರಿ ಎಸ್.ಜೋಶಿ ಹಾಗೂ ವಿದ್ಯಾರ್ಥಿಗಳಾದ ದುರ್ಗಾಪ್ರಸನ್ನ, ತೇಜಸ್ವಿನಿ ಹಾಗೂ ಹನುಮಂತಗೌಡ ಭಾಗವಹಿಸಿದ್ದರು.

ಕಾರ್ಯಕ್ರಮದಲಿ ಕಾರ್ಯಗಾರದ ಸಂಯೋಜಕರಾದ ಆಳ್ವಾಸ್ ಕಾಲೇಜಿನ ಉಪನ್ಯಾಸಕ ಡಾ.ಶ್ರೀನಿವಾಸ ಹೊಡೆಯಾಲ, ಶ್ರೀಧವಳಾ ಕಾಲೇಜಿನ ಎನ್‌ಎಸ್‌ಎಸ್ ಪ್ರೋಗ್ರಾಮ್ ಆಫಿಸರ್‌ಗಳಾದ ರಾಹುಲ್ ಹಾಗೂ ಸಹನಾ ಭಂಡಾರ್‌ಕರ್ ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು. ಕಾರ‍್ಯಕ್ರಮವನ್ನು ವಿದ್ವತ್ ನಿರ್ವಹಿಸಿ, ಆಶಿಷ್ ಸ್ವಾಗತಿಸಿ, ಸುಮೇಧಾ ವಂದಿಸಿದರು. ಮಾಲತಿ ಹಾಗೂ ತಂಡದವರು ಪ್ರಾರ್ಥನೆಯನ್ನು ನಿರ್ವಹಿಸಿದರು.

Call us

Leave a Reply

Your email address will not be published. Required fields are marked *

nineteen − 8 =